ಕೊಡಿಯಾಲ್ ಬೈಲ್: ಮಕ್ಕಳ ಬೇಸಿಗೆ ರಜೆಯನ್ನು ಸದುಪಯೋಗಗೊಳಿಸಲು ಕಲಾಭಿ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಇವರ ವತಿಯಿಂದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ನಲ್ಲಿ "ಅರಳು" ಎಂಬ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಶಿಬಿರ ಆಯೋಜಿಸಿದ್ದು ಏ.16ರಂದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ.ಶ್ರೀಪಾದ್ ಭಟ್ ಇದನ್ನು ಉದ್ಘಾಟಿಸಿದರು.
ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ ರಂಗನಾಥ್ ಭಟ್, ಜೊತೆ ಕಾರ್ಯದರ್ಶಿ ಸುರೇಶ ಕಾಮತ್,ಮುಖ್ಯೋಪಾಧ್ಯಾಯರು ಕವಿತಾ ಮೌರ್ಯ, ಪಿ ಆರ್ ಒ ಉಜ್ವಲ್ ಮಲ್ಯ, ಗೌರವಸಲಹೆಗಾರರು ಡಾ. ಎಂ ದಾಮೋದರ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರು ಸುರೇಶ್ ಬಿ ವರ್ಕಾಡಿ ಇವರು ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು.
ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ. ಶ್ರೀಪಾದ್ ಭಟ್ ತಮ್ಮ ಮಾತಿನ ಮೂಲಕ ಮಕ್ಕಳು ಹಾಗೂ ಅವರ ಪೋಷಕರಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಿದರು ಮತ್ತು ಪೋಷಕರೊಂದಿಗೆ ಸಂವಾದ ಕೂಡ ನಡೆಸಿದರು.
ನಂತರ ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ರಂಗಸಂಗೀತದ ಕಾರ್ಯಾಗಾರವೂ ನಡಿಸಲಾಯಿತು. ನವೀನ್ ಸಾಣೇಹಳ್ಳಿ , ಬಿಂದು ರಕ್ಷಿದಿ ಮತ್ತು ಭುವನ್ ಮಣಿಪಾಲ್ ಇವರ ನಿರ್ದೇಶನದ 3 ನಾಟಕಗಳನ್ನು ಕ್ಯಾಂಪಿನ ಅಂತಿಮ ದಿನ ಏ. 26 ರಂದು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುವುದು. ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಉಜ್ವಲ್ ಯು. ವಿ ಕಾರ್ಯವಹಿಸುತ್ತಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ