ಬೆಂಗಳೂರು: ಪ್ರೇಕ್ಷಕರ ಮನಗೆದ್ದ ದೀಪ್ತಿ ಗಾಯನ

Chandrashekhara Kulamarva
0

 

ಬೆಂಗಳೂರು: ಮಲ್ಲೇಶ್ವರಂ 15ನೇ ಅಡ್ಡರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜರುಗುತ್ತಿರುವ 28ನೇ 'ಶ್ರೀ ನರಸಿಂಹ ಜಯಂತಿ ಸಂಗೀತೋತ್ಸವ' ಕಾರ್ಯಕ್ರಮದಲ್ಲಿ ಮೇ 11, ಗುರುವಾರದಂದು ಕು|| ದೀಪ್ತಿ ಮೋಹನ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 


ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಮತ್ತು ವಿದ್ವಾನ್ ಮುರಳಿ ನಾರಾಯಣರಾವ್ ಸಹಕರಿಸಿದರು. ದೀಪ್ತಿ ಹಾಡಿದ ಪ್ರತಿಯೊಂದು ಕೀರ್ತನೆಗಳೂ ನೆರೆದಿದ್ದ ಶ್ರೋತೃಗಳ ಮನಸೆಳೆದಿತ್ತು. 


ಕಾರ್ಯಕ್ರಮದ ಕೊನೆಯಲ್ಲಿ "ಸಿಂಹರೂಪನಾದ ಶ್ರೀಹರಿ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ  ಪಟ್ಟಾಭಿರಾಮ್ ಅವರು ವಂದನಾರ್ಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top