ಜೀವನಬೋಧ ವಿದ್ಯಾರ್ಥಿ ಶಿಬಿರ 2023 ವಿಚಾರ ವಿನಿಮಯ ಸಭೆ

Upayuktha
0

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ನೇತೃತ್ವದಲ್ಲಿ ವಿದ್ಯಾರ್ಥಿವಾಹಿನಿ ಸಂಯೋಜನೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ದಿನಾಂಕ ಎಪ್ರಿಲ್ 28 ರಿಂದ ಮೇ 1ರ ವರೆಗೆ ಜರಗಲಿರುವ ಜೀವನಬೋಧ ವಿದ್ಯಾರ್ಥಿ ಶಿಬಿರದ ವಿಚಾರ ವಿನಿಮಯ ಸಭೆಯು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು.


ಸಭೆಯಲ್ಲಿ ಶಿಬಿರದ ಯಶಸ್ವಿಗಾಗಿ ಕೈಗೊಳ್ಳಬೇಕಾದ ವಿಭಾಗವಾರು ವಿಷಯಗಳ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಶಿಬಿರಾಧಿಕಾರಿ ಮತ್ತು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಶಾಮಪ್ರಸಾದ ಕುಳಮರ್ವ ಶಿಬಿರದ ಸಮಗ್ರ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.


ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಇವರು ಶಿಬಿರದ ಬಗ್ಗೆ ಮುಂದೆ ಕಾರ್ಯಗತ ಗೊಳಿಸಬೇಕಾದ ವಿಷಯಗಳ ಬಗ್ಗೆ ಪ್ರಸ್ತಾಪಮಾಡಿದರು.


ಡಾ ವೈ ವಿ ಕೃಷ್ಣಮೂರ್ತಿ ಶಿಬಿರದ ವ್ಯವಸ್ಥೆಗಳ ಬಗ್ಗೆ ವಿವರಣೆಗಳನ್ನಿತ್ತರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಗೀತಾಲಕ್ಷ್ಮಿ ಮುಳ್ಳೇರಿಯಾ, ಕುಸುಮಾ ಪೆರ್ಮುಖ ಸಲಹೆ ಸೂಚನೆಗಳನ್ನಿತ್ತರು. ಮಂಡಲ, ವಲಯ ಪದಾಧಿಕಾರಿಗಳು  ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top