ಬದಿಯಡ್ಕ: ರಂಗಸಿರಿ ಸಾಂಸ್ಕ್ರತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಸುತ್ತಿರುವ ಗ್ರಾಮ ಪರ್ಯಟನೆಯ 2ನೇ ಕಾರ್ಯಕ್ರಮ ಶನಿವಾರ (ಏ.29) ಅಪರಾಹ್ನ 2.30ರಿಂದ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸುವರು.
ಲೇಖಕ, ಕನ್ನಡಪರ ಹೋರಾಟಗಾರ, ಮುಳ್ಳೇರಿಯದ ಹಿರಿಯ ನಾಗರಿಕ ವೇದಿಕೆಯ ನಿಕಟಪೂರ್ವ ಕಾರ್ಯದರ್ಶಿಯಾದ ಕೆ.ಎಂ. ಗೋಪಾಲಕೃಷ್ಣ ಭಟ್ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಕಾಸರಗೋಡಿನ ಸಾಂಸ್ಕ್ರತಿಕ ಸವಾಲುಗಳು ಎಂಬ ವಿಷಯದಲ್ಲಿ ಸುಂದರ ಬಾರಡ್ಕ ವಿಚಾರ ಮಂಡಿಸುವರು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಬಾರಡ್ಕ ಶುಭ ಹಾರೈಸುವರು.
ಇದೇ ಸಂದರ್ಭದಲ್ಲಿ ರಂಗಸಿರಿಯ ನೂತನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಉದ್ಘಾಟಿಸಲಾಗುವುದು. ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ರಂಗಸಿರಿ ಸಾಂಸ್ಕ್ರತಿಕ ವೇದಿಕೆಯ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ