ಧರ್ಮಕ್ಕೆ ಅವಿನಾಶಿ ಗುಣವಿದೆ: ಯಶಸ್ವಿ

Upayuktha
0


ಪುತ್ತೂರು: ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವೆನ್ನುವುದು ಸತ್ಯ, ಸತ್ಯಕ್ಕೆ ಹೇಗೆ ಸಾವಿಲ್ಲವೋ ಹಾಗೆಯೇಧರ್ಮಕ್ಕೆ ಸಾವಿಲ್ಲ. ಧರ್ಮಕ್ಕೆ ಅವಿನಾಶಿ ಗುಣವಿದೆ. ಪೂರ್ವಜರಿಂದ ಬಂದಂತಹ ಆಚಾರ ವಿಚಾರಗಳನ್ನು ಒಪ್ಪಿಕೊಳ್ಳಬೇಕಾದರೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಬೇಕು.

 

ಹಿಂದೂ ಧರ್ಮವು  ಸಮರವನ್ನು ಸಾರುವ ಧರ್ಮವಲ್ಲಅದು ಶಾಂತಿಯನ್ನು ಸಾರುವ ಧರ್ಮ ಅದೇ ಹಿಂದೂಧರ್ಮ. ಶಾಂತಿ, ಸಹನೆ, ತ್ಯಾಗ ಇದೆಲ್ಲಾಇರುವುದೇ ಹಿಂದೂಧರ್ಮದಲ್ಲಿ. ಸಂಸ್ಕೃತಿಯ ನಿಟ್ಟಿನಲ್ಲಿ ನಮ್ಮ ಹಿಂದೂಧರ್ಮ ಸೃಷಿಗೊಂಡಿದೆ. ಹಿಂದುತ್ವದಿಂದ ಮಾತ್ರ ಭಾರತ ಭಾರತವಾಗಿ ಉಳಿಯಲು ಸಾಧ್ಯ. ಆಚಾರ ವಿಚಾರಗಳಿಗೆ ವೈಜ್ಞಾನಿಕತೆ ಇದೆ ಎಂದು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯುತ್ತ) ಪುತ್ತೂರು ಮತ್ತು  ಐಕ್ಯೂಎಸಿಜಂಟಿಆಶ್ರಯದಲ್ಲಿ ನಡೆದ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ದೇಶಕ್ಕಾಗಿ ದುಡಿಯಬೇಕು ಭೂಮಿಯನ್ನುತಾಯಿಯಂತೆ ನೋಡಬೇಕು. ಪುಸ್ತಕಗಳನ್ನು ಓದಬೇಕು ಅಥವಾ ಹೇಳಿದ್ದನ್ನು ತಿಳಿದುಕೊಳ್ಳಬೇಕು ಆಗಾದಾಗ ಮಾತ್ರಧರ್ಮ ಉಳಿಯಲು ಸಾಧ್ಯಎಂದರು.


ದೇಶಭಕ್ತಿ, ಸನಾತನಧರ್ಮದ ಬಗ್ಗೆ ಕಾಳಜಿ ಇರಬೇಕು.ಧರ್ಮ ಎನ್ನುವ ವಿಷಯಕ್ಕೆ  ಪಠ್ಯಕ್ರಮ ಹಾಗೂ ಶಿಕ್ಷಕರೆಂಬುವವರು ಇಲ್ಲಇದಕ್ಕೆಲ್ಲ ನಮ್ಮಆಸಕ್ತಿಯೇ ಮುಖ್ಯ ಬಹಳಷ್ಟು ಅಧ್ಯಯನ ಮಾಡಬೇಕು ಎಂದು  ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲುರಾಯ ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಷ್ಣುಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಎಂ. ಶ್ರೀನಿವಾಸ ಸಾಮಂತ್,  ವಾಣಿಜ್ಯ ವಿಭಾಗದ ಉಪನ್ಯಾಸಕಿ ಡಾ.ರವಿಕಲಾ ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನುಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎಂ ಸ್ವಾಗತಿಸಿ, ರಕ್ಷಿತಾಎಸ್ ವಂದಿಸಿ.ಚೈತನ್ಯ ಲಕ್ಷ್ಮೀ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top