ಉಜಿರೆ: ಉಜಿರೆ ರುಡ್‍ಸೆಟ್ ಸಂಸ್ಥೆಯ 2022-23 ರ ಸಾಲಿನ ವಾರ್ಷಿಕ ವರದಿಯನ್ನು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 2022-23 ರ ಸಾಲಿನಲ್ಲಿ 28 ವಿವಿಧ ತರಬೇತಿ ತಂಡಗಳಲ್ಲಿ 751 ನಿರುದ್ಯೋಗಿ ಯುವಕ- ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಶೇ.72 ಶಿಬಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ.
ಕಳೆದ ಒಂದು ವರ್ಷದಲ್ಲಿ ಸಂಸ್ಥೆಗೆ ಭೇಟಿ ನೇಡಿದ ವಿವಿಧ ವಿದೇಶಿ ತಂಡಗಳು ಹಾಗೂ ಇತರ ಇಲಾಖಾ ಭೇಟಿಗಳ ಬಗೆಗಿನ ಮಾಹಿತಿಯ ಬಗ್ಗೆ ಚರ್ಚಿಸಿದರು. ಸಂಸ್ಥೆಯು 2022-23 ರಲ್ಲಿ ಕರ್ನಾಟಕದ ವಿವಿಧ ರುಡ್ ಸೆಟ್ ಶಾಖೆಗಳಲ್ಲಿ ಈಗಾಗಲೇ ಬ್ಯೂಟಿಪಾರ್ಲರ್ ಕ್ಷೇತ್ರದಲ್ಲಿ ತರಬೇತಿ ಪಡೆದು ಸ್ವಂತ ಉದ್ದಿಮೆ ನಡೆಸುತ್ತಿರುವ ಉದ್ಯಮಿಗಳಿಗೆ ರಾಜ್ಯ ಮಟ್ಟದ 3 ದಿನಗಳ ವಿಶೇರ್ ಕೌಶಲಾಭಿವೃದ್ದಿ ತರಬೇತಿಯನ್ನು ಆಯೋಜಿಸಿರುವುದು ಮತ್ತು ಅದರ ಯಶಸ್ಸಿನ ಕುರಿತು ಸಂತೋಷ ವ್ಯಕ್ತ ಪಡಿಸಿದರು. ವಿವಿಧ ತರಬೇತಿ ಕಾರ್ಯಕ್ರಮಗಳ ಜೊತೆಗೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿ ಶುಭ ಹಾರೈಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ