ನಿಟ್ಟೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಎನ್-ಇಗ್ಮಾ 2023 ಶೌರ್ಯ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಖ್ಯಾತ ಹಿನ್ನಲೆ ಗಾಯಕರಾದ ಅಜಯ್ ವಾರಿಯರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ಮೈಟೆನೆನ್ಸ್ & ಡೆವಲ್ಮೆಂಟ್ ವಿಭಾಗದ ನಿರ್ದೇಶಕ ಶ್ರೀ ಯೋಗಿಶ್ ಹೆಗ್ಡೆ ಕಾರ್ಯಕ್ರಮ ಯಶಸ್ಸುಗೊಳ್ಳಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ಅವರು ಮಾತನಾಡಿ ಅಂತರ್ ಕಾಲೇಜು ಸ್ಪರ್ಧೆಯ ತಯಾರಿಯಲ್ಲಿನ ವಿದ್ಯಾರ್ಥಿಗಳ ಕೌಶಲ್ಯವನ್ನು ಶ್ಲಾಘಿಸಿದರು.
ಎರಡು ದಿನಗಳ ಸಾಂಸ್ಕೃತಿಕ ಮತ್ತು ಮ್ಯಾನೆಜ್ ಮೆಂಟ್ ಸ್ಪರ್ಧೆಯಲ್ಲಿ ಒಟ್ಟು 51 ಕಾಲೇಜುಗಳಿಂದ 1030 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ಮನರಂಜನೆಗಾಗಿ ಕನ್ನಡದ ಖ್ಯಾತ ಗಾಯಕರಾದ ಅಜಯ್ ವಾರಿಯರ್, ದಿವ್ಯ ರಾಮಚಂದ್ರ, ನಾದೀರ ಭಾನು ಮತ್ತು ಸುಪ್ರಿತ್ ಸಾಪಳಿಗ ಅವರನ್ನು ಒಳಗೊಂಡ ತಂಡದಿಂದ ಸಂಗೀತ ಸಂಜೆಯನ್ನು ಅಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಬ್ರಾಂಚ್ ಎಸ್.ಐ.ಆರ್.ಸಿ.ಆಫ್.ಐ.ಸಿ.ಎ.ಐಯ ಅಧ್ಯಕ್ಷರಾದ ಸಿ.ಎ. ಮಹೇಂದ್ರ ಶೆಣೈ ಪಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪ್ರಶಸ್ತಿ ನೀಡಿ ಶುಭಹಾರೈಸಿದರು. ಆಳ್ವಾಸ್ ಪದವಿ ಕಾಲೇಜು ಮೂಡಬಿದಿರೆ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಮ್ಯಾನೇಜ್ ಮೆಂಟ್ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಎಂ.ಪಿ.ಎಂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಾರ್ಕಳ ಪಡೆದುಕೊಂಡಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ. ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಮೇಶ್ ಎಂ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಸ್ವೀಡಲ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಶ್ರೀಮತಿ ನಿಶ್ಮಿತಾ ಶೆಟ್ಟಿ ಮತ್ತು ಶ್ರೀಮತಿ ಮೀನಾಕ್ಷಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಪರಿಷತ್ ನಿರ್ದೇಶಕ ಶ್ರೀ ವಿಘ್ನೇಶ್ ಶೆಣೈ ಬಿ ವಂದಿಸಿದರು. ಕುಮಾರಿ ಮೆಲಿಟಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ