ಹೊರೆ ಕಾಣಿಕೆಯ ಮೆರವಣಿಗೆಯಲ್ಲಿ ಸರ್ವ ಬಂಧುಗಳು ಭಾಗಿಗಳಾಗಿ: ಮಯೂರ್ ಉಳ್ಳಾಲ್
ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶ ಸಿದ್ಧತೆ ಹಾಗೂ ಹಸಿರು ಹೊರೆಕಾಣಿಕೆಯ ಸಭೆ ವೀರನಾರಾಯಣ ಸಭಾಭವನದಲ್ಲಿ ನಡೆಯಿತು.
ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ಎಲ್ಲಾ ರೀತಿಯ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ಹೊರೆಕಾಣಿಕೆಗಳ ಸಂಗ್ರಹ, ಕೇಂದ್ರ, ಹೊರೆಕಾಣಿಕೆಯ ದಿನದ ಸೇರುವಿಕೆ, ಸಾಗುವ ಸಮಯ, ಹೊರೆಕಾಣಿಕೆ ವಸ್ತುಗಳ ಪಟ್ಟಿಯ ಬಗ್ಗೆ ಚರ್ಚಿಸಲಾಯಿತು. ಹಾಗೂ ಬ್ರಹ್ಮಕಲಶದ ವಿವಿಧ ಸಮಿತಿಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಚಾರಕ್ಕಾಗಿ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳಿಗೆ ಅಂಟಿಸುವ ಸ್ಟಿಕರ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಹಾಗೂ ವೀರನಾರಾಯಣ ದೇವರ ಕನ್ನಡ ಭಕ್ತಿಗೀತೆಯ ಪೋಸ್ಟರನ್ನು ಬಿಡುಗಡೆಮಾಡಲಾಯಿತು.
ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮೇ 14ರಂದು ಮಧ್ಯಾಹ್ನ 3.30ಕ್ಕೆ ಹೊರೆಕಾಣಿಕೆ ಹೊರಡಲಿದ್ದು ಸರ್ವ ಬಂಧುಗಳು ಪಾಲ್ಗೊಳ್ಳಬೇಕು. ಮೆರವಣಿಗೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳು ಪಾಲ್ಗೊಳ್ಳಲಿದೆ, ಸರ್ವರು ಯಶಸ್ವಿಗೊಳಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಕಲ್ಬಾವಿ, ಬ್ರಹ್ಮಕಲಶೋತ್ಸವದ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ್. ಎ, ಸೇವಾ ಸಮಿತಿ ಅಧ್ಯಕ್ಷ ಸುಂದರ್ ಕುಲಾಲ್, ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಸದಾಶಿವ ಕುಲಾಲ್, ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಗಿರಿಧರ್ ಮೂಲ್ಯ, ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷ ಗೀತ ಮನೋಜ್, ಹೊರೆಕಾಣಿಕೆ ಸಂಚಾಲಕರಾದ ಕಿರಣ್ ಅಟ್ಲೂರು, ಗಣೇಶ್ ಉರ್ವಾ, ದಯಾನಂದ ಅಡ್ಯಾರ್, ಅಶೋಕ್ ಕುಳೂರು, ಗಂಗಾಧರ್ ಬಂಜನ್, ಬ್ರಹ್ಮಕಲಶೋತ್ಸವದ ಗೌರವ ಅಧ್ಯಕ್ಷ ದಿವಾಕರ್ ಬೆಂಗಳೂರು, ಮುಂಬಯಿ ಕುಲಾಲ ಸಂಘದ ಮಾಜಿ ಅಧ್ಯಕ್ಷ ದೇವದಾಸ್ ಕುಲಾಲ್ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಮುಂಬಯಿ, ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ಕುಲಾಲ ಸಂಘಗಳ ಪದಾಧಿಕಾರಿಗಳು, ಕುಲಾಲ ಸಮಾಜದ ಹಣಕಾಸು ಸಂಸ್ಥೆಗಳ ವಿವಿಧ ಸಂಘಗಳ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಹಾಗೂ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಹ ಸಂಚಾಲಕರಾದ ನವೀನ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು, ಸಾಂಸ್ಕೃತಿಕ ಸಂಚಾಲಕ ಪ್ರವೀಣ್ ಬಸ್ತಿ ಧನ್ಯವಾದ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ