ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Upayuktha
0

 


ಪುತ್ತೂರು: ವಿವಾಹಿತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ಎಂಬಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಉದ್ದದಪಳಿಕೆ ಪುರುಷೋತ್ತಮ ಅವರ ಪತ್ನಿ ಪುಣ್ಯಶ್ರೀ ಮೃತ ಮಹಿಳೆಯಾಗಿದ್ದಾಳೆ. ಪುತ್ತೂರಿನ ಬೆಟ್ಟಂಪಾಡಿಯ ಗುಮ್ಮಟಗದ್ದೆಯ ಬಾಲಕೃಷ್ಣ ಅವರು ಪುತ್ರಿ ಪುಣ್ಯಶ್ರೀಯವರನ್ನು 2017ರ ಜನವರಿ 1ಕ್ಕೆ ಬೆಳ್ತಂಗಡಿಯ ಪುರುಷೋತ್ತಮ ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ಪುರುಷೋತ್ತಮ ಮತ್ತು ಪುಣ್ಯಶ್ರಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುಣ್ಯಶ್ರೀ ಅವರು ಕಳೆದ ಎಪ್ರಿಲ್ 4ರಂದು ತವರು ಮನೆಗೆ ಬಂದಿದ್ದರು.


ಎಪ್ರಿಲ್ 10ರಂದು ಅವರು ಪತಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ರಾತ್ರಿ ವೇಳೆ ಚಿಕ್ಕಮ್ಮ ಲತಾ ಅವರ ಮೊಬೈಲ್‌ಗೆ ಕರೆ ಮಾಡಿ ತಾನು ಸಾಯುವುದಾಗಿ ಹೇಳಿ ಬಾವಿಗೆ ಹಾರಿದ್ದರು. ಪುಣ್ಯಶ್ರೀಯವರನ್ನು ಬಾವಿಯಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಪ್ಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top