ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಫಿಸಿಯೋಥೆರಫಿ ಶಿಕ್ಷಣ ಸಂಸ್ಥೆ 2022-23 ನೇ ಸಾಲಿನ ರ್‍ಯಾಂಕ್ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.
ಡಾ. ನಿಕಿತಾ ಎಂ.ಪಿ.ಟಿ ಇನ್‍ಮಸ್ಕಿಲೋಸ್ಕೆಲೆಟರ್ ಸೈನ್ಸ್ ಮತ್ತು ಸ್ಪೋಟ್ರ್ಸ್ ಫಿಸಿಯೋಥೆರಫಿ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ. ಇವರ ಸಿಜಿಪಿಎ ಅಂಕ 8.01 ಪಡೆದಿರುತ್ತಾರೆ.
ಶ್ರೀಜಾ ಕೆ. ಎಂ.ಪಿ.ಟಿ ನ್ಯೂರೋ ಸೈನ್ಸ್ ಮತ್ತು ಪ್ರಾಕ್ಟೀಸ್ ಪದವಿಯಲ್ಲಿ ಎರಡನೇ ರ್‍ಯಾಂಕ್ ಪಡೆದಿರುತ್ತಾರೆ. ಇವರ ಸಿಜಿಪಿಎ ಅಂಕ 7.51 ಆಗಿರುತ್ತದೆ.
ಮೂರನೇ ರ್‍ಯಾಂಕ್ ಅನ್ನು ದಿವ್ಯ ಪಟೇಲ್ ಎಂ.ಪಿ.ಟಿ ಕಾರ್ಡಿಯೋ ಪಲ್ಮನರಿ ಸೈನ್ಸ್ ಮತ್ತು ಪ್ರಾಕ್ಟಿಸ್, ಸೌಮ್ಯ ಬಿ., ಎಂ.ಪಿ.ಟಿ ಆಪ್ಟ್ರಿಕ್ಸ್ ಗೈನಕಾಲಜಿ ಪ್ರಾಕ್ಟೀಸ್ ಸ್ನಾತಕೋತ್ತರ ಪದವಿಯಲ್ಲಿ ಇಬ್ಬರು ಹಂಚಿಕೊಂಡಿರುತ್ತಾರೆ. ಇವರ ಸಿಜಿಪಿಎ ಅಂಕವು 7.43 ಆಗಿರುತ್ತದೆ.
ಶ್ರೀನಿವಾಸ ವಿಶ್ವ ವಿದ್ಯಾನಿಲಯದಲ್ಲಿ 20 ಎಪ್ರಿಲ್ 2023 ರಂದು ಜರಗುವ 5ನೇ ಘಟಿಕೋತ್ಸವದಲ್ಲಿ ರ್‍ಯಾಂಕ್ ವಿಜೇತರನ್ನು ಗೌರವಿಸಲಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ