ಸಿಬಿಎಸ್‍ಸಿ 10ನೇ ತರಗತಿ ಫಲಿತಾಂಶ: ಆಳ್ವಾಸ್ ಶೇ 100 ಫಲಿತಾಂಶ - ಹ್ಯಾಟ್ರಿಕ್ ಸಾಧನೆ

Upayuktha
0

ವಿದ್ಯಾಗಿರಿ (ಮೂಡುಬಿದಿರೆ): ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಕೇಂದ್ರೀಯ ಶಾಲೆಯು ಸತತ ಮೂರನೇ ವರ್ಷವೂ ಶೇ 100 ಫಲಿತಾಂಶ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. 


173 ಬಾಲಕರು ಮತ್ತು 71 ಬಾಲಕಿಯರು ಸೇರಿದಂತೆ ಒಟ್ಟು 244 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. 


8 ವಿದ್ಯಾರ್ಥಿಗಳು ಶೇ 95ಕ್ಕಿಂತಲೂ ಅಧಿಕ ಅಂಕ ಪಡೆದಿದ್ದಾರೆ. ನಿರೀಕ್ಷಾ 480 (ಶೇ 96), ಪ್ರಜ್ವಲ್ ಕಾಖಂಡ್ಕಿ 479 (ಶೇ95.80), ಅಹ್ಮದ್ ಸಾಜಿಲ್ 478 (ಶೇ 95.60), ಧನುಶ್ ಸಂಜೀವ ಚಿತ್ರಾಕ್ಷಿ 478 (ಶೇ 95.60), ಆರೋಹಣ್ ಸಿದ್ಧಾರ್ಥ ಕುಮ್ತೇಕರ್ 477 (ಶೇ 95.40), ವಿಕಾಸ್ ಗುಂಡೂರಾವ್ ಶಿಂಗಡಿ 477 (ಶೇ 95.40), ಸಿಯಾ ಜೆ ಕರ್ಕೇರ 475 (ಶೇ 95),  ಸಾಕ್ಷಿ ಆರ್.ಪೈ 475 (ಶೇ 95) ಶೇ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 


ಶೇ 90 ಹಾಗೂ ಅಧಿಕ ಅಂಕ 25, ಶೇ 80 ಹಾಗೂ ಅಧಿಕ 45, ಶೇ 70 ಹಾಗೂ ಅಧಿಕ 69, ಶೇ 60 ಹಾಗೂ ಅಧಿಕ 54, ಶೇ 50 ಹಾಗೂ ಅಧಿಕ 40 ವಿದ್ಯಾರ್ಥಿಗಳು ಪಡೆದಿದ್ದಾರೆ. 


ಪ್ರಾಚಾರ್ಯ ಮೊಹಮ್ಮದ್ ಶಫಿ ಶೇಕ್, ಸಹಾಯಕ ಆಡಳಿತ ಅಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಉಪ ಪ್ರಾಚಾರ್ಯರಾದ ಶೈಲಜಾ ರಾವ್ ಇದ್ದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top