ಬೆಂಗಳೂರಿನ ಮುಳಿಯ ಮಳಿಗೆಯಲ್ಲಿ ಯುನಿಕ್ ಡೈಮಂಡ್ ಫೆಸ್ಟ್ ಏ.7ರಿಂದ 19ರ ವರೆಗೆ
ಬೆಂಗಳೂರು: ನಾಡಿನ ಹೆಸರಾಂತ ಆಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನ ಬೆಂಗಳೂರು ಮಳಿಗೆ (ಮಣಿಪಾಲ್ ಸೆಂಟರ್) ಏಪ್ರಿಲ್ 7ರಿಂದ 19ರ ವರೆಗೆ ವಿಶಿಷ್ಟ ವಜ್ರಾಭರಣಗಳ ಉತ್ಸವ (ಯುನಿಕ್ ಡೈಮಂಡ್ ಫೆಸ್ಟ್) ನಡೆಯುತ್ತಿದ್ದು, ಶೇ 95ರಷ್ಟು ವಿನಿಮಯ ಮೌಲ್ಯ ಹಾಗೂ ಶೇ 90ರಷ್ಟು ಬೈಬ್ಯಾಕ್ ಮೌಲ್ಯ ನೀಡಲಾಗುತ್ತದೆ.
ಗ್ರಾಹಕರ ಜೊತೆಗೆ 78 ವರ್ಷಗಳ ವಿಶ್ವಾಸ ಮತ್ತು ಪರಂಪರೆಯನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್ ಆಯೋಜಿಸಿರುವ ಈ ಉತ್ಸವವು ವಜ್ರಾಭರಣಗಳ ಖರೀದಿಗೆ ಒಂದು ಸುವರ್ಣಾವಕಾಶವಾಗಿದೆ.
ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನೆಯ ವೇಳೆ ಮಾತನಾಡಿದ ಸಂಸ್ಥೆಯ ಸಲಹೆಗಾರ ವೇಣು ಶರ್ಮಾ ಅವರು, 'ಮುಳಿಯದ ಅಮೂಲ್ಯ ಹಾಗೂ ಕಿಸ್ನ ಡೈಮಂಡ್ ಆಭರಣಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಹಾಗೆಯೇ ಗ್ರಾಹಕರು ಕೊಂಡ ಆಭರಣಗಳಿಗೆ ವರ್ಷಗಳ ನಂತರವೂ ಶೇ 90ರಷ್ಟು ಬೈಬ್ಯಾಕ್ ಹಾಗೂ ಶೇ 95ರಷ್ಟು ಎಕ್‌ಚೇಂಜ್ ಮೌಲ್ಯ ನೀಡಲಾಗುತ್ತದೆ. ಈ ಅವಕಾಶವನ್ನು ಆಭರಣ ಪ್ರಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ