ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿಜ್ಞಾನಿಯ ಜತೆ ವಿದ್ಯಾರ್ಥಿಗಳ ಸಂವಾದ

Upayuktha
0

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸ್ಟೂಡೆಂಟ್ ಸೈಂಟಿಸ್ಟ್ ಇಂಟರಾಕ್ಷನ್ ಪ್ರೋಗ್ರಾಂ- ವಿಜ್ಞಾನಿ ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ ಇಂದು (ಎ.6, ಗುರುವಾರ) ನಡೆಯಿತು. 


ಕಾರ್ಯಕ್ರಮದಲ್ಲಿ ಹೈದರಾಬಾದ್ ಯುನಿವರ್ಸಿಟಿ ಸ್ಕೂಲ್ ಆಫ್ ಫಿಸಿಕ್ಸ್‌ನ ಪ್ರಾಧ್ಯಾಪಕರಾದ ಪ್ರೊ. ಎಂ. ಶಿವಕುಮಾರ್ ಅವರು ಭಾಗವಹಿಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.


ಕಳೆದ 50 ವರ್ಷದಿಂದ ಕ್ವಾಂಟಮ್ ಫಿಸಿಕ್ಸ್ ಥಿಯರಿ, ಜನರಲ್ ರಿಲೇಟಿವಿಟಿ. ಬ್ಲಾಕ್ ಹೋಲ್ಸ್- ಕ್ಷೇತ್ರಗಳಲ್ಲಿ ಬಹಳಷ್ಟು ಸಂಶೋಧನೆಗಳನ್ನು ನಡೆಸಿರುವ ಪ್ರೊ. ಎಂ. ಶಿವಕುಮಾರ್ ಅವರು 

20ಕ್ಕೂ ಹೆಚ್ಚು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಮಣಿಪಾಲಯ ಪಿಯು ಕಾಲೇಜು, ಎಂಜಿಎಂ ಕಾಲೇಜು, ಪೂರ್ಣಪ್ರಜ್ಞ ಕಾಲೇಜು, ಎಂಐಟಿಯ ವಿದ್ಯಾರ್ಥಿಗಳೂ ಕೂಡ ಇಂದಿನ ಕಾರ್ಯಕ್ರಮದಲ್ಲಿ ಇದ್ದರು.


ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರತಿಭಾ ಸಿ ಆಚಾರ್ಯ ಅವರು ಈ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ ಉಪಸ್ಥಿತರಿದ್ದರು.

ಕಾಲೇಜಿನ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರಾದ ಡಾ. ಎ.ಪಿ ಭಟ್ ಅವರು ನಿರೂಪಣೆ ಮಾಡಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಕ್ಲಾರಿಡಾ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಎಲ್ಲರ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಭೌತಶಾಸ್ತ್ರವನ್ನು ಹೇಗೆ ಕೆರಿಯರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು, ಅದಕ್ಕಿರುವ ಅವಕಾಶಗಳೇನು, ಗಣಿತ- ಭೌತಶಾಸ್ತ್ರದಲ್ಲಿ ಉನ್ನತ ಶಿಕ್ಷಣದ ಅವಕಾಶಗಳು, ಕ್ವಾಂಟಮ್ ಫಿಸಿಕ್ಸ್  ಥಿಯರಿ ಬಗ್ಗೆ ಬಹಳಷ್ಟು ಪ್ರಶ್ನೆಗಳಿಗೆ ಪ್ರೊ. ಎಂ. ಶಿವಕುಮಾರ್ ಉತ್ತರಿಸಿದರು.

ಕಾಲೇಜಿನ ಪಿಟಿಟಿಎಸ್ ಪ್ರೋಗ್ರಾಂ (ಫಿಸಿಕ್ಸ್ ಟ್ರೈನಿಂಗ್ ಅಂಡ್ ಟ್ಯಾಲೆಂಟ್ ಸರ್ಚ್ ಪ್ರೋಗ್ರಾಂ) ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

إرسال تعليق

0 تعليقات
إرسال تعليق (0)
To Top