ತೆಂಕನಿಡಿಯೂರಿನಲ್ಲಿ ಬೇಸಿಗೆ ಶಿಬಿರ

Upayuktha
0

 

ಉಡುಪಿ: ತೆಂಕನಿಡಿಯೂರಿನ ಬಾಲ ಸಂಸ್ಕಾರ ಕೇಂದ್ರದವರು, ಶ್ರೀ ಕಾಳಿಕಾಂಬಾ ಭಜನಾ ಸಂಘ ಹಾಗೂ ಶ್ರೀ ದೇವಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ 30.04.2023ರಿಂದ 07.05.2023ರ ತನಕ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ “ವಿಕಾಸ-2023”ನ್ನು ಹಮ್ಮಿಕೊಂಡಿದ್ದಾರೆ.


5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ವಿಶೇಷ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಭಕ್ತಿಗೀತೆ, ಭಾವಗೀತೆ, ಜನಪದ ಹಾಡು, ನೃತ್ಯ, ಚಿತ್ರಕಲೆ, ಗ್ರೀಟಿಂಗ್ಸ್ ತಯಾರಿ, ಕೊಲಾಜ್, ಫೇಸ್ ಪೈಂಟಿಂಗ್, ರಂಗ ತರಬೇತಿ, ಮೂಕಾಭಿನಯ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದೆಂದು ಕೇಂದ್ರದ ಪ್ರಕಟನೆ ತಿಳಿಸಿದೆ. ಎಂಟು ದಿನಗಳು ನಡೆಯುವ ಈ ವಿಶೇಷ ಶಿಬಿರದಲ್ಲಿ ಕೇವಲ 40 ಶಿಬಿರಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.


ಆಸಕ್ತರು 9844709515, 9380882943, 9964024066 ಈ ದೂರವಾಣಿಯನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top