ಉಡುಪಿ: ಮಣಿಪಾಲ ಕೆಎಂಸಿಯ ಎಂ.ಡಿ ವೈದ್ಯಕೀಯ ವಿದ್ಯಾರ್ಥಿ ಡಾ. ಸಾಲ್ವ್ಯ ಎಸ್. ರಾಜ್ ಅವರು ಮಣಿಪಾಲ ಕುರಿತಾಗಿ ರಚಿಸಿದ ಜಲವರ್ಣ ಕಲಾಕೃತಿಗಳ ಪ್ರದರ್ಶನ "ಮೈ ಮಣಿಪಾಲ್" ಶೀರ್ಷಿಕೆಯಲ್ಲಿ ಎ.28-ಮೇ 1 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ.
ಈ ಬಗ್ಗೆ ಮಂಗಳವಾರ ಅದಿತಿ ಗ್ಯಾಲರಿಯಲ್ಲಿ ಜರಗಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಅವರು, ಗ್ಯಾಲರಿಯಲ್ಲಿ ಸುಮಾರು 30ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಶಿಕ್ಷಣ, ಬ್ಯಾಂಕಿಂಗ್ ಹಾಗೂ ಮುದ್ರಣದಲ್ಲಿ ಅಂತಾರಾಷ್ಟೀಯ ಗಮನ ಸೆಳೆದಿರುವ ಮಣಿಪಾಲದ ಕುರಿತು ವೈವಿಧ್ಯಮಯವಾಗಿ ಈ ರೀತಿಯ ಚಿತ್ರ ಪ್ರದರ್ಶನವಾಗುತ್ತಿರುವುದು ಇದೇ ಪ್ರಥಮಬಾರಿಗೆ ಎಂದೂ ಅವರು ತಿಳಿಸಿದರು.
ಎ. 28ರಂದು ಸಂಜೆ 5 ಕ್ಕೆ ಮಾಹೆಯ ಸಹ ಕುಲಾಧಿಪತಿ ಡಾ. ಕಾರ್ಕಳ ಶರತ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ರವಿರಾಜ್ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾವಿದೆ ಡಾ. ಸಾಲ್ವ್ಯ ಎಸ್. ರಾಜ್ ಉಪಸ್ಥಿತರಿದ್ದರು.
ಪ್ರದರ್ಶನವು ಎ. 29ರಿಂದ ಮೇ 1 ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ.
ಕಲಾವಿದರ ಕುರಿತು
ವೃತ್ತಿಯಲ್ಲಿ ವೈದ್ಯೆ. ಪ್ರವೃತ್ತಿಯಲ್ಲಿ ಜಲವರ್ಣ ಚಿತ್ರ ಕಲಾವಿದೆ.8 ಅಂತಾರಾಷ್ಟ್ರೀಯ ಹಾಗೂ 6 ರಾಷ್ಟ್ರ, ಪ್ರಶಸ್ತಿಗಳು ಹಾಗೂ 65ಕ್ಕೂ ಅಧಿಕ ಸ್ವರ್ಣ ಪದಕಗಳು ಇವರನ್ನ ಅರಸಿಕೊಂಡು ಬಂದಿವೆ. ಕಲಾವಿದರ ಕಲಾಕೃತಿಗಳು ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಅನೇಕ ಪ್ರತಿಷ್ಠಿತರ ಸಂಗ್ರಹದಲ್ಲಿವೆ. 7ಕ್ಕೂ ಅಧಿಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ಈಗಾಗಲೇ ಆಯೋಜಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ