ಮಂಗಳೂರು ವಿಶ್ವವಿದ್ಯಾನಿಲಯ: ಕ್ಯಾಂಪಸ್ ನೇಮಕಾತಿ ಅಭಿಯಾನ ಉದ್ಘಾಟನೆ

Chandrashekhara Kulamarva
0


ಮಂಗಳೂರು: ಯುನೈಟೆಡ್ ಹೆಲ್ತ್ ಗ್ರೂಪ್ ನ ಅಂಗಸಂಸ್ಥೆ ‘ಆಪ್ಟಮ್’ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಕ್ಯಾಂಪಸ್ ನೇಮಕಾತಿ ಅಭಿಯಾನ ನಡೆಸಿತು.


ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಆಪ್ಟಮ್ ನ ಕ್ಲೆಮೆಂಟ್ ಸಿಕ್ವೇರಾ ಮತ್ತು ಡಾ. ಗುರುರಾಜ್ ಕ್ಷತ್ರಿ, ವೈದ್ಯಕೀಯ ಕೋಡಿಂಗ್ ಕುರಿತು ಮಾಹಿತಿ ನೀಡಿದರು.


ತರಬೇತಿ ಮತ್ತು ಉದ್ಯೋಗ ಕೋಶದ ಮುಖ್ಯಸ್ಥ ಪ್ರೊ.ಡಿ.ಪಿ. ಅಂಗಡಿ ಸ್ವಾಗತಿಸಿದರು. ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರದ ಉಪಮುಖ್ಯಸ್ಥ ಜೆ.ಎಸ್.ಹೇಮಚಂದ್ರ ವಂದಿಸಿದರು. ಐಕ್ಯೂಎಸಿಯ ಪ್ರೊ.ಮಂಜುನಾಥ್ ಪಟ್ಟಾಭಿ, ಪ್ರೊ.ಮೋನಿಕಾ ಸದಾನಂದ ಉಪಸ್ಥಿತರಿದ್ದರು.


ಉತ್ತೀರ್ಣರಾಗಿರುವ 129 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ  ಕರ್ನಾಟಕ ಮತ್ತು ಕೇರಳದ ಇತರ ಸಂಸ್ಥೆಗಳಿಂದ 43 ವಿದ್ಯಾರ್ಥಿಗಳು ಬಂದಿದ್ದರು. ಶಾರ್ಟ್ಲಿಸ್ಟ್ ಆಗಿರುವ ವಿದ್ಯಾರ್ಥಿಗಳು 5 ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


إرسال تعليق

0 تعليقات
إرسال تعليق (0)
To Top