ಮುಜುಂಗಾವು ವಿದ್ಯಾಪೀಠದಲ್ಲಿ ಸ್ಪಂದನ-2023: ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Upayuktha
0

ಕುಂಬಳೆ: ಮುಜುಂಗಾವಿನ ಶ್ರೀ ಭಾರತೀವಿದ್ಯಾಪೀಠದ ಈ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ಪಂದನ (ಬೀಳ್ಕೊಡುಗೆ) ಕಾರ್ಯಕ್ರಮವು ಇಂದು (ಏ.3-ಸೋಮವಾರ) ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳೊಂದಿಗೆ ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷರಾದ ಎಸ್.ಎನ್ ರಾವ್ ಮುನ್ನಿಪ್ಪಾಡಿ ಇವರು ವಹಿಸಿ, ಜೀವನ ಮೌಲ್ಯಗಳ ಬಗ್ಗೆ ನಾವು  ನೀಡಬೇಕಾದ ಮಹತ್ವವನ್ನು ವಿದ್ಯಾರ್ಥಿ‌ ಜೀವನದಲ್ಲಿ ಅಳವಡಿಸ ಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಅಧ್ಯಾಪಕ ರಾಮಚಂದ್ರ ಎಂ, ಪಿ ಎಸ್ ನಗರ ಸೂರಂಬೈಲು ಇವರು, ವಿದ್ಯಾರ್ಥಿಗಳ ನಡೆನುಡಿಗಳ ಬಗ್ಗೆ ಸಲಹೆಗಳನ್ನಿತ್ತರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮಾತನಾಡುತ್ತಾ  ಸಂಸ್ಕಾರವಂತರಾಗಬೇಕು, ಎಂಬ ಸಲಹೆಯೊಂದಿಗೆ ಕತೆ ಸಹಿತ ಶುಭಾಶಯಗಳನ್ನು ತಿಳಿಸಿದರು.


ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಂಭಟ್ ದರ್ಭೆಮಾರ್ಗ, ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂದಿಸಬೇಕು. ನಿಮ್ಮನ್ನು ಕಳುಹಿಸಿ ಕೊಡುವುದಲ್ಲ, ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶವನ್ನು ತಿಳಿಸಿದರು. ಅಧ್ಯಾಪಿಕೆ ಶ್ರೀಮತಿ ಚಿತ್ರಾ ಸರಸ್ವತಿ ಮಕ್ಕಳ ಸ್ಥಾನವನ್ನು ಮೇಲಕ್ಕೇರಿಸುವ ಅರ್ಥ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ, ಮಕ್ಕಳು ಮುಂದೆಯೂ ಶಾಲೆಯ ಬಗ್ಗೆ ವಹಿಸಬೇಕಾದ ಕಾಳಜಿ ತಿಳಿಸಿದರು.


ಅಧ್ಯಾಪಕರೆಲ್ಲರೂ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು. ವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಜ್ಞಾನ ಪ್ರತೀಕವಾದ ದೀಪಗಳನ್ನು ಸ್ಮರಣಿಕೆಗಳಾಗಿ ನೀಡಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಯೋಜಿಸಿ, ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top