ಮಾನವ ಸಂಬಂಧಗಳನ್ನು ಮರೆಸುವ ಅತಿಯಾಸೆ

Chandrashekhara Kulamarva
0

ಮಾನವನ ನಿಜವಾದ ಶತ್ರು ಎಂದರೆ ಅತಿಯಾಸೆ. ಯಾಕೆಂದರೆ ಅವನ ಜೀವನ ಆಸೆಯಿಂದ ಮುಳುಗಿ ಹೋಗಿರುವ ಒಂದು ಪ್ರಪಂಚ. ಆಸೆ ಪಟ್ಟು ಪಟ್ಟು ಮಾನವ ಕರಗಿ ಹೋಗುತ್ತಾನೆ. ಮನುಷ್ಯನಿಗೆ ಆಸೆ ಇರಬೇಕು ಆದರೆ ಅತಿಯಾಸೆಯಲ್ಲ. ಆಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆಯ ಆಸರೆ ಇಲ್ಲದಿದ್ದರೆ ಮನುಷ್ಯನು ಕಾಡುಪ್ರಾಣಿಯಂತೆ  ಜೀವಿಸುತ್ತಿದ್ದ. ಆಸೆಯು ಮಾನವನ ಯೋಚನೆಗಳನೆಲ್ಲ ಹೇಗೆ ಬದಲಾಯಿಸುತ್ತದೆ ಎಂಬುವುದಕ್ಕೆ ಉತ್ತಮ ಉದಾಹರಣೆಯೆಂದರೆ ರೈತ ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಒಮ್ಮೆಲೇ ಶ್ರೀಮಂತನಾಗಲು ಅದರ ಹೊಟ್ಟೆಯಲ್ಲಿ ಇರುವ ಎಲ್ಲಾ ಮೊಟ್ಟೆಗಳನ್ನು ಪಡೆದುಕೊಳ್ಳುವ ಆಸೆಯಿಂದ ಅದರ ಹೊಟ್ಟೆಯನ್ನು ಸೀಳಿದನು. ಆದರೆ ಅವನಿಗೆ ಯಾವುದೇ ಪ್ರತಿಫಲವು ಸಿಗಲಿಲ್ಲ. ತನ್ನ ಅತಿಯಾಸೆಯಿಂದ ತನ್ನ ಕೈಯ್ಯಾರೆ ತನ್ನ ಜೀವನವೇ ನಾಶಮಾಡಿದೆ ಎಂದು ಅವನಿಗೆ ಅರಿವಾಯಿತು.


ಅತಿಯಾಸೆ ಗತಿಗೇಡು ಮಾತಿನಂತೆ ಅತಿಯಾಸೆಯಿಂದ ನಮ್ಮ ಗತಿ ಅಧೋಗತಿಯಾಗುತ್ತೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಸಂಸಾರದಲ್ಲಿ ಹೆಂಡತಿಯ ಅತಿಯಾದ ಆಸೆಯಿಂದ ಇಡೀ ಸಂಸಾರವೇ ಬೀದಿಗಿಳಿಯುವ ಪರಿಸ್ಥಿತಿ ಇತ್ತೀಚೆಗೆ ನಾವು ಕಂಡಿರಬಹುದು. ಆಸೆಯು ಮನುಷ್ಯನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ನೀಡುತ್ತೆ ನಂತರ ಎಲ್ಲವೂ ತನ್ನದು ಆಗಬೇಕು ಎಂಬ ಅತಿಯಾಸೆ ಪ್ರಾರಂಭವಾಗುತ್ತೆ. ಒಂದು ಸುಂದರ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳು ಚಿಕ್ಕವನಿಗೆ ಆಸೆ ಹೆಚ್ಚಿತ್ತು ಅಣ್ಣನಿಗೆ ಯಾವುದು ಕೂಡ ಸಿಗಬಾರದು ಎಲ್ಲಾ ನನ್ನದು ಆಗಬೇಕು ಎಂಬ ಅತಿಯಾಸೆ ಇತ್ತು. ದಿನ ಕಳೆದಂತೆ ಆಸೆಯು ದ್ವೇಷದ ರೂಪ ತಾಳಿ ಅಣ್ಣನ್ನು ಸಾಯಿಸುವ ನಿರ್ಧಾರಕ್ಕೆ ಬಂದನು. ನಡುರಾತ್ರಿ ಅಣ್ಣ ಮಲಗಿರುವಾಗ ತಲೆಯ ಕಲ್ಲು ಹಾಕಿ ಕೊಲೆಗೈದ. ಎಂಥ ದುರಂತ ಅಲ್ವಾ? ಸಂಬಂಧಗಳನ್ನು ಮರೆಸುವಷ್ಟು ಅತಿಯಾಸೆ ಅವರಿಸುತ್ತದೆ ಎಂದು. ಅತಿಯಾಸೆ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಸೆ ಇರುಬೇಕು ಆದರೆ ಅತಿಯಾಸೆಯಲ್ಲ.



- ಕೃತಿ ಬಲ್ಯಾಯ ನೆಕ್ಕಿಲು

ತೃತೀಯ ಪ್ರತಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು

إرسال تعليق

0 تعليقات
إرسال تعليق (0)
To Top