ಪುತ್ತೂರು: 'ಸೋಲೆಂಬುದು ಎಚ್ಚರಿಕೆಯ ಗಂಟೆ, ಹೊರತು ಸೋಲಲ್ಲ. ಮುಂದಿನ ಬೆಳವಣಿಗೆಗೆ ಅದು ಪ್ರೇರಕವೆಂದು ಪರಿಗಣಿಸಿ ಮುಂದಡಿ ಇಡಬೇಕು. ಸೋಲೇ ಗೆಲುವಿನ ಸೋಪಾನ. ನಾವು ನಮ್ಮನ್ನು ಬೇರೆಯವರಿಗೆ ಹೋಲಿಸದೆ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಪ್ರಯತ್ನಪಡಬೇಕು. ಸಕಾರಾತ್ಮಕವಾಗಿ ಆಲೋಚಿಸಿ ನಕಾರಾತ್ಮಕ ಆಲೋಚನೆಗಳಿಗೆ ಎಡೆ ಕೊಡದೆ ಮುಂದುವರಿದಾಗ ಜಯ ಲಭ್ಯ' ಎಂದು ವಿಶ್ರಾಂತ ಪ್ರಾಚಾರ್ಯ, ಸಂಪನ್ಮೂಲ ವ್ಯಕ್ತಿ ಬಿ.ವಿ.ಸೂರ್ಯನಾರಾಯಣ ಹೇಳಿದರು.
ಅವರು ನಟ್ಟೋಜ ಫ಼ೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪ.ಪೂ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನೀಟ್ ಹಾಗೂ ಸಿಇಟಿ ಕೋಚಿಂಗ್ ತರಗತಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಆಹಾರ, ನಿದ್ರೆ, ಅಭ್ಯಾಸ ನಡೆಸುವ ವಿಚಾರದಲ್ಲಿ ಹೇಗೆ ನಿಯಮ ಪಾಲಿಸಿ ಶ್ರದ್ಧೆ ವಹಿಸಿ ಎಚ್ಚರ ವಹಿಸಬೇಕೆಂಬುದನ್ನು ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಂದಲೇ ಪ್ರಾತ್ಯಕ್ಷಿಕೆ ನಡೆಸಿ ವಿಷದ ಪಡಿಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ವಿಧ್ಯುಕ್ತವಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾ ಪ.ಪೂ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ