ಪುತ್ತಿಗೆ ಮಠದ ಪ್ರಮುಖರ ಉಪಸ್ಥಿತಿ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಪುತ್ತಿಗೆ ಮಠದ "ಕೋಟಿ ಗೀತಾ ಲೇಖನ ಯಜ್ಞ" ದ ಪುಸ್ತಕಗಳನ್ನು ಸಮರ್ಪಣೆ ಮಾಡಿ ಮಾರ್ಗದರ್ಶನ ಕೋರಲಾಯಿತು.
ರಾಜ್ಯ ಸಭಾ ಸದಸ್ಯರೂ ಆಗಿರುವ ಹೆಗ್ಗಡೆ ಅವರು ಪುತ್ತಿಗೆ ಶ್ರೀಪಾದರ ಈ ಜಾಗತಿಕ ಧಾರ್ಮಿಕ ಸಂಕಲ್ಪಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್, ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ. ಗೋಪಾಲ ಆಚಾರ್ಯ, ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಕೆ.ವಿ. ರಮಣ ಆಚಾರ್ಯ, ಅಂತರ್ಯಾಮಿಯ ನಂದನ್ ದಳವಾಯಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ