ಕುಲಶೇಖರ ವೀರನಾರಾಯಣ ಕ್ಷೇತ್ರದ ಬ್ರಹ್ಮಕಲಶದ ಸಂಭ್ರಮ

Upayuktha
0

ಬರ್ಕಿ ಯಜ್ಞೇಶ್ ಮೂಲ್ಯ,ಸುಚೀಂದ್ರ ಅಮೀನ್ ರಿಂದ 20 ಲಕ್ಷದ ರಥ ಸಮರ್ಪಣೆ

 


ಕುಲಶೇಖರ: ಮಂಗಳೂರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶದ ಸಂಭ್ರಮದಲ್ಲಿದ್ದು, ಇದಕ್ಕೆ ಮಹಾದಾನಿಗಳ ಕೊಡುಗೆ ಅವಿಸ್ಮರಣೀಯವಾಗಿದೆ. ಸಾಕಷ್ಟು ದಾನಿಗಳು ದೇಗುಲದ ಪುನರ್ ನಿರ್ಮಾಣದಲ್ಲಿ ಕೈಜೋಡಿಸಿದ್ದು, ಅವರೆಲ್ಲರಿಗೂ ನಮ್ಮ ಆರಾಧ್ಯ ಕುಲದೇವರು ಆಶೀರ್ವದಿಸಲಿ ಎಂದು ಆಡಳಿತ ಸಮಿತಿಗಳು ಆಶಯ ವ್ಯಕ್ತಪಡಿಸಿದೆ. ಕೆಲವು ಮಹಾದಾನಿಗಳ ವಿವರನ್ನು ಇಲ್ಲಿ ನೀಡಲಾಗಿದೆ. 


ರಥ ಸಮರ್ಪಣೆ:

ಬರ್ಕೆ ಫ್ರೆಂಡ್ಸ್‌ನ ಗೌರವಾಧ್ಯಕ್ಷರಾದ ಯಜ್ಞೇಶ್ ಬರ್ಕೆ ಹಾಗೂ ಅಧ್ಯಕ್ಷರಾಗಿರುವ ಸುಚೀಂದ್ರ ಅಮೀನ್ ಅವರು ರೂ. 20 ಲಕ್ಷ ವೆಚ್ಚದಲ್ಲಿ ಶ್ರೀ ದೇವರಿಗೆ ನೂತನ ಆಕರ್ಷಕ ರಥವನ್ನು ಸಮರ್ಪಿಸಿದಿದ್ದಾರೆ.


ಪ್ರಧಾನ ಗೋಪುರ 

ರೂ. ೨೫ ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಖಪ್ರಧಾನ ಗೋಪುರದ ವೆಚ್ಚವನ್ನು ಮುಂಬೈ ಉದ್ಯಮಿ ಸುನಿಲ್‌ ರಾಜು ಸಾಲ್ಯಾನ್ ಮತ್ತು ದೇವಕಿ ಎಸ್. ಸಾಲ್ಯಾನ್ ನೀಡಿದ್ದಾರೆ.


ಮಾರ್ಬಲ್ ಅಳವಡಿಕೆ 

ಸುತ್ತುಪೌಳಿಯ ಒಳಾಂಗಣಕ್ಕೆ ರೂ. ೧೫ ಲಕ್ಷ ವೆಚ್ಚದಲ್ಲಿ ಮಾರ್ಬಲ್ ಅಳವಡಿಸಲಾಗಿದ್ದು,  ಇದರ ವೆಚ್ಚವನ್ನು ಬೆಂಗಳೂರಿನ ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್‌ನ ಮಾಲಕ ಉದ್ಯಮಿ ದಿವಾಕರ ಮೂಲ್ಯ ಅವರು ನೀಡಿದ್ದಾರೆ.


ಬೆಳ್ಳಿ ಕವಚ ಪಲ್ಲಕ್ಕಿ 

ಶ್ರೀ ವೀರನಾರಾಯಣ ದೇವರ ಬೆಳ್ಳಿ ಕವಚದ ಪಲ್ಲಕ್ಕಿಯನ್ನು ರೂ. ೧೦ ಲಕ್ಷ ವೆಚ್ಚದಲ್ಲಿ  ಮುಂಬೈ ಉದ್ಯಮಿ ಅಶೋಕ್ ಮೂಲ್ಯ ಥಾಣೆ ಅವರು ಕೊಡುಗೆಯಾಗಿ ನೀಡಿದ್ದಾರೆ. ಅತ್ಯಾಕರ್ಷಕ ಪಲ್ಲಕ್ಕಿಯನ್ನು ಕೋಟೇಶ್ವರದ ಗೋಪಾಲ ಆಚಾರ್ಯ ನಿರ್ಮಿಸಿದ್ದಾರೆ.

 

ವಸಂತ ಮಂಟಪ 

ನೂತನವಾಗಿ ನಿರ್ಮಿಸಿದ 10 ಲಕ್ಷ ರೂಪಾಯಿ ವೆಚ್ಚದ ವಸಂತ ಮಂಟಪವನ್ನು ಮುಂಬೈಯ ಡಾಕ್ಟರ್ ಸುರೇಖಾ ರತನ್ ಕುಲಾಲ್ ರವರು ನೀಡಿದ್ದಾರೆ,


ಸುತ್ತುಪೌಳಿಯ ಮಹಡಿಗೆ ಹಂಚು 

ವೀರನಾರಾಯಣ ದೇವಸ್ಥಾನ ಸುತ್ತುಪೌಳಿಯ ಮಹಡಿಯ ಹಂಚನ್ನು ರೂ. ೮.೫೦ ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಂಟ್ವಾಳದ ದಿ. ಬಾಬು ಸಾಲ್ಯಾನ್‌ರವರ ಸವಿನೆನಪಿಗೆ ಅವರ ಪುತ್ರರಾದ ಗಿರೀಶ್ ಬಿ. ಸಾಲ್ಯಾನ್ ಮತ್ತು ಡಾ. ಹರೀಶ್ ಬಿ. ಸಾಲ್ಯಾನ್ ಕೊಡುಗೆಯಾಗಿ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top