ಬೆಂಗಳೂರು: ಜಗದ್ವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನ ವತಿಯಿಂದ ಪ್ರಕಟಗೊಳ್ಳುವ ಸಚಿತ್ರ ಆಧ್ಯಾತ್ಮಿಕ ಮಾಸಪತ್ರಿಕೆ 'ಸಪ್ತಗಿರಿ 'ಯ ಕನ್ನಡ ಭಾಷಾ ವಿಭಾಗದ ಸಂಪಾದಕೀಯ ಸಲಹಾ ಮಂಡಳಿಯ ಸದಸ್ಯರಾಗಿ ಬೆಂಗಳೂರಿನ ಹೆಸರಾಂತ ಲೇಖಕ, ಆಧ್ಯಾತ್ಮಿಕ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ನೇಮಕಗೊಂಡಿದ್ದಾರೆ.
ಈ ಪತ್ರಿಕೆ ಕಳೆದ ಐದು ದಶಕಗಳಿಂದ 5 ಭಾಷೆಗಳಲ್ಲಿ ಜಿಜ್ಞಾಸು ಓದುಗ ವೃಂದಕ್ಕೆ ಭಕ್ತಿ ಸಾಹಿತ್ಯ ರಸದೌತಣವನ್ನು ನೀಡುತ್ತಾ ಬಂದಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ ಎಂಪ್ಲಾಯಿಸ್ ಟ್ರೈನಿಂಗ್ ಅಕಾಡೆಮಿ (SVETA) ಕಾರ್ಯಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಸಂಪಾದಕರಾದ ಡಾ. ವಿ ಜಿ ಚೊಕ್ಕಲಿಂಗಂ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ತಮ್ಮ ನೂತನ ಹೊಣೆಗಾರಿಕೆಯನ್ನು ವಹಿಸಿಕೊಂಡರು.
ಯುವ ಜನತೆಗೆ ಭಾರತೀಯ ಸನಾತನ ಸಂಸ್ಕೃತಿಯ ಸಾರ ಸರ್ವಸ್ವವನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವ ನಿಟ್ಟಿನಲ್ಲಿ ಪತ್ರಿಕೆ ರೂಪಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.
ಕನ್ನಡ ಪ್ರಾಧ್ಯಾಪಕ ಲೇಖಕ ಡಾ. ಆರ್ ವಾದಿರಾಜು ಸೇರಿದಂತೆ ಅನೇಕ ವಿದ್ವನ್ಮಿತ್ರರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ