ಉಜಿರೆ ಶ್ರೀ ಧ.ಮಂ ಕಾಲೇಜು ವತಿಯಿಂದ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರಿಗೆ ಸನ್ಮಾನ

Upayuktha
0

 


ಉಜಿರೆ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿಜೀವನದಲ್ಲೇ ಆರಂಭಿಸಬೇಕು. ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್ ನಿತಿನ್‍ ಆರ್ ಭಿಡೆ ಅಭಿಪ್ರಾಯಪಟ್ಟರು. 


ಶ್ರೀ ಧ. ಮಂ. ಡಿ.ಎಡ್. ಕಾಲೇಜು ಸಭಾಂಗಣದಲ್ಲಿ ಉಜಿರೆ ಎಸ್ ಡಿ ಎಮ್‍ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ನಡೆಸಿಕೊಟ್ಟ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂವಾದಕಾರ್ಯಕ್ರಮ "ಎಸ್ ಡಿ ಎಂ ನೆನಪಿನಂಗಳ" ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಮುಖ್ಯ ಅಥಿತಿ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದೌರ್ಬಲ್ಯಗಳನ್ನು ತೋರ್ಪಡಿಸದೇ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕೆಂದು ಪ್ರೋತ್ಸಹಿಸಿದರು. ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡ ಅವರು, ಇಂದಿನ ವಿದ್ಯಾರ್ಥಿಗಳೂ ಕೂಡ ಅಂದಿನ ವಿದ್ಯಾರ್ಥಿಗಳಂತೆ ಸವಾಲುಗಳಿಗೆ ಸೆಟೆದು ನಿಲ್ಲಬೇಕು, ಸವಾಲನ್ನೆದುರಿಸುವ ಕಿಚ್ಚನ್ನು ಮನದಲ್ಲಿ ಬೆಳೆಸಿಕೊಳ್ಳಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ತಮ್ಮ ವಿದ್ಯಾರ್ಥಿ ನಿತಿನ್ ಭಿಡೆಯವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. 


ಈ ಸಂದರ್ಭದಲ್ಲಿ ಎನ್ ಸಿ ಸಿ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಕೆಡೆಟ್ ಗಳನ್ನು ಗೌರವಿಸಲಾಯಿತು. ಮತ್ತು ಎಸ್ ಡಿ ಎಂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಯಾದ ಶಾಮ ಪ್ರಸಾದ್‍ಗೆ ಕಾಲೇಜಿನ ಆರ್ಹ ವಿದ್ಯಾರ್ಥಿಯೆಂದು ಗುರುತಿಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮವನ್ನು ಕೆಡೆಟ್‍ ರಾಘವೇಂದ್ರ ಸ್ವಾಗತಿಸಿದರು. ಕೆಡೆಟ್ ಗಳಾದ ಯಶ್ವಂತ್ ಮತ್ತು ಪ್ರತಿಮಾ ಅವರು ವಿದ್ಯಾರ್ಥಿ ಸಾಧಕರನ್ನು ಪರಿಚಯಿಸಿದರು. ಕೆಡೆಟ್‍ ಉದಿತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೆಡೆಟ್‍ ರಕ್ಷಿತಾ ವಂದಿಸಿದರು. ಕೆಡೆಟ್ ಸೀಮಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‍ ಕಮಾಂಡರ್ ಡಾ. ಶ್ರೀಧರ್ ಭಟ್, ಲೆಫ್ಟಿನೆಂಟ್ ಶುಭಾರಾಣಿ, ನೆನಪಿನಂಗಳ ಕಾರ್ಯಕ್ರಮ ಸಂಯೋಜಕರು ಮತ್ತು ಪ್ರಾಧ್ಯಾಪಕರಾದ ಡಾ. ಎಂ. ಪಿ. ಶ್ರೀನಾಥ್, ಮತ್ತು ಶೈಲೇಶ್‍ಕುಮಾರ್, ಶ್ರೀಮತಿ ಭಿಡೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top