ವಿಶ್ವ ಪಾರ್ಕಿನ್‍ಸನ್ಸ್ ಜಾಗೃತಿ ದಿನ: ಆಳ್ವಾಸ್ ನಿರಾಮಯದಲ್ಲಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ

Upayuktha
0

ಮೂಡುಬಿದಿರೆ: ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯಲ್ಲಿ ವಿಶ್ವ ಪಾರ್ಕಿನ್‍ಸನ್ಸ್ ಜಾಗೃತಿ ದಿನದ ಪ್ರಯುಕ್ತ ಎ.11 ರಿಂದ ಎ.17ರ ವರೆಗೆ ನಡೆಯಲಿರುವ ಮಾಹಿತಿ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ವಿದ್ಯಾಗಿರಿಯಲ್ಲಿ ಮಂಗಳವಾರ ನಡೆಯಿತು. 


ಶಿಬಿರ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಹೆಲ್ತ್ ಸೆಂಟರ್‍ನ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಹನಾ ಶಟ್ಟಿ, ಶಿಬಿರದ ಆಯೋಜನೆಗೆ ಒಂದು ಬಲಿಷ್ಠ ತಂಡದ ಪ್ರಯತ್ನ ಇದ್ದು, ರೋಗಿಗಳ ಹಿತಾಸಕ್ತಿಯಲ್ಲಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಹಾಗೂ ಈ ಶಿಬಿರವು ಹೆಚ್ಚು ರೋಗಿಗಳಿಗೆ ಉಪಯುಕ್ತವಾಗಲಿ ಎಂದು ಶುಭ ಹಾರೈಸಿದರು. 


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ರವಿಪ್ರಸಾದ್ ಹೆಗ್ಡೆ, ಪಾರ್ಕಿನ್ಸನ್ಸ್ ರೋಗ ಮತ್ತದರ ಚಿಕಿತ್ಸೆಯ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯಗತ್ಯ, ದೈನಂದಿನದ ಚಟವಟಿಕೆಗಳನ್ನು ಮಿತಿಗೊಳಿಸುವ ಈ ಕಾಯಿಲೆಯಲ್ಲಿ ಆಯುರ್ವೇದದ ಚಿಕಿತ್ಸಾ ಪದ್ಧತಿಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದ್ದು, ಶಿಬಿರದ ಮೂಲಕ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಸಂಪೂರ್ಣ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.


ಪ್ರಾಂಶುಪಾಲ ಡಾ. ಸಜಿತ್.ಎಂ. ಉಪಸ್ಥಿತರಿದ್ದರು. ಆಳ್ವಾಸ್ ನಿರಾಮಯ ವೈದ್ಯಕೀಯ ನಿರ್ದೇಶಕಿ ಡಾ. ಸುರೇಖಾ ಪೈ ಸ್ವಾಗತಿಸಿ, ಡಾ. ರೈನಿ ವಂದಿಸಿದರು. ಡಾ. ಅಮೃತೇಶ್ವರಿ ಪ್ರಾರ್ಥಿಸಿ, ಡಾ. ಇಂಪು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top