ದೇಗುಲ ಪುನರ್‌ ನಿರ್ಮಾಣಕ್ಕೆ ನೀಡುವ ದಾನ ಶಾಶ್ವತ, ಬಹುದೊಡ್ಡ ಪುಣ್ಯ: ಡಿ. ವೀರೇಂದ್ರ ಹೆಗ್ಗಡೆ

Upayuktha
0

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ- 7ನೇ ದಿನದ ಧಾರ್ಮಿಕ ಸಭೆ



ಕುಲಶೇಖರ: ದೇಗುಲಗಳ ಪುನರ್ ನಿರ್ಮಾಣದ ಸತ್ಕಾರ್ಯಕ್ಕೆ ನೀಡುವ ದಾನ ಬಹುದೊಡ್ಡ ಶಾಶ್ವತ ಕೊಡುಗೆಯಾಗಿದೆ. ಸಂಪತ್ತು ಎಷ್ಟಿದೆ ಅನ್ನುವುದಕ್ಕಿಂತ ದಾನ ಎಷ್ಟು ಮಾಡಿದ್ದಾರೆ ಅನ್ನುವುದು ಮುಖ್ಯ. ನೆರಳು ಹಿಂಬಾಲಿಸಿದಂತೆ ಪುಣ್ಯವು ನಶಿಸಿ ಹೋಗುವುದಿಲ್ಲ. ಶರೀರ ಇರುವುದೇ ಪರೋಪಕಾರಕ್ಕೆ. ಪರೋಪಕಾರದ ಭಾವನೆ ಹೆಚ್ಚಾಗಬೇಕು, ವಿಷ್ಣು ವಂಶವಾಗಿರುವ ವೀರನಾರಾಯಣ ದೇವಾಲಯ ಉತ್ತಮವಾಗಿ ರೂಪುಗೊಂಡಿದ್ದು, ದುಶ್ಚಟ, ದುರಾಸೆ, ಅನಿಷ್ಠಪ್ರಜ್ಞೆಗಳು ದೂರವಾಗಿ ಸಾತ್ವಿಕತೆ, ಧರ್ಮಸಂಸ್ಥಾಪನೆಯಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.


ಅವರು ಮೇ 14ರಿಂದ ಮೊದಲ್ಗೊಂಡು 25ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಮಾತನಾಡಿದರು.


ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.


ಮಂಗಳೂರು ಮೆಸ್ಕಾಂನ ಆಡಳಿತ ನಿರ್ದೇಶಕ ಮಂಜಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಉದ್ಯಮಿ ಜಯಕೃಷ್ಣ ಎ. ಶೆಟ್ಟಿ ತೋನ್ಸೆ, ಪ್ರವೀಣ್ ಭೋಜ ಶೆಟ್ಟಿ ಮುಂಬೈ, ಮುಂಬೈ ಉದ್ಯಮಿ ಸುನೀಲ್ ಆರ್. ಸಾಲ್ಯಾನ್, ಉದ್ಯಮಿ ಯಜ್ಞೇಶ್ ಬರ್ಕೆ, ಉದ್ಯಮಿ ಸುಚೀಂದ್ರ ಅಮೀನ್, ದಿವಾಕರ ಮೂಲ್ಯ ಬೆಂಗಳೂರು, ಉದ್ಯಮಿ ಕೆ.ಆರ್. ರಾಜಶೇಖರ್, ಉದ್ಯಮಿ ಟಿ.ಕೆ. ಮೂಲ್ಯ ಬೆಳಗಾವಿ, ದೇವದಾಸ ಎಲ್. ಕುಲಾಲ್ ಮುಂಬೈ, ಪುರುಷೋತ್ತಮ ಚೇಂಡ್ಲ ಬೆಂಗಳೂರು, ಕೃಷ್ಣಪ್ಪ ಕಣ್ವತೀರ್ಥ ಬೆಂಗಳೂರು, ಎಂ.ಪಿ. ಬಂಗೇರ, ಜಯರಾಜ್ ಪ್ರಕಾಶ್, ಮಾಲತಿ ಜಯ ಅಂಚನ್ ಮುಂಬೈ, ಕುಲಾಲ-ಕುಂಬಾರ ಯುವವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಪರಂಗಿಪೇಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಪಿ. ನಾರಾಯಣ ಕುಲಾಲ್, ನರಿಕೊಂಬು ಕುಲಾಲ ಸಂಘದ ಕೃಷ್ಣ ಕುಲಾಲ್, ವಗ್ಗ ಕುಲಾಲ ಸಂಘದ ಪುರುಷೋತ್ತಮ ಹೆರೊಟ್ಟು, ಕುಲಾಲ ಮಾತೃಸಂಘದ ಉಪಾಧ್ಯಕ್ಷ ದಯಾನಂದ ಅಡ್ಯಾರ್, ಸಂಜೀವ ಎನ್. ಬಂಗೇರ ಮುಂಬೈ, ಮಲ್ಲಿಕಾ ಎಸ್. ಮೂಲ್ಯ ಮುಂಬೈ, ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್, ಮಾಧವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.


ನಮೃತಾ ಎಲ್. ಕುಲಾಲ್ ಪ್ರಾರ್ಥಿಸಿ, ಮುಂಬೈ ಸಮಿತಿ ಸಂಚಾಲಕ ದಿನೇಶ್ ಕುಲಾಲ್ ಸ್ವಾಗತಿಸಿ, ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು. 



ನಮ್ಮ ನಂಬಿಕೆ, ವಿಶ್ವಾಸದ ಮೇಲೆಭಗವಂತನ ಅಸ್ತಿತ್ವ ನೆಲೆನಿಂತಿದೆ. ಮನುಷ್ಯ ಜೀವನದಲ್ಲಿ ತ್ಯಾಗ ಬೇಕು. ತ್ಯಾಗ, ಧಾನದಿಂದ ಲಭಿಸುವ ಸುಖ ಬೇರೆಲ್ಲೂ ಸಿಗುವುದಿಲ್ಲ. ಇಂತಹ ಮನೋಭಾವ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ.  ಜೀವನದ ಉಲ್ಲಾಸವೇ ಭಗವಂತನ ಅನುಗ್ರಹ. ಭಕ್ತಿಯ ಬಂಧ ಇದ್ದರೆ ದೇವರು ಸರ್ವಸ್ವವನ್ನು ಕರುಣಿಸುತ್ತಾನೆ.

- ವಜ್ರದೇಹಿ ಶ್ರೀ


ಭಾನುವಾರ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆ

ಮೇ 21೧ರಂದು ಬೆಳಿಗ್ಗೆ 9.10ರ ಮಿಥುನಲಗ್ನ ಸುಮುಹೂರ್ತದಲ್ಲಿ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆ ಜರಗಲಿದೆ. ಬಳಿಕ ೧೦೮ ಕಾಯಿ ಗಣಹೋಮ, ಮಧ್ಯಾಹ್ನ 12.23ರ ಸಿಂಹಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಜರಗಲಿದೆ. ಸಂಜೆಯ ಧಾರ್ಮಿಕಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು ಶುಭಾಶಂಸನೆಗೈಯ್ಯಲಿದ್ದು, ಕ್ಷೇತ್ರದ ತಂತ್ರಿಗಳಾದ ವೇ|ಮೂ| ಅನಂತ ಉಪಾಧ್ಯಾಯರು ಆಶೀರ್ವಚನ ನೀಡಲಿದ್ದಾರೆ. ಎಸ್. ಆರ್. ಬಂಜನ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ವೇದವ್ಯಾಸ ಕಾಮತ್ ಮತ್ತಿತರರು ಭಾಗವಹಿಸಲಿದ್ದಾರೆ. ರಾತ್ರಿ ಶಿವದೂತೆ ಗುಳಿಗೆ ನಾಟಕ ಜರಗಲಿದೆ.


ಸಮ್ಮಾನ:

ಕ್ಷೇತ್ರದ ಮಹಾದಾನಿಗಳಾದ ಸುನಿಲ್ ಆರ್. ಸಾಲ್ಯಾನ್ ದಂಪತಿ, ಯಜ್ಞೇಶ್ ಬರ್ಕೆ, ಸುಚೀಂದ್ರ ಅಮೀನ್, ದಿವಾಕರ ಮೂಲ್ಯ ದಂಪತಿ, ಪುರುಷೋತ್ತಮ ಕುಲಾಲ್ ದಂಪತಿ, ಸಾವಿತ್ರಿ ಮಹಾಬಲ ಹಾಂಡ ದಂಪತಿ, ದಾಮೋದರ ಎ. ದಂಪತಿ ಅವರನ್ನು ಸಮ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top