ಬೆಂಗಳೂರು: ಶ್ರೀ ವಿಜಯ ವಿಠಲ ಮಹಿಳಾ ಮಂಡಳಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 10 ರಿಂದ 14ರ ವರೆಗೆ ಪ್ರತಿದಿನ ಮಧ್ಯಾಹ್ನ 2-30 ರಿಂದ 7-30ರ ವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ರಾವ್ ಅವರು ನೆರವೇರಿಸುವರು.
ನಾಡಿನ ಹೆಸರಾಂತ ವಿದ್ವಾಂಸರುಗಳಾದ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಮತ್ತು ಶ್ರೀಮತಿ ರಾಜಲಕ್ಷ್ಮಿ ಪಾರ್ಥಸಾರಥಿ, ಶ್ರೀ ವೇದವ್ಯಾಸಾಚಾರ್ ಮತ್ತು ಶ್ರೀಮತಿ ಉಮಾ ವೇದವ್ಯಾಸಾಚಾರ್, ಶ್ರೀ ಜಯತೀರ್ಥಾಚಾರ್ ಮತ್ತು ಶ್ರೀಮತಿ ವಾರುಣಿ ಜಯತೀರ್ಥಾಚಾರ್, ಶ್ರೀಮತಿ ಎನ್.ಜಿ. ವಿಜಯಲಕ್ಷ್ಮಿ ಹಾಗೂ ಶ್ರೀ ವಿಠಲ್ ಮತ್ತು ಶ್ರೀಮತಿ ಭಾರ್ಗವಿ ಇವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು.
ಈ ಶಿಬಿರದಲ್ಲಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ-ಸಂಪ್ರದಾಯದ ಹಾಡುಗಳು, ರಂಗೋಲಿ ಬಿಡಿಸುವುದು, ಹರಿಕಥಾಮೃತಸಾರ ವಾಚನ, ಸಾಂಪ್ರದಾಯಿಕ ನಡೆವಳಿಕೆಗಳು, ಕೋಲಾಟಗಳನ್ನು ಹೇಳಿಕೊಡಲಾಗುವುದು.
ಸಂಪರ್ಕಕ್ಕೆ: 9663729510, 9538468589.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ