ಚೀನಾ ಶ್ರೀಲಂಕಾಕ್ಕೆ ಮಂಗ ಹಿಡಿಯುವ ಕೆಲಸ ಕೊಟ್ಟಾಗ, ಮಂಗಗಳ ಬಗ್ಗೆ ನಾಲ್ಕು ಟಿಪ್ಪಣಿಗಳು!!
ರಾಮಾಯಣ ಕಾಲದಲ್ಲಿ ವಾನರ ಸೇನೆ ಇಡೀ ಲಂಕೆಯನ್ನೇ ನಡುಗಿಸಿತ್ತಂತೆ. ಅದೇ ವಾನರ ವಿಚಾರವೇ ಮತ್ತೆ ಲಂಕೆಯಲ್ಲಿ ಸದ್ದು ಮಾಡುತ್ತಿದೆ!!
ಚೀನಾದಿಂದ ಸಾಲ ಮಾಡಿ ಬಡ್ಡಿ ಕಟ್ಟುವುದರಲ್ಲಿ ಸೋತು ಬಸವಳಿದಿರುವ ಶ್ರೀಲಂಕಾಕ್ಕೆ 'ಮಂಗ ಹಿಡಿಯುವ' ಕೆಲಸವನ್ನು ಚೀನಾ ನೀಡಿದೆ!!! ತನಗೆ ಒಂದು ಲಕ್ಷ ಕೋತಿಗಳನ್ನು ನೀಡುವಂತೆ ಶ್ರೀಲಂಕಾಕ್ಕೆ ಚೀನಾ ಬೇಡಿಕೆ ಇರಿಸಿದೆ!!
ಚೀನಾ ತನ್ನ ಒಂದು ಸಾವಿರ ಮೃಗಾಲಯದಲ್ಲಿ ಇರಿಸಲು ಒಂದು ಲಕ್ಷ ಕೋತಿಗಳ ಬೇಡಿಕೆಯನ್ನು ಲಂಕೆಯ ಬಳಿ ಇಟ್ಟಿದೆ.
ಇದರಲ್ಲಿ ಅರ್ಥವಾಗದೇ ಇರುವಂತಹದು:
1) ನಿಜವಾಗಿಯೂ ಚೀನಾದ ಇಕೋ ಬ್ಯಾಲೆನ್ಸ್ ಉದ್ದೇಶಕ್ಕೆ ಮಂಗಗಳು ಬೇಕಾಗಿವೆಯಾ?
2) ಪ್ರಾಣಿಗಳ ಯಕೃತ್ತಿನಿಂದ, ಲಿವರ್ನಿಂದ ಕೆಲವು ಔಷಧಿ ತಯಾರಿಕೆ ಮಾಡಲಾಗುತ್ತದೆಯಂತೆ. ಚೀನಾ ಅಂತಹ ಯಾವುದಾದರು ವಿಶೇಷ ಬೆಲೆ ಬಾಳುವ ಔಷಧಿ ತಯಾರಿಕೆಗೆ ರಹಸ್ಯವಾಗಿ ಮುಂದಾಗಿರಬಹುದಾ?
3) ಆರ್ಥಿಕವಾಗಿ ಬಿದ್ದು ಹೋಗಿರುವ ಶ್ರೀಲಂಕದಲ್ಲಿ, ಕೋತಿಗಳ ಜನಸಂಖ್ಯೆಯನ್ನು ಇಳಿಮುಖವಾಗಿಸಿ, ಇಕೋ ಬ್ಯಾಲೆನ್ಸ್ನ್ನು ಹದಗೆಡಿಸುವುದಕ್ಕೆ ಚೀನಾ ಈ ಕೋತಿ ಕೊಳ್ಳೋ ಆಟ ಆಡ್ತಾ ಇರಬಹುದಾ?
4) ಚೀನಾ ಕೊಂಡುಕೊಂಡ ಕೋತಿಗಳಿಗೆ ಟ್ರೈನಿಂಗ್ ಕೊಟ್ಟು, ಪಳಗಿಸಿ, ಮನುಷ್ಯ ಶ್ರಮಿಕರ ಬದಲಾಗಿ ಅಥವಾ ರೋಬೋಟ್ ಮಾದರಿಯಲ್ಲಿ ಕೋತಿಗಳನ್ನು ಬಳಸಿಕೊಳ್ಳುವ ಅಥವಾ ಯುದ್ದ ಸೈನಿಕರಂತೆ (ರಾಮಾಯಣದ ರೀತಿಯಲ್ಲಿ!!?) ಬಳಸಿಕೊಳ್ಳುವ ಯೋಜನೆ ಇರಬಹುದಾ?
5) ನಾಳೆ ಶ್ರೀಲಂಕಾದ ಕೋತಿಗಳನ್ನು ಕೊಂಡುಕೊಂಡ ಚೀನಾ, ಅವುಗಳ ಸಂಖ್ಯೆಗಳನ್ನು ಗಣನೀಯವಾಗಿ ಬೆಳಸಿ, ಭಾರತಕ್ಕೆ ರಹಸ್ಯವಾಗಿ ತಂದು ಬಿಡುವ, ಆ ಮೂಲಕ ಭಾರತದ ಆಹಾರ ಉತ್ಪಾದನೆಯ ಮೇಲೆ ಸಮಸ್ಯೆ ಸೃಷ್ಟಿಸುವ ಯೋಜನೆ ಇರಬಹುದಾ?
6) ಚೀನಾ ಈ ಕೋತಿಗಳ ಮೂಲಕ ಯಾವುದಾದರು ಸಾಂಕ್ರಾಮಿಕ ಖಾಯಿಲೆಗಳನ್ನು ಅಭಿವೃದ್ಧಿ ಪಡಿಸಿ (ಉದಾಹರಣೆಗೆ ಔಷಧಿಯೇ ಇಲ್ಲದ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್ಡಿ) ರೀತಿಯ), ಶತೃ ರಾಷ್ಟ್ರಗಳ ಮೇಲೆ ಆಯುಧವಾಗಿ ಬಳಸುವ ಕುತಂತ್ರ ಇರಬಹುದಾ?
7) ಕೋತಿಗಳ ದೇಹದಲ್ಲಿ ರಹಸ್ಯ ಮೈಕ್ರೋ ಡಿಜಿಟಲ್ ಚಿಪ್ ಬಳಸಿ, ಯಾವುದಾದರು ರಾಷ್ಟ್ರಗಳ ಮೇಲೆ ರಹಸ್ಯ ಕಾರ್ಯಾಚರಣೆಗೆ ಮುಂದಾಗುವ ಕೃತ್ರಿಮ ಕೆಲಸಕ್ಕೆ ಚೀನಾ ಹೆಜ್ಜೆ ಇಡುತ್ತಿರಬಹುದಾ?
ಒಟ್ಟಿನಲ್ಲಿ ಗಡಿ ಭಾಗದಲ್ಲಿ ನರಿ ಬುದ್ದಿ ಆಕ್ರಮಣ ಮಾಡುತ್ತಿರುವ ರಾಕ್ಷಸ ಚೀನಾ, ಈಗ ಕೋತಿ ಕೊಳ್ಳೋ ಹೊಸ ಮಂಗಾಟ ಆಡ್ತಿದೆ!!! ಈ ಕೋತಿ ಕೊಳ್ಳುವ ಆಟದ ಬೆಂಕಿ ಯಾವ ದೇಶ ಸುಡುವುದಕ್ಕೋ ಗೊತ್ತಿಲ್ಲ. ಅಥವಾ ಆ ಬೆಂಕಿ ಚೀನಾವನ್ನೇ ಸುಡುತ್ತದೋ ಗೊತ್ತಿಲ್ಲ.
- ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ