ಪುತ್ತೂರು: ಸಮಾಜವನ್ನು ಸಂಸ್ಕಾರಯುತಗೊಳಿಸಬೇಕಿದ್ದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಅದರಲ್ಲೂ ಎಳೆಯ ಹಂತದಲ್ಲಿ ದೊರಕುವ ಶಿಕ್ಷಣದ ಗುಣಮಟ್ಟ ನಾಳಿನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ನೆಲೆಯಲ್ಲಿ ಆರಂಭಿಕ ಹಂತದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಿ ಭವಿಷ್ಯದ ಭಾರತವನ್ನು ಭದ್ರಗೊಳಿಸಬೇಕೆಂಬ ಕಲ್ಪನೆಯಡಿ ಅರಳಿ ನಿಂತ ಸಂಸ್ಥೆ ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದ ಈ ವಿದ್ಯಾಲಯ ಪುತ್ತೂರಿನ ಮೊತ್ತಮೊದಲ ಸಿಬಿಎಸ್‍ಇ ವಿದ್ಯಾಲಯ ಅನೇಕ ಹಿರಿಮೆಗೆ ಪಾತ್ರವಾಗಿದೆ. ಪುತ್ತೂರಿನ ಮಂದಿಗೆ ಸಿಬಿಎಸ್‍ಇ ಶಿಕ್ಷಣವನ್ನು ದಶಕದ ಹಿಂದೆಯೇ ಒದಗಿಸಿಕೊಟ್ಟ ಅಗ್ಗಳಿಗೆ ಈ ವಿದ್ಯಾಲಯದ್ದು. ಹಾಗಾಗಿ ರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಪುತ್ತೂರಿಗೆ ತಂದು ಈ ಪರಿಸರದ ಎಷ್ಟೋ ಮಂದಿ ಹೆತ್ತವರ ಕನಸನ್ನು ಈ ವಿದ್ಯಾಲಯ ನನಸು ಮಾಡಿದೆ.
ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿ:
ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ದಶಕದ ಹಿಂದಿನಿಂದಲೇ ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಮುಂದಿನ ದಿನಗಳಲ್ಲಿ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ, ತನ್ಮೂಲಕ ವೈಜ್ಞಾನಿಕ ರಂಗದಲ್ಲಿ ತನ್ನ ಛಾಪನ್ನೊತ್ತುವ ನೆಲೆಯಲ್ಲಿ ನೂತನ ಕಾರ್ಯಯೋಜನೆ ಹಮ್ಮಿಕೊಂಡಿದೆ. ಆ ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಮೊತ್ತಮೊದಲ ಬಾರಿಗೆ ವಿದ್ಯಾಲಯವೊಂದರಲ್ಲಿ ಇಂತಹದ್ದೊಂದು ಕಲಿಕೆ ಆರಂಭಗೊಳ್ಳುತ್ತಿದೆ.
ವಿದ್ಯಾರ್ಥಿಗಳಿಗೆ ಏನು ಲಾಭ? :
ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಸಾಕಷ್ಟು ಪ್ರವರ್ಧಮಾನಕ್ಕೆ ಬರುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಈ ಎರಡು ಸಂಗತಿಗಳ ನೆಲೆಯಲ್ಲಿಯೇ ಬೆಳೆದುಬರಲಿದೆ. ಈಗಾಗಲೇ ಇಂಜಿನಿಯರಿಂಗ್‍ನಂತಹ ಕಾಲೇಜುಗಳಲ್ಲಿ ಈ ವಿಷಯದಲ್ಲೇ ಪದವಿ ಶಿಕ್ಷಣ ಕೈಗೆತ್ತಿಕೊಳ್ಳಲಾಗಿದ್ದು ಅನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅಪಾರ ಬೇಡಿಕೆ ಈ ಕ್ಷೇತ್ರಕ್ಕಿದೆ.
ಜತೆಗೆ, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಕಂಪ್ಯೂಟರ್ ಚಿಪ್ ತಯಾರಿ, ರೋಬೋಟ್ ನಿರ್ಮಾಣದಂತಹ ಕಾರ್ಯಗಳನ್ನು ಈವರೆಗೆ ಇಂಜಿನಿಯರಿಂಗ್ ಓದುತ್ತಿರುವ ಅಥವ ಓದಿದ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಸಂದರ್ಭವಿದ್ದರೆ ಇನ್ನು ಮುಂದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಹ ಮಾರ್ಗದರ್ಶನ, ಪ್ರೇರಣೆ ದೊರಕಲಿದೆ. ಮನೆಯಲ್ಲಿಯೇ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕಲೆ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ. ಇದರಿಂದಾಗಿ ವಿಜ್ಞಾನ ಕ್ಷೇತ್ರಕ್ಕೆ ಅಂಬಿಕಾ ವಿದ್ಯಾಲಯ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯ ಈ ತರಬೇತಿಯಿಂದ ನಡೆಯಲಿದೆ.
ಇದಲ್ಲದೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಷಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ಸುಲಭ ಸಾಧ್ಯವಾಗಲಿದೆ. ಅಂಬಿಕಾ ವಿದ್ಯಾಲಯದಲ್ಲಿ ಈ ತರಬೇತಿಯನ್ನು ಪಡೆದಿರುವುದು ಅವರ ಭವಿಷ್ಯಕ್ಕೆ ಬಹುದೊಡ್ಡ ಪ್ರಯೋಜನವನ್ನೊದಗಿಸಲಿದೆ.
ದೇಶಕ್ಕೂ ಇದೆ ಪ್ರಯೋಜನ:
ಇಂದು ನ್ಯಾನೋ ತಂತ್ರಜ್ಞಾನದಲ್ಲಿ ಚೀನಾ ಇಡಿಯ ಪ್ರಪಂಚದಲ್ಲೇ ಪ್ರಭುತ್ವವನ್ನು ಸಾಧಿಸಲು ಹೊರಟಿದೆ. ಯಾವುದೇ ವಸ್ತುಗಳ ತಯಾರಿಕೆ, ಅದರ ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಎನಿಸುತ್ತಿದೆ. ಈ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಚೀನಾದ ತಾಂತ್ರಿಕ ದಾಸ್ಯಕ್ಕೆ ಪ್ರಪಂಚವೇ ಒಳಗಾಗಬೇಕಾದ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಸಡ್ಡು ಹೊಡೆಯುವ ಬುದ್ಧಿಮತ್ತೆ ಮತ್ತು ಸಾಧ್ಯತೆ ಭಾರತಕ್ಕಷ್ಟೇ ಇದೆ ಎಂಬುದು ಜಗತ್ತಿಗೇ ತಿಳಿದಿದೆ ಹಾಗೂ ಭಾರತದಿಂದ ನಿರೀಕ್ಷೆ ಸಾಕಷ್ಟಿದೆ. ಹಾಗಾಗಿ ನಮ್ಮ ಮಕ್ಕಳನ್ನು ಎಳವೆಯಿಂದಲೇ ರೂಪಿಸಲು ಅಂಬಿಕಾ ವಿದ್ಯಾಲಯ ಸಜ್ಜಾಗಿದೆ. ದೇಶ ಮೊದಲು ಎಂಬ ಕಲ್ಪನೆಯಡಿ ಶಿಕ್ಷಣದ ಪ್ರಸರಣದಲ್ಲಿ ತೊಡಗಿರುವ ಅಂಬಿಕಾ ವಿದ್ಯಾಲಯ ಇದೀಗ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದೊಂದಿಗೆ ಅದಕ್ಕೆ ಪೂರಕವಾದ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ.
ಇಂಟಲಿಜೆಂಟ್ ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್:
ವಿದ್ಯಾರ್ಥಿಗಳ ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂಟೆಲಿಜೆಂಟ್ ಇಂಟರ್ಯಾಕ್ಟಿವ್ ಸ್ಮಾರ್ಟ್ ಬೋಡ್‍ಗಳನ್ನು ಅಳವಡಿಸಲಾಗುತ್ತಿದೆ. ಇಂತಹ ಒಂದು ಸ್ಮಾಟ್ ಬೋರ್ಡ್‍ಗೆ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 3 ಡಿ ತಂತ್ರಜ್ಞಾನ, 4 ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರ್ಯಾಕ್ಟಿವ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮಥ್ರ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸಲಿದೆ.
ವಿಜ್ಞಾನ ಮಾದರಿಗಳಿಗೆ ಪ್ರೋತ್ಸಾಹ:
ಮಕ್ಕಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಅಂಬಿಕಾ ವಿದ್ಯಾಲಯ ಅಡಿಯಿಟ್ಟಿದೆ. ಆ ನೆಲೆಯಲ್ಲಿ ಎಳೆಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯ ಈ ಸಂಸ್ಥೆಯಲ್ಲಿ ನಿರಂತರವಾಗಿ ನಡೆದುಬರುತ್ತಿದೆ. ಇದರ ಪರಿಣಾಮದಿಂದ ಅದಾಗಲೇ ಇಲ್ಲಿನ ವಿದ್ಯಾಥಿಗಳು ರಾಷ್ಟ್ರಮಟ್ಟದಲ್ಲೂ ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಕೀರ್ತಿ ಗಳಿಸಿದ್ದಾರೆ.
ಈಜು ಕೊಳ ಹೊಂದಿರುವ ಪುತ್ತೂರಿನ ಏಕೈಕ ಶಿಕ್ಷಣ ಸಂಸ್ಥೆ :
ವಿದ್ಯಾಲಯದ ಮುಂಭಾಗದಲ್ಲಿ ಒಂದು ಅತ್ಯುತ್ಕೃಷ್ಟ ದರ್ಜೆಯ ಈಜುಕೊಳವನ್ನು ನಿರ್ಮಿಸಿರುವುದು ಪುತ್ತೂರಿನ ಮಟ್ಟಿಗೆ ಮತ್ತೊಂದು ದಾಖಲೆ ಎನಿಸಿದೆ. ಪುತ್ತೂರಿನಲ್ಲಿ ಈಜು ಕೊಳ ಹೊಂದಿರುವ ಏಕೈಕ ವಿದ್ಯಾಲಯ ಎಂಬ ಖ್ಯಾತಿಯೂ ಈ ಸಂಸ್ಥೆಗಿದೆ. ವಿದ್ಯಾರ್ಥಿಗಳಿಗೆ ಈಜನ್ನು ಕಲಿಸುವ ಕಾರ್ಯ ಇಲ್ಲಿ ನಿರಂತರವಾಗಿ ಸಾಗುತ್ತಿದೆ.
ಇದರೊಂದಿಗೆ ಅತ್ಯುತ್ಕೃಷ್ಟ ಹಾಗೂ ಆಧುನಿಕ ಮಾದರಿಯ ಅಡುಗೆ ಮನೆ ತಲೆಎತ್ತಿ ನಿಂತಿದ್ದು ಶುಚಿ ರುಚಿಯಾದ ಆಹಾರ ಎಳೆಯ ಮಕ್ಕಳಿಗೆ ಲಭ್ಯವಾಗುತ್ತಿದೆ. ಮನೆಯ ರೀತಿಯ ಊಟದ ವ್ಯವಸ್ಥೆ ಸಂಸ್ಥೆಯಲ್ಲಿ ದೊರಕುತ್ತಿರುವುದು ಹೆತ್ತವರ ಸಂತಸಕ್ಕೆ ಕಾರಣವಾಗಿದೆ.
ವಿಶೇಷತೆಗಳು:
ಕಲಿಕೆಯಲ್ಲಿ ಹಿಂದುಳಿದವರಿಗಾಗಿ ವಿಶೇಷ ತರಗತಿಗಳು, ತಂತ್ರಜ್ಞಾನ ಆಧಾರಿತ ತರಗತಿಗಳು ಈ ಶಿಕ್ಷಣ ಸಂಸ್ಥೆಯಲ್ಲಿದೆ. ಹಾಗೆಯೇ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ ಅಥವ ನಿರ್ವಹಿಸುತ್ತಿರುವ ಯೋಧರ ಮಕ್ಕಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇಲ್ಲಿ ದೊರಕುತ್ತದೆ. ಮಾತ್ರವಲ್ಲದೆ ವಿಶಾಲವಾದ ಕ್ರೀಡಾಂಗಣ, ಉತ್ಕೃಷ್ಟ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳೇ ಮೊದಲಾದವುಗಳು ಸಂಸ್ಥೆಯನ್ನು ಮತ್ತಷ್ಟು ಆಪ್ತವೆನಿಸುವಂತೆ ಮಾಡಿವೆ. ಕಳೆದ ವರ್ಷ ರೂಪಿಸಲಾಗಿರುವ ವಿಸ್ತಾರವಾಗಿರುವ ಶ್ರೀ ಶಂಕರ ಸಭಾಭವನ ಎಂಬ ಸಭಾಂಗಣ ಸಂಸ್ಥೆಗೆ ಹೆಮ್ಮೆಯೆನಿಸಿದೆ. ಇವೆಲ್ಲದರ ಜತೆಗೆ ಯೋಗವನ್ನು ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಮೊದಲ ಶಿಕ್ಷಣ ಸಂಸ್ಥೆಯಾಗಿ ಅಂಬಿಕಾ ಗುರುತಿಸಿಕೊಂಡಿದೆ.
ಸದೃಢ ರಾಷ್ಟ್ರ ನಿರ್ಮಾಣದ ಕನಸು:
ಸದೃಢ ರಾಷ್ಟ್ರ ನಿರ್ಮಾಣದ ಸದುದ್ದೇಶದೊಂದಿಗೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆ ಸಮೇತವಾಗಿ ಭಾರತೀಯ ಸಂಸ್ಕೃತಿಯ ರಾಯಭಾರಿಗಳನ್ನಾಗಿ ಪರಿವರ್ತಿಸುವ ಧ್ಯೇಯೋದ್ದೇಶ ಹೊಂದಿ ಈ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿಯೇ ಭಾರತೀಯ ಸಂಸ್ಕಾರ, ಸಂಸ್ಕೃತಿಯ ಬಗೆಗೆ ಮಕ್ಕಳಿಗೆ ಇಲ್ಲಿ ತಿಳಿಹೇಳಲಾಗುತ್ತಿದೆ. ಆಚಾರ-ವಿಚಾರಗಳ ಕಲ್ಪನೆಯನ್ನು ತುಂಬಲಾಗುತ್ತಿದೆ. ಅತ್ಯುತ್ತಮ ನಾಗರಿಕರನ್ನು ರೂಪಿಸುವ ನೆಲೆಯಲ್ಲಿ ಇಂತಹ ಹತ್ತು ಹಲವು ವಿಚಾರಗಳು ಈ ಸಂಸ್ಥೆಯಲ್ಲಿ ಜಾರಿಯಲ್ಲಿವೆ. ದೇಶಕ್ಕಾಗಿ ರಕ್ತತರ್ಪಣ ಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ, ಸೈನಿಕರ ಬಗೆಗೆ, ಸತ್ಯದ ಬಗೆಗೆ ಈ ಸಂಸ್ಥೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬ ಹರಿದಿನಗಳ ಮಹತ್ವವನ್ನು ಆಚರಣೆಯ ಮೂಲಕ ಸಾಧಿಸಿ ತೋರಿಸಲಾಗುತ್ತಿದೆ. ಹಾಗಾಗಿಯೇ ಚೌತಿ, ಕೃಷ್ಣಾಷ್ಟಮಿ, ಶಿವರಾತ್ರಿ, ಯುಗಾದಿಯಂತಹ ಹಬ್ಬಗಳು ಇಲ್ಲಿ ವಿಜೃಂಭಣೆಯಿಂದ ಸಾಗುತ್ತವೆ. ಸ್ವಾತಂತ್ರ್ಯ ದಿನ, ಕಾರ್ಗಿಲ್ ವಿಜಯ ದಿವಸ್‍ನಂತಹ ದಿನಾಚರಣೆಗಳು ಇಲ್ಲಿ ಮಹತ್ವ ಪಡೆಯುತ್ತವೆ.
ಮಕ್ಕಳನ್ನು ಶೈಕ್ಷಣಿಕವಾಗಿ ಮಾತ್ರಲ್ಲದೆ ದೇಶಪ್ರೇಮಿಗಳನ್ನಾಗಿ, ಸಂಸ್ಕಾರಯುಕ್ತರನ್ನಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನಮ್ಮ ಮಕ್ಕಳು ದೇಶಕ್ಕೆ ಕೊಡುಗೆಯಾಗಬೇಕೆಂಬ ಕನಸಿನೊಂದಿಗೆ ಇಲ್ಲಿ ಶೈಕ್ಷಣಿಕ ಚಟುವಟಿಕೆಗಳು ಜಾರಿಗೊಳ್ಳುತ್ತಿವೆ ಎನ್ನುವುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.
ಜೀವನ ಶಿಕ್ಷಣ:
ವಿದ್ಯಾರ್ಥಿಗಳಿಗೆ ಪಠ್ಯತರಗತಿಗಳೊಂದಿಗೆ ಜೀವನ ಶಿಕ್ಷಣದ ಬಗೆಗೂ ತರಬೇತಿ ನೀಡಿಲಾಗುತ್ತಿರುವುದು ಇಲ್ಲಿನ ವಿಶೇಷ. ಸಣ್ಣ ಸಣ್ಣ ಮಕ್ಕಳಿಗೆ ಹೊದಿಕೆ, ಹಾಸಿಗೆ, ಬಟ್ಟೆ ಮಡಚುವುದರಿಂದ ತೊಡಗಿ ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣಪುಟ್ಟ ಇಲೆಕ್ಟ್ರಿಕ್ ತರಬೇತಿ, ಕ್ರಾಪ್ಟ್ ತಯಾರಿ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತಿದೆ. ಮತ್ತೂ ಮುಂದಿನ ಹಂತದವರಿಗೆ ಬ್ಯಾಂಕ್ ವ್ಯವಹಾರವೇ ಮೊದಲಾಗ ಅಗತ್ಯ ವಿಚಾರಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡುತ್ತಿರುವುದು ವಿದ್ಯಾರ್ಥಿಗಳಿಗೆ ವರದಾನವೆನಿಸುತ್ತಿದೆ. ಬಿಡುವಿಲ್ಲದ ಒತ್ತಡದ ಮಧ್ಯೆ ಮನೆಯಲ್ಲಿ ಇವೆಲ್ಲವನ್ನೂ ಕಲಿಸಲು ಅಸಾಧ್ಯವಾಗಿರುವ ಈ ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಯೇ ಈ ಜವಾಬ್ದಾರಿ ತೆಗೆದುಕೊಂಡಿರುವುದು ಹೆತ್ತವರ ಸಂತಸಕ್ಕೆ ಕಾರಣವಾಗಿದೆ.
ಮಕ್ಕಳು ಸರ್ವತೋಮುಖ ಬೆಳವಣಿಗೆ ಕಾಣುವಂತಾಗಬೇಕು ಅದಕ್ಕಾಗಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅಂಬಿಕಾ ವಿದ್ಯಾಲಯದಲ್ಲಿ ರೂಪಿಸಲಾಗಿದೆ. ನಮ್ಮಲ್ಲಿನ ಶಿಕ್ಷಕರು ಮಕ್ಕಳಿಗೆ ಮಾತೃಸ್ವರೂಪಿಗಳಾಗಿ ಅವರ ಬದುಕಿನ ಹಾದಿಯನ್ನು ವಿಸ್ತರಿಸುತ್ತಿದ್ದಾರೆ. ದೇಶಕ್ಕೆ ಅತ್ಯುತ್ತಮ ಪ್ರಜೆಗಳನ್ನು ಕೊಡಬೇಕೆಂಬ ನಮ್ಮ ಕನಸು ಸಾಕಾರಗೊಳ್ಳುತ್ತಿದೆ ಎನ್ನುತ್ತಾರೆ ಅಂಬಿಕಾ ಸಮೂಹ ಶಿಕ್ಷಣ ಸಮಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ.
ಬಾಲಗೋಕುಲ, ಎಲ್.ಕೆ.ಜಿ ಹಾಗೂ ವಿವಿಧ ತರಗತಿಗಳಿಗೆ ದಾಖಲಾತಿ:
2023-24ನೇ ಸಾಲಿನಿಂದ ಬಹುಬೇಡಿಕೆಯ ನೆಲೆಯಲ್ಲಿ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಬಾಲಗೋಕುಲ (ಪ್ರಿಕೆಜಿ) ಆರಂಭಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಮಂದಿ ಹೆತ್ತವರು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಇನ್ನು ಎಲ್.ಕೆ.ಜಿ., ಯು.ಕೆ.ಜಿ ಹಾಗೂ ಒಂಭತ್ತನೆಯವರೆಗಿನ ವಿವಿಧ ತರಗತಿಗಳೂ ಬಹುತೇಕ ಪೂರ್ಣಗೊಳ್ಳುತ್ತಿದ್ದು ಕೆಲವೇ ಕೆಲವು ದಾಖಲಾತಿಗಳು ಬಾಕಿ ಉಳಿದಿವೆ. ಅಂತೆಯೇ ಆಸಕ್ತರು ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಿದಲ್ಲಿ ದಾಖಲಾತಿ ಮಾಡಿಕೊಳ್ಳುವುದಕ್ಕೆ ಅವಕಾಶಗಳಿವೆ. ಸಂಪರ್ಕ ಸಂಖ್ಯೆ : 08251 233488, 298188, 9071655688
ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ವಿಶೇಷತೆಗಳು
• ಆರೋಗ್ಯಕರ ವಿದ್ಯಾರ್ಥಿ - ಶಿಕ್ಷಕರ ಅನುಪಾತ
• ಶಾಲಾ ಆವರಣದಲ್ಲಿ ಈಜುಕೊಳ ಸೌಲಭ್ಯ
• ಅತ್ಯುತ್ಕೃಷ್ಟ, ವಿಶಾಲ ಸಭಾಂಗಣ - ಶ್ರೀ ಶಂಕರ ಸಭಾಭವನ
• ಮಕ್ಕಳ ಸುರಕ್ಷತೆಗಾಗಿ ಸಿಸಿ ಟಿವಿ.
• ಆರಂಭಿಕ ಬಾಲ್ಯದ ಅಭಿವೃದ್ಧಿ ಪಠ್ಯಕ್ರಮ.
• ಯೋಗ, ದೈಹಿಕ ಶಿಕ್ಷಣ, ಕಲೆ ಮತ್ತು ಕರಕುಶಲ, ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಸಹ-ಪಠ್ಯ ಚಟುವಟಿಕೆಗಳು.
• ಯಕ್ಷಗಾನ, ಭರತನಾಟ್ಯ, ಕ್ರೀಡೆ, ಕಲೆ, ಸಂಗೀತ, ಕರಾಟೆ ಮತ್ತು ಸ್ಕೇಟಿಂಗ್ ತರಗತಿಗಳು.
• ಪ್ರಾಜೆಕ್ಟ್ ಆಧಾರಿತ ಕಲಿಕೆ.
• ಅಗತ್ಯವಿರುವವರಿಗೆ ಪರಿಹಾರ ತರಗತಿಗಳು.
• ಆಸಕ್ತಿದಾಯಕ ವಿಹಾರಗಳು ಮತ್ತು ವಿಹಾರಗಳು.
• ಸಮಾಲೋಚನೆ ಸಹಾಯ.
• ಪ್ರಥಮ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಸ್ಪತ್ರೆ.
• ಸಾಮಾಜಿಕ ಜಾಗೃತಿ ಕಾರ್ಯಕ್ರಮ
• 9ನೇ ಮತ್ತು 10ನೇ ತರಗತಿಗಳಲ್ಲಿ ಸಂಸ್ಕೃತ ಮತ್ತು ಹಿಂದಿ ಐಚ್ಛಿಕ ಭಾಷೆಯಾಗಿ.
• ಭಗವದ್ಗೀತೆ, ಮಹಾಕಾವ್ಯಗಳು, ರಾಷ್ಟ್ರೀಯ ವ್ಯಕ್ತಿಗಳು ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ವಿಶೇಷ ಗಮನ.
• ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಸಭಾಂಗಣ.
• ಡಿಜಿಟಲ್ ತರಗತಿಯ ಸೌಲಭ್ಯ – ಇಂಟೆಲಿಜೆಂಟ್ ಇಂಟರಾಕ್ಟಿವ್ ಬೋರ್ಡ್
• ಶಾಂತ ಮತ್ತು ಶಾಂತ ಅಧ್ಯಯನ ಸ್ನೇಹಿ ವಾತಾವರಣ.
• ಮೌಲ್ಯವರ್ಧಿತ ಕೌಶಲ್ಯ ಅಭಿವೃದ್ಧಿ ಕೋರ್ಸ್‍ಗಳು.
• ಸಾರಿಗೆ ಸೌಲಭ್ಯ.
• ಪಠ್ಯೇತರ ಚಟುವಟಿಕೆಗಳು ಪಠ್ಯಕ್ರಮವನ್ನು ಸಂಯೋಜಿಸಲಾಗಿದೆ.
• ವೃತ್ತಿಪರ, ಸಮರ್ಥ ಮತ್ತು ಕಾಳಜಿಯುಳ್ಳ ಅಧ್ಯಾಪಕರು.
• ಬ್ಯಾಸ್ಕೆಟ್ ಬಾಲ್ ಅಂಗಣ ಮತ್ತು ಕ್ರೀಡಾ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಟದ ಮೈದಾನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ