ಮಂಗಳೂರಲ್ಲಿ ‌3,4ರಂದು ಹಲಸು ಹಬ್ಬ

Upayuktha
0

ಮಂಗಳೂರು:‌ ಇಲ್ಲಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು ‌4ರಂದು ಶರವು ದೇವಳ ಬಳಿಯ‌ ಬಾಳಂಭಟ್ ಹಾಲ್ ನಲ್ಲಿ ನಡೆಯಲಿದೆ.


ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ದೀಪ ಬೆಳಗಿಸಿ‌ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಭಟ್ ಆ್ಯಂಡ್ ಭಟ್ ಯೂ ಟ್ಯೂಬ್ ಚಾನಲ್‌ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಣ್ಣು ತುಂಡು‌ ಮಾಡಿ ಹಬ್ಬಕ್ಕೆ ಚಾಲನೆ‌ ನೀಡುವರು.

 

ಹಲಸಿನ ಹೋಳಿಗೆ‌ ಮಾಡಿ‌ ಹಲಸು ಮೌಲ್ಯ ವರ್ಧನೆ‌‌ ಮಾಡಿದ‌ ಲಕ್ಷ್ಮೀ ಚಿದಾನಂದರನ್ನು ಉಪಮೇಯರ್ ಪೂರ್ಣಿಮಾ ಅವರು ಸನ್ಮಾನಿಸಲಿದ್ದಾರೆ.


ಈ ಬಾರಿಯ ಹಲಸಿನ ಹಬ್ಬದಲ್ಲಿ ಹಲಸಿನ ವಿವಿಧ ಮೌಲ್ಯ ವರ್ಧಿತ ತಿಂಡಿಗಳು, ಬಣ್ಣದ ರುದ್ರಾಕ್ಷಿ, ಚಂದ್ರ ಹಲಸು, ಬಕ್ಕೆ ಹಲಸು, ಬಂಗಾರದ ಬಣ್ಣದ ಹಲಸು, ಹಲಸಿನ ಐಸ್ ಕ್ರೀಂ, ಹಲಸಿನ ಹೋಳಿಗೆ, ಹಲಸಿನ ಗಿಡಗಳು ಲಭ್ಯವಿವೆ. ಹಲಸಿನ‌ ವೈವಿಧ್ಯಮಯ ಖಾದ್ಯಗಳನ್ನು ಸ್ಥಳದಲ್ಲೇ  ಮಾಡಿಕೊಡುವ ಕೌಂಟರ್ ಗಳಿವೆ.


ಅಲ್ಲದೇ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಯವ ರೈತರು ಬೆಳೆದ ವಿವಿಧ ದಿನಸಿ, ಹಣ್ಣುಗಳ ಮಾರಾಟ, ತರಕಾರಿ ‌ಗಿಡಗಳ ಮಾರಾಟ ವ್ಯವಸ್ಥೆ ಗಳಿವೆ. ನೇರವಾಗಿ ‌ರೈತರೇ ಮಾರಾಟದಲ್ಲಿ ಪಾಲ್ಗೊಳ್ಳುವುದು‌ ವಿಶೇಷ. ಬೆಳಗ್ಗೆ 7 ರಿಂದ ಸಂಜೆ 7 ರ ತನಕ ಸಾರ್ವಜನಿಕರ ಭೇಟಿಗೆ ಮುಕ್ತ‌ ಅವಕಾಶವಿದೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಪ್ರಕಟಣೆ ತಿಳಿಸಿದೆ.

(ಹೆಚ್ಚಿನ ಮಾಹಿತಿಗಾಗಿ-ಭರತ್ ರಾಜ್-9449318553)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top