ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಂಯೋಜಿತ ಕಾಲೇಜುಗಳ ಕರ್ತವ್ಯನಿರತ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಬೋಧಕರ ಸಂಘ ಉದ್ಘಾಟನೆ
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳ ಕರ್ತವ್ಯನಿರತ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಬೋಧಕರುಗಳ ಸಂಘವನ್ನು ಆದಿತ್ಯವಾರ ಉದ್ಘಾಟಿಸಿ ಮಾತನಾಡಿದಅವರು, ವಿಶ್ವವಿದ್ಯಾನಿಲಯದಲ್ಲಿ ಕ್ರೀಡೆಗೆ ಅಗತ್ಯವಿರುವ ಸಂಪನ್ಮೂಲವಿದ್ದು, ಅದರ ಸದ್ಬಳಕೆ ಆಗುತ್ತಿಲ್ಲ. 1383 ಸಂಯೋಜಿತ ಕಾಲೇಜುಗಳಲ್ಲಿ ಸಾಕಷ್ಟು ಕ್ರೀಡಾ ವಿದ್ಯಾರ್ಥಿಗಳಿದ್ದರೂ ದೈಹಿಕ ನಿರ್ದೇಶಕರ ಕೊರತೆ ಇದೆ. ಆರೋಗ್ಯಕ್ಕೆ ಮಹತ್ವ ನೀಡುವ ನೆಲೆಯಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು, ಪರಿಣಾಮಕಾರಿಯಾದ ದೈಹಿಕ ಚಟುವಟಿಕೆಯ ಮೂಲಕ ದೇಹದ ಸದೃಢತೆಗೂ ಆದ್ಯತೆ ನೀಡಬೇಕು ಎಂದರು.
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯುತನ್ನ ಸಿಂಡಿಕೇಟ್ ಸದಸ್ಯರಾಗಲು ದೈಹಿಕ ನಿರ್ದೇಶಕರಿಗೂ ಅವಕಾಶ ನೀಡುವುದರಿಂದ ಕ್ರೀಡಾ ವಿಭಾಗದ ಸಾಧಕ ಭಾದಕಗಳನ್ನು ಚರ್ಚಿಸಲು ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ ಕ್ರೀಡಾ ಮೀಸಲಾತಿಯಿಂದ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡಬೇಕು, ಈ ಮೂಲಕ ಸಂಘರ್ಷಕ್ಕೆದಾರಿ ಮಾಡದೆ ಸೌಹಾರ್ದತೆಯಿಂದ ಸಂಘಟನೆ ಮುಂದುವರಿಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಆನಂದ್‍ಎಸ್. ಕಿರಿಶಾಲ್ ಸಂಘಟನೆಗಳು ಕುಟುಂಬವಿದ್ದಂತೆ, ಇಲ್ಲಿ ಪಾರದರ್ಶಕತೆಗೆ ಒತ್ತು ನೀಡಿ ಉದ್ದೇಶ ಮತ್ತು ಕಾರ್ಯ ಸಾಧನೆಯತ್ತ ತೊಡಗಿಸಿಕೊಸಿಕೊಳ್ಳುವುದು ಅಗತ್ಯ. ಸಂಘಟನಾ ಮನೋಭಾವದಿಂದ ವಿವಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದರು.
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಂಯೋಜಿತ ಕಾಲೇಜುಗಳ ಕರ್ತವ್ಯನಿರತ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಬೋಧಕರುಗಳ ಸಂಘದ ಅಧ್ಯಕ್ಷ ಡಾ. ಜೋಸೆಫ್ ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉದ್ಘಾಟನಾ ಸಮಾರಂಭದ ಬಳಿಕ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಮಧುಕಬಡ್ಡಿ ಕಾರ್ಯಾಗಾರ ನಡೆಸಿಕೊಟ್ಟರು.
ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಜಯಕುಮಾರ್, ದಾವಣಗೆರೆಯ ಜೆಜೆಎಂ ಸಂಸ್ಥೆಯ ಗೋಪಾಲ ಕೃಷ್ಣ, ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ದೈಹಿಕ ನಿರ್ದೇಶಕ ಮಹೇಶ್, ಎಜೆ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಹರೀಶ್‍ಗೌಡ, ಆಳ್ವಾಸ್ ಸಂಸ್ಥೆಯ ದೈಹಿಕ ನಿರ್ದೇಶಕ ಅವಿನಾಶ್ ಎಸ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಸುರೇಶ್ ಸ್ವಾಗತಿಸಿ, ಶಿವಮೊಗ್ಗ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಡಾ. ರಮೇಶ್ ನಾಯಕ್ ವಂದಿಸಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ