ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಾಹನ ಸಹಿತ 6,30,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುದ್ದುಪದವು, ಮರಕ್ಕಿಣಿಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರು ಜೀತೊ ವಾಹನ (ಕೆಎ 21 ಬಿಎ 8310) ವನ್ನು ನಿಲ್ಲಿಸಿ ತಪಾಸಣೆ ಮಾಡಿ, ವಾಹನ ಚಾಲಕ ಮಹಮ್ಮದ್ ಆಲಿಯ ವಿಚಾರನೆ ನಡೆಸಿದರು. ವಾಹನದಲ್ಲಿ ಸಾಗಿಸುತ್ತಿದ್ದ ಅಕ್ಕಿಯ ಕುರಿತಾಗಿ ಬಿಲ್ಲು ಹಾಗೂ ದಾಖಲಾತಿಗಳು ಇರಲಿಲ್ಲ. ತಲಾ 50 ಕೆ.ಜಿ ಯ 20 ಅಕ್ಕಿ ಚೀಲಗಳು ಇದ್ದು,ಇದನ್ನು ಕೇಪು ಗ್ರಾಮದ ಮರಕ್ಕಿಣಿಯಲ್ಲಿನ ಹನೀಫ್ ಅವರಿಗೆ ಸೇರಿದ ಗೋಡೌನ್‌ಗೆ ಸಾಗಿಸುತ್ತಿರುವುದಾಗಿ ಚಾಲಕ ತಿಳಿಸಿದ್ದಾನೆ.
ಅದರಂತೆ ಮರಕ್ಕಿಣಿಗೆ ತೆರಳಿ, ಗೋಡೌನನ್ನು ಪರಿಶೀಲಿಸಿದಾಗ ಅಲ್ಲಿ ಸುಮಾರು ತಲಾ 50 ಕೆ.ಜಿ ತೂಕದ 180 ಚೀಲಗಳಲ್ಲಿ ಒಟ್ಟು 9 ಟನ್ ತೂಕದ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳಿಲ್ಲದೇ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಜೀತೊ ವಾಹನದಲ್ಲಿದ್ದ ತಲಾ 50 ಕೆ.ಜಿ ಯ 20 ಚೀಲಗಳು, ಒಟ್ಟು ತೂಕ 1 ಟನ್ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ