ಬಸವಣ್ಣನವರ ಚಿಂತನೆಗಳು ಇಂದಿಗೂ ನಮಗೆ ದಾರಿದೀಪ : ಡಾ ಚೂಂತಾರು

Upayuktha
0

 

ಮಂಗಳೂರು: ದಿನಾಂಕ 23/04/2023 ನೆ ರವಿವಾರ ದ. ಕ. ಜಿಲ್ಲಾ ಗ್ರಹ ರಕ್ಷಕ ದಳದ ಕಛೇರಿಯಲ್ಲಿ ಬಸವೇಶ್ವರ ಜಯಂತಿಯ ಆಚರಣೆ ಜರುಗಿತು. ದ. ಕ. ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.


ಸಮಾನತೆಯ ಹರಿಕಾರ, ಮಹಾನ್ ಮಾನವತಾವಾದಿ ಬಸವಣ್ಣ ಅವರ ವಚನಗಳು ಮತ್ತು ಅವರ ವಿಚಾರಗಳು ಇಂದಿಗೂ ಜನರಲ್ಲಿ ಜೀವಂತವಾಗಿ ಇದೆ. ಅವರ ಜೀವನ ಮೌಲ್ಯಗಳು ಮತ್ತು ಅವರ ಚಿಂತನೆಗಳು ನಮ್ಮೆಲ್ಲರ ಬದುಕಿಗೆ ದಾರಿದೀಪ. ಅವರ ಚಿಂತನೆಗಳನ್ನು ಜೀವಂತವಾಗಿ ಇರಿಸುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ ಚೂಂತಾರು ಅಭಿಪ್ರಾಯ ಪಟ್ಟರು.ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಗ್ರಹ ರಕ್ಷಕರಾದ ಸುನಿಲ್ ಕುಮಾರ್, ದಿವಾಕರ, ಸುನಿಲ್ ಉಳ್ಳಾಲ, ಸಂದೇಶ, ರಿತೇಶ್, ಸಂತೋಷ್, ಜಯಂತಿ, ದಿವ್ಯಾ,ಜ್ಞಾನೇಶ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top