ವಿಜ್ಞಾನದಿಂದ ಬದುಕಿಗೆ ಉಪಯೋಗ: ‘ಉದ್ಭವ-2023’ನಲ್ಲಿ ಖಗೋಳ ಶಾಸ್ತ್ರಜ್ಞ ಡಾ.ಶ್ರೀಕುಮಾರ್

Upayuktha
0

ವಿದ್ಯಾಗಿರಿ: ನಾವು ಪ್ರತಿನಿತ್ಯ ನೋಡುವ ಪ್ರತಿಯೊಂದು ವಸ್ತುಗಳಲ್ಲಿ ವಿಜ್ಞಾನವಿದ್ದು, ಅದರ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಮಣಿಪಾಲ ನೈಸರ್ಗಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಮತ್ತು ಪ್ರಾಧ್ಯಾಪಕ, ಖಗೋಳ ಶಾಸ್ತ್ರಜ್ಞ ಡಾ.ಶ್ರೀಕುಮಾರ್ ಹೇಳಿದರು. 


ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ವಿಜ್ಞಾನ ವಿಭಾಗ ಆಯೋಜಿಸಿದ ಅಂತರಕಾಲೇಜು ಉತ್ಸವ ‘ಉದ್ಭವ-2023’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಖಗೋಳ ಶಾಸ್ತ್ರ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಾಗುತ್ತಿದ್ದು, ಜನಜೀವನಕ್ಕೆ ಸಾಕಷ್ಟು ಉಪಯೋಗವಿದೆ. ವಿಜ್ಞಾನದ ಪ್ರಮೇಯಗಳೂ ದೈನಂದಿನ ಬದುಕಿಗೆ ಸಂಬಂಧಿಸಿವೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳ ಓದು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜ್ಞಾನ ಸಂಪಾದಿಸಲೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸ ಪ್ರಯತ್ನದಲ್ಲಿ ಸೋಲು ಕಂಡರೆ, ಹೆದರದೇ ಮತ್ತೆ ಪ್ರಯತ್ನ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದರು.


ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಎಲ್ಲ ಆವಿಷ್ಕಾರಗಳ ಹಿಂದೆಯೂ ಒಂದು ತ್ಯಾಗ ಇದೆ. ಒಂದು ಪುಟ್ಟ ಚಿಂತನೆಯಿಂದ ದೊಡ್ಡ ಆವಿಷ್ಕಾರ ಸಾಧ್ಯ ಎಂದರು.   


ಸಮಾರೋಪ ಸಮಾರಂಭದಲ್ಲಿ ಆತ್ಮ ರಿಸರ್ಚ ಸೆಂಟರ್‍ನ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ ಫರ್ಹಾನ ಝಮೀರ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. 


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ 170 ವಿದ್ಯಾರ್ಥಿಗಳು ಆಗಮಿಸಿದ್ದರು.   ಅಂತರಕಾಲೇಜು ಉತ್ಸವ ‘ಉದ್ಭವ-2023’ ದ ಪ್ರಥಮ ಸ್ಥಾನವನ್ನು ಮಂಗಳೂರಿನ ಕೆನರಾ ಕಾಲೇಜು ಪಡೆದರೆ, ಉಜಿರೆಯ ಎಸ್‍ಡಿಎಂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.


ಕಾರ್ಯಕ್ರಮದ ಸಂಯೋಜಕಿ ಶಿಖಾ ಎಎಸ್ ಮತ್ತು ಪ್ರಿಯಾ, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿ.ಡಿ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಅಶ್ವಥ್, ಅಭಿಷೇಕ್, ಪ್ರಗತ ಇದ್ದರು. ವಿದ್ಯಾರ್ಥಿನಿ ಮೇಘಶ್ರೀ ಕುಂದರ್, ಸುಶ್ಮಿತಾ  ಜೈನ್ ನಿರೂಪಿಸಿದರು. 

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top