ಹಾಗೇ ಸುಮ್ಮನೆ... ಬಿಟ್ಟೆನೆಂದರೂ ಬಿಡದೀ ನೆನಪುಗಳು...

Upayuktha
0

 


ಬಂದೆಯೋ ನೀನು ನನ್ನ ಜೀವನದಲ್ಲಿ‌ ಊಹಿಸಲು ಆಗುತ್ತಿಲ್ಲ ಮುಂದೆ ನೀನು ಇಲ್ಲ ನನ್ನ ಜೀವನದಲ್ಲಿ ಎಂಬುದನ್ನು. ಮರೆಯಲು ಆಗುತ್ತಿಲ್ಲ ನಿನ್ನ ಪ್ರೀತಿಯಲಿ ಮರೆಯಾಗಿ ಹೋದನು.... ಮರೆಯಲು ಎಷ್ಟು ಪ್ರಯತ್ನಿಸಿದರು....!! 

ಮನಸು ಮರೆಯಲು ಬಿಡುತ್ತಿಲ್ಲ ಮರೆಯಲು ಸಾಧ್ಯವೇ ಎಂದು ಮನಸ್ಸಿಗೆ ಪ್ರಶ್ನೆ...?


ಆಗ ಮನಸ್ಸು ಹೇಳಿದ ಮಾತು!

ಯಾವತ್ತು ಅದು ಅಸಾಧ್ಯ ಎಂದಿತು!!

ಕಾರಣ ಒಂದೇ ಪ್ರೀತಿ...!!! 


ಕಾರಣ ಒಂದೇ ಪ್ರೀತಿ. ನಿನ್ನ ಪ್ರೀತಿ ಎಂಬುದು ಮರೆಯಲು ಬಿಡುತ್ತಿಲ್ಲ.

ನಿನ್ನ ಪ್ರೀತಿ ಎಂಬುದು ನನ್ನನ್ನು ಸ್ವಾರ್ಥಿಯಾಗಿಯೂ ಮಾಡಿದೆ.

ಪ್ರೀತಿ ಎಂಬುದು ನನ್ನ ಜೀವನದಲ್ಲಿ ಒಂದೇ ಒಂದು ತಿಳಿಸಿದೆ.

ಆ ಪ್ರೀತಿ ಸಿಗಲಿ ಒಬ್ಬನಿಗೆ ಮಾತ್ರ ಸಾಧ್ಯ. ಒಂದು ದಿನ ಸಿಗಬಹುದು ಎಂಬುವುದು. ಕನಸು 

ಕನಸಾಗಿ ಉಳಿಯುತ್ತದೆಯೋ ಎಂಬ ಭಯ! ಆದರೆ ಕನಸು ನಿಜವಾಗದಿದ್ದರೂ ಸಹ ನನ್ನ  ಪ್ರೀತಿ ಯಾವತ್ತು ಕೊನೆವರೆಗೂ. ಒಂದೇ.


ಮರೆಯಲು ಸಾಧ್ಯವೇ? 

ಉತ್ತರ; ಅಸಾಧ್ಯ 


ನನ್ನ ಪ್ರೀತಿ ನನ್ನ ನಂಬಿಕೆ


ನಿನ್ನ ನಗು... 

ನೀನು ನಗುವಾಗ ಮರೆತೆನು ನಾನು ನನ್ನನ್ನು...

ನಿನ್ನ ನಗು ನನ್ನನು ಮರುಳಾಗಿ ಮಾಡಿತು...

ಆ ನಿನ್ನ ನಗು ನನ್ನನ್ನು ಸ್ವಾರ್ಥಿಯಾಗಿ ಮಾಡಿದ್ದು..

ಆ ನಗು ನನ್ನನ್ನು ಪ್ರೀತಿಯ ಅಲೆಯಲ್ಲಿ ಸಿಲುಕು ಹಾಗೆ ಮಾಡಿ ಹೊರಬರಲು ಬಿಡಲಿಲ್ಲ.

ಆ ನಿನ್ನ ನಗುವೆ ನನ್ನಲ್ಲಿ ಇಲ್ಲದ ಸಲ್ಲದ ಆಸೆಯನ್ನು ಮೂಡಿಸಿತು

ಆ ನಿನ್ನ ನಗುವೆ ನನ್ನಲ್ಲಿ ನೀನು ನನ್ನವನು ಎಂಬ ಆಸೆಯನ್ನು ನನ್ನಲ್ಲಿ ಮೂಡಿಸಿತು..

ಆ ನಗುವೇ ನನ್ನ ಜೀವನದಲ್ಲಿ ಪ್ರೀತಿ ಒಲವು ತಂದುಕೊಟ್ಟದ್ದು.

ಆ ನಗು  ನನ್ನ ಮನಸ್ಸಿಗೆ ತುಂಬಾ ಹತ್ತಿರವಾದದ್ದು.

ಆ ನುಗುವಿಗೆ ಮಾತ್ರ ನನ್ನ ಸಿಟ್ಟು ಕೋಪವನ್ನು ತಡೆಯಲು ಸಾಧ್ಯವಾಗುತ್ತಿದ್ದದ್ದು..


ಈಗ ಹೇಳು?  

ಆ ನಿನ್ನ ನಗುವನ್ನು ನಾ ಮರೆಯಲು ಸಾಧ್ಯವೇ?

ಉತ್ತರ: ಅಸಾಧ್ಯ

ನಿನ್ನ ನಗು ನನ್ನ ಸಂತೋಷ!!!! 

 

ನಿನ್ನ ಮುದ್ದು ನಯನ (ಕಣ್ಣು)  

ನೀನು ನನ್ನನ್ನು ನಾನು ನಿನ್ನನ್ನು ನೋಡಲು ಸಾಧ್ಯವಾದದ್ದು         

ಕಣ್ಣುಗಳಿಂದ. ಆ ನಿನ್ನ ಮುದ್ದು ನಯನಗಳು ನನ್ನನ್ನು ನಿನ್ನತ್ರ ಸೆಳೆಯಲು ಕಾರಣವಾಯಿತು. ಆ ನಿನ್ನ ಕಣ್ಣುಗಳು ನನ್ನನ್ನು ಕದ್ದು ನೋಡುವುದನ್ನು ನೋಡಿದ್ದೇನೆ. ನೀನು ನನ್ನತ್ರ ಮಾತನಾಡದಿದ್ದರೂ ಸಹ ನಿನ್ನ ಕಣ್ಣುಗಳು ನನ್ನ ಮೇಲೆ ಗಮನಹರಿಸುವುದನ್ನು ನಾನು ಕಂಡಿದ್ದೇನೆ.

ನೀನು ನನ್ನತ್ರ ಮಾತನಾಡುವುದಿಲ್ಲ ಎಂಬ ಬೇಸರಕ್ಕಿಂತ ಆ ಕಣ್ಣಲ್ಲಿ ದಿವಸಳು ನನ್ನನ್ನು ನೋಡುತ್ತೀಯಾ ಎಂಬ ಸಂತೋಷವೇ ಜಾಸ್ತಿ ಇತ್ತು. ಆದರೆ ಇನ್ನೂ ಅದು ಸಾಧ್ಯವಿಲ್ಲ! 

 

ಆದರೆ ಆ ನಿನ್ನ ಮುದ್ದು ನಯನಗಳನ್ನು ನಾ ಮರೆಯಲು ಸಾಧ್ಯವೇ?

ಉತ್ತರ: ಅಸಾಧ್ಯ 

     

ನಿನ್ನ ನಯನ ನನ್ನ ಖುಷಿಗೆ ಕಾರಣ...!!! 


"ನಿನ್ನ ಕೋಪ"

ಮೊದಲನೇ ನೋಟದಲ್ಲಿ ತಿಳಿದು ಹೋಯಿತು ನೀನು ತುಂಬಾ ಕೋಪ ಉಳ್ಳವನು ಎಂದು

ಆ ಕೋಪ ನನಗಿಷ್ಟವಾಗಿತ್ತು. ಆದರೆ, ತಿಳಿದಿರಲಿಲ್ಲ ಆ ಕೋಪ ನನಗೂ ಕೋಪ ತೋರಿಸಬಹುದು ಎಂಬುದನ್ನು!

ಆ ಕೋಪ ನನ್ನ ಜೀವನಕ್ಕೆ ಮುಳ್ಳಾಗಿ ಹೋಯಿತು. ಆ ಕೋಪ ನಮ್ಮ ಗೆಳೆತನವನ್ನು ಮುರಿಯಿತು. ಆದರೆ, ಆ ಗೆಳೆತನ ನೀ ಮುರಿದರು ಸಹ ನನ್ನಲ್ಲಿ ಈಗಲು ಹಾಗೆ ಇದೆ. ಆದರೆ ಜೋಡಿಸಲು ಎಷ್ಟು ಪ್ರಯತ್ನಿಸಿದ ಆಗುತ್ತಿಲ್ಲ. ಒಂದು ದಿನ ಸರಿಯಾಗಬಹುದು ಎಂಬುದು ನನ್ನ ನಂಬಿಕೆ.

ಕೋಪ ಎಂಬುದು ನನ್ನನ್ನು ಹೀಗೆ ಆವರಿಸಬಹುದು ಎಂಬುದನ್ನು ನಾನು ಊಹೆಯು ಮಾಡಿರಲಿಲ್ಲ


ನಿನ್ನ ಕೋಪ ನಿನಗೆ ಅದನ್ನು ನೀನು ಬಿಡಲಿಲ್ಲ. ಇಲ್ಲಿ ನನ್ನ ದಿವಸದ ಕಣ್ಣೀರು ನಿನಗೆ ಕಾಣಿಸಲೇ ಇಲ್ಲ.! 

 

ಆ ಕಣ್ಣೀರೆ ನಿನ್ನನ್ನು ನನ್ನಿಂದ ಮರೆಯಲು ಬಿಡುತ್ತಿಲ್ಲ 

ಕೋಪ ಬಂದರು ಸಹ  ಮರೆಯಲು ಅಸಾಧ್ಯ ಎಂದು ಹೇಳುತ್ತದೆ. ಈ ನನ್ನ ಮನಸ್ಸು

ನನ್ನ ಈ ದಿವಸದ ಕಣ್ಣೀರು ನಿನ್ನ ಕೋಪ ನಾ ಮರೆಯಲು ಸಾಧ್ಯವೇ....?

ಉತ್ತರ: ಎಂದಿಗೂ ಅಸಾಧ್ಯ

ನಾ ನಿನ್ನ ಕೋಪವನ್ನು ಇಷ್ಟಪಟ್ಟೆ ಆದರೆ ಅದು ಮುಳ್ಳಾಗಿ ನನ್ನನ್ನೇ ಆವರಿಸಬಹುದು ಎಂಬುದನ್ನು ಊಹೆ ಮಾಡಿರಲಿಲ್ಲ... 

  

ಜೀವನದಲ್ಲಿ ಅಮೂಲ್ಯವಾದದು ಅಂದರೆ ಅದು "ನೆನಪುಗಳು". ನೆನಪುಗಳು ಜೀವನದ ಯಾವುದೇ ಘಟನೆಗಳನ್ನು ಹಾಗೂ ವ್ಯಕ್ತಿಗಳನ್ನು ಮರೆಯಲು ಬಿಡುವುದಿಲ್ಲ ಆ ನೆನಪುಗಳೇ ನನ್ನ ಜೀವನದ ಯಾವುದೇ ನೆನಪುಗಳನ್ನು ಸಹ ಮರೆಯಲು ಬಿಡುತ್ತಿಲ್ಲ.

ಮರೆಯಲು ಸಾಧ್ಯ ಇರುವುದೇ ನೆನಪುಗಳಿಂದ ಆದರೆ ಅವುಗಳೇ ಮರೆಯಲು ಬಿಡದಿದ್ದರೆ "ಮರೆಯಲು" ಯಾವತ್ತೂ ಅಸಾಧ್ಯ.


ನೀನು ನನ್ನ ಜೀವನದಲ್ಲಿ ಈಗ ಇಲ್ಲದಿದ್ದರೂ ಸಹ ನಿನ್ನೊಟ್ಟಿಗೆ ಕಳೆದ ನೆನಪುಗಳು ನನ್ನನ್ನು ಯಾವತ್ತು ಕಾಡುತ್ತದೆ..... ಆದರಿಂದ ನಾನು ನಿನ್ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

  

ನಿನಗಾಗಿ ಕಾಯುವೆ ನಾ ಯಾವುದೇ ನೆನಪುಗಳನ್ನು ಮರೆಯದೆ..!  



- ಅಭಿಜ್ಞಾ ಆಮೀನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top