ಹಾಸನ: ಕಲಾವಿದರಿಗೆ ಸನ್ಮಾನದ ಕಾರ್ಯಕ್ರಮ

Upayuktha
0

 

ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶ್ರೀ ಶಾರದಾ ಕಲಾತಂಡ ಹಾಸನ ಇವರು ಆಯೋಜಿಸಿದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಹಾಸನದ ಕಲಾಭವನದಲ್ಲಿ ನಡೆಯಿತು.. ಶ್ರೀ ಬೆನಕ ಕಲಾ ಸಾಂಸ್ಕೃತಿಕ ಸಂಘದಿಂದ ಹಲವು ಕಾರ್ಯಕ್ರಮ ನೀಡಿದ್ದರು. ಸೋಬಾನೆ  ಪದ, ಕೋಲಾಟದ ನೃತ್ಯ, ದಶಾವತಾರದ ನೃತ್ಯ, ಹೀಗೆ ಹಲವು ಹಾಡುಗಳನ್ನು,ನೃತ್ಯಗಳ ಕಾರ್ಯಕ್ರಮ ನೀಡಿದ್ದರು. 


ಕಾರ್ಯಕ್ರಮದಲ್ಲಿ ರಾಣಿ ಚರಾಶ್ರೀ, ಪುಟ್ಟ ಬಸಮ್ಮ, ಚಂದ್ರಮ್ಮ ಕಾಳೇಗೌಡ, ಜಯಮ್ಮ ರಮೇಶ್, ಗಾಯತ್ರಿ ಪ್ರಕಾಶ್, ಪದ್ಮಾವತಿ ವೆಂಕಟೇಶ್, ಹೆಚ್ಎಸ್ ಪ್ರತಿಮಾ  ಹಾಸನ್ , ವಿಶಾಲಾಕ್ಷಿ ಜಗದೀಶ್, ರುಕ್ಮಿಣಿ ದೇವರಾಜ್, ತುಳಸಿ ಮುರುಳಿಧರ್, ಸಾವಿತ್ರಿ ರಾಮ ಶೇಖರೆ ಗೌಡ, ಶಕುಂತಲ ಸೋಮಶೇಖರ್, ಸಾವಿತ್ರಿ ಮಲ್ಲಿಕಾರ್ಜುನ, ಜಯಲಕ್ಷ್ಮಿ ಠಾಕೂರ್, ಇವರೆಲ್ಲ ಕಾರ್ಯಕ್ರಮವನ್ನು ನೀಡಿದ್ದು.  ಇವರೆಲ್ಲರಿಗೂ ಶ್ರೀ ಶಾರದಾ ಕಲಾತಂಡ ಹಾಸನ ಇವರಿಂದ  ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಶ್ರೀ ರಾಮ ಮಂದಿರ ಪಿಡಬ್ಲ್ಯೂ ಕಾಲೋನಿಯಲ್ಲಿ ಗಂಗಾಧರ್ ಕಲಾವಿದರು, ಕೆ ಸಿರಾಜು ನಿರ್ದೇಶಕರು, ನಾಗರಾಜು. ಇವರು ಆಯೋಜಿಸಿದ್ದರು.. 


ಕಾರ್ಯಕ್ರಮದ ಪೂರ್ಣ ನಿರೂಪಣೆಯನ್ನು  ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್. ಸಾಹಿತಿ. ಶಿಕ್ಷಕಿ. ಸಮಾಜ ಸೇವಕಿ. ಹಾಸನ. ಇವರು  ನಿರೂಪಿಸಿದರು. ಪ್ರಾರ್ಥನೆಯನ್ನು ಗಾಯತ್ರಿ ಪ್ರಕಾಶ್ ರವರು ಮಾಡಿದ್ದು, ಸ್ವಾಗತವನ್ನು  ರಾಣಿ ಚರಾ ಶ್ರೀ ರವರು, ಅಧ್ಯಕ್ಷತೆಯನ್ನು ಗಂಗಾಧರ್ ರವರು ವಹಿಸಿಕೊಂಡಿದ್ದು. ವಂದನಾರ್ಪಣೆಯನ್ನು ತುಳಸಿಯವರು ಮಾಡಿದರು. 


- ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top