ಆಳ್ವಾಸ್‍ನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

Upayuktha
0

 ನೀಟ್-ಸಿಇಟಿ ಕ್ರ್ಯಾಶ್‍ಕೋರ್ಸ್‍ನಲ್ಲಿ ಆಳ್ವಾಸ್ ಮತ್ತೊಂದು ಹೆಜ್ಜೆ



ವಿದ್ಯಾಗಿರಿ(ಮೂಡುಬಿದಿರೆ): ಸೌಲಭ್ಯ ವಂಚಿತ ಅರ್ಹ ಪ್ರತಿಭಾವಂತ 40 ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 45 ದಿನಗಳ ಸಿಇಟಿ- ನೀಟ್‍ ಇಂಟೆನ್ಸಿವ್‍ಕ್ರ್ಯಾಶ್‍ ಕೋರ್ಸ್‍ತರಬೇತಿಯನ್ನು ಉಚಿತ ವಸತಿ, ಭೋಜನ ಸಹಿತ ಆರಂಭಿಸಿದ್ದು,  ದೇಶದಲ್ಲೇ ಮಾದರಿಯಾಗಿದೆ. 


ದಕ್ಷಿಣಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರ ಸಂಘಗಳ ಸಹಯೋಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಈಚೆಗೆ ಪರೀಕ್ಷೆ ನಡೆದಿದ್ದು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜಿನ ಸೌಲಭ್ಯ ವಂಚಿತ ಅರ್ಹ ಪ್ರತಿಭಾವಂತ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. 


ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಕಾಲೇಜಿನಲ್ಲಿ ಏಪ್ರಿಲ್ 1ರಂದು ತಲಾ 60 ಅಂಕಗಳ ನೀಟ್-ಸಿಇಟಿ ಮಾದರಿಯ ಭೌತಶಾಸ್ತ್ರ(ಪಿ), ರಸಾಯನ ಶಾಸ್ತ್ರ(ಸಿ), ಗಣಿತ(ಎಂ) ಹಾಗೂ ಜೀವಶಾಸ್ತ್ರ(ಬಿ) ಪರೀಕ್ಷೆಗಳನ್ನು ನಡೆಸಲಾಯಿತು. ಆಯ್ಕೆ ಪರೀಕ್ಷೆಗೆ ಬಂದಎಲ್ಲ ವಿದ್ಯಾರ್ಥಿಗಳಿಗೆ ಆಳ್ವಾಸ್ ಕ್ರ್ಯಾಶ್‍ಕೋರ್ಸ್ ಪಠ್ಯ ಸಾಮಗ್ರಿಯನ್ನು ಉಚಿತವಾಗಿ ನೀಡಲಾಯಿತು. 


ಈ ಆಯ್ಕೆ ಪರೀಕ್ಷೆಯ ಹಾಗೂ ಎಸ್ಸೆಸ್ಸೆಲ್ಸಿ ಅಂಕದ ಆಧಾರದಲ್ಲಿ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಏಪ್ರಿಲ್ 4ರಂದು ಆಳ್ವಾಸ್ ಕಾಲೇಜಿನಲ್ಲಿ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. 


ಸುಮಾರು 25 ವರ್ಷಗಳಿಂದ ಸಿಇಟಿ ಹಾಗೂ ನೀಟ್‍ ತರಬೇತಿ ನೀಡುತ್ತಿರುವ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದ ಆಳ್ವಾಸ್ ಕಾಲೇಜಿನ ವಿಷಯತಜ್ಞ ಉಪನ್ಯಾಸಕರ ತಂಡವು ಈ ವಿದ್ಯಾರ್ಥಿಗಳ ಏಪ್ರಿಲ್ 5ರಿಂದ ತರಬೇತಿ ಆರಂಭಿಸಿದೆ. 


ಎನ್‍ಸಿಆರ್ಟಿ ಆಧರಿತ ಪಠ್ಯ ಕೈಪಿಡಿಯನ್ನು 25 ವರ್ಷಕ್ಕೂ ಹೆಚ್ಚಿನ ಪರಿಣತಿ ಹೊಂದಿದ ವಿಷಯತಜ್ಞರು ನೀಟ್ ಮಾದರಿಯಲ್ಲಿ ರೂಪಿಸಿದ್ದು, ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ. ಸಿಇಟಿ- ನೀಟ್ ಪರೀಕ್ಷೆಯಒಎಂಆರ್ ಮಾದರಿಯಲ್ಲೇ ಮಾದರಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. 


ವಿದ್ಯಾರ್ಥಿಗಳ ಕಲಿಕೆಗೆ ಅಧ್ಯಯನ ಪರಿಕರ, ಸಾರಾಂಶ(ಸಿನಾಪ್ಸಿಸ್), ಹಿಂದಿನ ವರ್ಷದ ಪ್ರಶ್ನೆಗಳನ್ನೂ ಒಳಗೊಂಡ ಎನ್‍ಸಿಆರ್ಟಿ ಪಠ್ಯಕ್ರಮ ಆಧಾರಿತ ಪ್ರಶ್ನೆಪತ್ರಿಕೆಯ ಗುಚ್ಛವನ್ನು ನೀಡಲಾಗುತ್ತಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top