ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಶ್ರೀಗಳ ಪಟ್ಟಾಭಿಷೇಕ ರಜತ ಮಹೋತ್ಸವ

Upayuktha
0

ಮಂಗಳೂರು: ಶ್ರೀ ಕ್ಷೇತ್ರ ಕರ್ಕಿ, ಹೊನ್ನಾವರ ತಾಲೂಕು ಉತ್ತರ ಕನ್ನಡ ಜಿಲ್ಲೆಯ ಶ್ರೀ ಜ್ಞಾನೇಶ್ವರಿ ಪೀಠ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪ.ಪೂ.ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ  ಭಾರತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ "ರಜತ ಮಹೋತ್ಸವ" ಕಾರ್ಯಕ್ರಮವು ಇಂದು (ಏ.16- ಭಾನುವಾರ) ಉರ್ವಾ, ಆಶೋಕನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜರಗಿತು.


ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಆಶೀರ್ವಾದ ನೀಡಿದ ಪ.ಪೂ.ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮೀಜಿಯವರು, ಕಾಯಾ- ವಾಚಾ- ಮನಸ್ಸು ಸಂಸ್ಕಾರ ಶುದ್ಧಿಯಿಂದ ನಮ್ಮ ಉನ್ನತಿಯನ್ನು ನಾವೇ ಮಾಡಿಕೊಳ್ಳಬೇಕು. ಶೃದ್ಧೆ- ಬದ್ದತೆ- ಪ್ರಾಮಾಣಿಕತೆ ಇದ್ದರೆ ದೇವರ, ಗುರುಹಿರಿಯರ ಕೃಪೆ ಆಶೀರ್ವಾದ ಖಂಡಿತಾ ಇರುತ್ತದೆ ಎಂದರು.


ದೈವಜ್ಞ ಬ್ರಾಹಣ ಸಮಾಜಕ್ಕೆ ಒಂದು ಗುರುಪೀಠ ಸ್ಥಾಪನೆಗೆ ಹಗಲಿರುಳೂ ದುಡಿದು, ಸಾಕಷ್ಟು ವಿರೋಧಗಳ ಮಧ್ಯೆಯೂ ಶ್ರೀ ಜ್ಞಾನೇಶ್ವರಿ ದೇವಿಯ ಕೃಪೆಯಿಂದ ಯಶಸ್ಸು ಸಾಧಿಸಿದ ನಮ್ಮ ಹಿರಿಯರಾದ ದಿ. ಶ್ರೀ ಎಂ. ಮೋಹನ್ ಶೇಟ್ ಅವರು ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಕುಲಗುರುಗಳು ಹಾಗೂ ಸ್ವತಂತ್ರ ಗುರುಪೀಠ ಸ್ಥಾಪಿಸಿದರು.  ಇಂದು ನಮ್ಮ ಸಮಾಜವು ಕುಲದೇವರ, ಕುಲಗುರುಗಳ ಅನುಗ್ರಹದಿಂದ ಸರ್ವ ರಂಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.


ಕಾರ್ಯಕ್ರಮದಲ್ಲಿ ಹಲವಾರು ಮಂದಿ ಸೇವಾ ಕರ್ತರನ್ನು ಸ್ವಾಮೀಜಿಯವರು ಗೌರವಿಸಿದರು. ಇದೇ ವೇಳೆ ಸ್ವಾಮೀಜಯವರಿಗೆ ಸ್ವರ್ಣ ಕಿರೀಟೋತ್ಸವ ಹಾಗೂ ರಜತ ಸಿಂಹಾಸನವನ್ನು ಸಮರ್ಪಿಸ ಲಾಯಿತು.


ಎಸ್. ರಮಾನಂದ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಕೆ.ಸುಧಾಕರ್ ಶೇಟ್, ಶ್ರೀಮತಿ ಪುಷ್ಪ ಕೃಷ್ಣಾನಂದ ಶೇಟ್, ಮಂಜುನಾಥ್ ಶೇಟ್ ಕೆ, ಶ್ರೀಪಾದ ರಾಯ್ಕರ್, ಎಸ್. ಸುಬ್ರಹ್ಮಣ್ಯ ಶೇಟ್, ಶ್ರೀಮತಿ ಕಲ್ಪನಾ ಎಸ್. ಶೇಟ್, ನಾಗರಾಜ್ ಶೇಟ್, ಶ್ರೀಮತಿ ಜಯಶ್ರೀ ನಾಗರಾಜ್ ಶೇಟ್, ಶ್ರೀಮತಿ ಸುಲೋಚನಾ ಚಂದ್ರ ಶೇಟ್, ಎಮ್. ಆಶೋಕ್ ಶೇಟ್, ಮೋಹನ್ ಎಸ್. ರೇವಣ್ಕರ್, ಶ್ರೀಮತಿ ವಿದ್ಯಾ ಅಶೋಕ್ ಶೇಟ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದೈವಜ್ಞ ಶ್ರೀ ಶ್ರೀಗಳ ಪಟ್ಟಾಭಿಷೇಕ ರಜತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಕೆ.ಸುಧಾಕರ್ ಶೇಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಎಸ್. ರಾಜೇಂದ್ರಕಾಂತ್ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎಸ್. ಪ್ರಶಾಂತ್ ಶೇಟ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top