"ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು"ಎಂಬ ಗಾದೆ ಮಾತಿದೆ, ಹೌದು! ಈ ಮಾತನ್ನು ಇಂತಹ ಎಳೆಯ ಪ್ರಾಯದಲ್ಲೇ ಸಾಧನೆ ಮಾಡುವವರನ್ನು ನೋಡಿಯೇ ಹೇಳಿರಬೇಕು?
ಈ ಚಿನ್ನಕುರುಳಿ ಪಟಾಕಿ ಮೂರು ವರ್ಷದಲ್ಲೇ ಮೀಡಿಯಾದಲ್ಲಿ ಗುರುತಿಸಿಕೊಂಡ ನಗುಮುಖದ ಕಿನ್ನರಿ, ಮಾತಲ್ಲೇ ದಿನ ಮುಳುಗಿಸುವ, ಮುದ್ದು ಮುದ್ದಾದ ಸುಶ್ರಾವ್ಯ ಗಾಯನದಿಂದಲೇ ಕೇಳುವವರ ಮನದೊಳಗೆ ಮನೆ ಮಾಡೋ ಗಾಯಕಿ ಕರಾವಳಿಯ ಮುದ್ದು ಬಾಲೆ - ಆದ್ಯಾ ಬಾಳೆಹಿತ್ಲು
ಇವಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ, ಮೈಯರ ಬೈಲಿನವಳು. ಶ್ರೀಯುತ ನಾಗೇಶ್ ಬಾಳೆಹಿತ್ಲು ಹಾಗೂ ಶ್ರೀಮತೀ ರಂಜಿತಾ ನಾಗೇಶ್ ರವರ ಪುತ್ರಿಯಾಗಿದ್ದು, ಪ್ರಸ್ತುತ ಬಂಟ್ವಾಳದ, ದಡ್ಡಲಕಾಡು ಸರ್ಕಾರಿ ಶಾಲೆಯ UKG ವಿದ್ಯಾರ್ಥಿನಿ.
ತನ್ನ ಗಾಯನದಿಂದ, ಕರಾವಳಿಯ ಸುತ್ತಮುತ್ತ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ, ಯೂಟ್ಯೂಬ್ ನಲ್ಲಿ ಹಲವಾರು ಆಲ್ಬಮ್ ಸಾಂಗ್, ಭಜನೆ (ಪಾಂಚಜನ್ಯ ಹರಿನಾಮ ಸಂಕೀರ್ತನೆ, ಬಂಟ್ವಾಳ ), ಛದ್ಮವೇಷ,ಹಾಗೇ ವಿಜಯ ಕರ್ನಾಟಕ ಆಯೋಜಿಸಿದ ಐಡಿಯಲ್ ಮುದ್ದು ಕೃಷ್ಣ ಸ್ಪರ್ಧೆ 2020ರಲ್ಲಿ ಮೆಚ್ಚುಗೆ ಪಡೆದ ಭಾವಚಿತ್ರಕ್ಕೆ ಭಾಜನಳಾಗಿದ್ದಾಳೆ, ಕರಾವಳಿಯ ಪ್ರತಿಷ್ಟಿತ ವಾಹಿನಿ ಚಾನೆಲ್ 9ಪ್ರಸ್ತುತ ಪಡಿಸುತ್ತಿರುವ ಮುದ್ದುಕೃಷ್ಣ 2020, ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅಭಿನಂದನ ಪತ್ರ. ಹಾಗೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್( ರಿ ) ಚಿಣ್ಣರ ಲೋಕ ಸೇವಾಬಂಧು( ರಿ ) ಬಂಟ್ವಾಳ,ಕರಾವಳಿ ಕಲೋತ್ಸವ 2023ರಲ್ಲಿ ಕಾರ್ಯ ಕ್ರಮವನ್ನು ನೀಡಿ "ಸೈ " ಎನ್ನಿಸಿಕೊಂಡಿದ್ದಾರೆ. (ಮರುಳು ಮಾಡಿಕೊಂಡೆಯಲ್ಲೇ ಮಾಯದೇವಿ, ಕೊಮ್ಮ ಉಯ್ಯಾಲ, ಹಿಂದೂ ಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು,ದೀಪ ಜ್ಯೋತಿರ್ ನಮೋಸ್ತುತೇ,ಅಮ್ಮನ ಮಟ್ಟೇಲ್,ನೀನೆ ಗತಿ, ಪೊಪ್ಪ ) ಹೀಗೆ ಹಲವಾರು ಹಾಡುಗಳನ್ನು ಯೂಟ್ಟ್ಯೂಬ್ ನಲ್ಲಿ ನೋಡಿ, ಕೇಳಿ ಅದೆಷ್ಟೋ ಸಂಗೀತ ಪ್ರೇಮಿಗಳು ಈ ಮಗುವನ್ನು ಹರಸಿ ಆಶೀರ್ವದಿಸಿದ್ದಾರೆ. ಹೊರತಾಗಿ ಕನ್ನಡ, ತುಳು ಭಾಷೆಯ ಹಾಡುಗಳನ್ನು ಹಾಡುವುದು ಮಾತ್ರವಲ್ಲದೇ, ಸಂಸ್ಕೃತ, ಹಿಂದಿ, ತೆಲುಗು, ಪಂಜಾಬಿ ಹಾಡುಗಳನ್ನು ಹಾಡಬಲ್ಲಂತಹ ವಿಶೇಷ ಪ್ರತಿಭೆ, ಆದ್ಯಾ ಬಾಳೆಹಿತ್ಲು.
ಸಂಗೀತವನ್ನು ಉಸಿರಂತೆ ಕಾಣುವ ಇವಳು ದೇವರಷ್ಟೇ ಸಂಗೀತವನ್ನು ಪೂಜಿಸುವವಳು , ಆರಾಧಿಸುವವಳು. ಸಾಹಿತ್ಯಕ್ಕೆ ತಕ್ಕಂತೆ ಭಾವವನ್ನು ಸಂಗೀತದಲ್ಲಿ ಹೊಂದಿಸಿ ಹಾಡಿಗೆ ಜೀವ ತುಂಬುವವಳು. ಎರಡು ವರ್ಷದ ಮಗುವಾಗಿರುವಾಗಲೇ ನನ್ನ ಬಳಿ ಸಂಗೀತ ತರಭೇತಿಯನ್ನು ಅಭ್ಯಾಸಮಾಡುತಿದ್ದಾಳೆ, ಇವಳ ಅಕ್ಕನ ಸಂಗೀತಾಭ್ಯಾಸವನ್ನು ಕಂಡು ಹಾಗೆಯೇ ತಾಳ, ರಾಗ,ಲಯವನ್ನು ಕಂಡು, ಆಲಿಸಿ ಅಭ್ಯಾಸ ಮಾಡಲು ಕಲಿಯುತ್ತಿದಳು. ಈ ಮಗು ಆಗಷ್ಟೇ ಎರಡು ವರ್ಷದವಳು ಅಕ್ಕ ಹಾಡುವ ಹಾಡುಗಳನ್ನು ಆಲಿಸುತ್ತಾ,ಸಂಗೀತದ ಒಲವನ್ನು ಅರಿಸಿದವಳು,ಈ ಮಗುವಿನಲ್ಲಿ ಆಸಕ್ತಿ, ಎನ್ನುವುದು ರಕ್ತಗತವಾಗಿಯೇ ಬಂದಿರಬೇಕು, ಏಕೆಂದರೆ? ತಾನು ತೊದಲುನುಡಿ ಮಾತಾಡುವುದನ್ನು ನಲಿಯುತಾ ಕಲಿಯುವಾಗಲೇ ,ಸಂಗೀತವನ್ನು ಆಲಿಕೆಯ ಮೂಲಕ ಕಲಿತವಳು.ತುಂಟಿತನ ಹಾಗೂ ಮೂರುವರೆ ವರ್ಷ ವಯಸ್ಸಿಗೆ ಅಪೂರ್ವ ವವೆನ್ನಿಸುವ ಸಂಗೀತದ ಕುರಿತಾದ ಜ್ಞಾನ ಈಕೆಯನ್ನು ಮತ್ತಷ್ಟು ಮೆಚ್ಚಿ ಕೊಳ್ಳುವಂತೆ ಮಾಡುತ್ತದೆ,ಇದುವರೆಗೂ ಏಳು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುತ್ತಾಳೆ, ಈ ಮಗುವಿನ ನಾದ ಲೋಕದೆಲೆಡೆ ಹರಡಲಿ.
ಪೋಷಕರ ಮನದಾಳದ ಮಾತು:
ಇವಳ ಆಸಕ್ತಿ ಯಲ್ಲಿಯೇ, ಸಂಗೀತದತ್ತ ಮನವೊಲಿಸಿದವಳು ಯಾವುದೇ ವಿಷಯವಾಗಲಿ ಅದರತ್ತ ತುಂಬಾ ಗಮನ ಅರಿಸುತ್ತಾಳೆ. ಇವಳ ಎಲ್ಲಾ ಸಾಧನೆಗೂ ಸದಾ ಕೈ ಜೋಡಿಸಿ ಸಾತು ನೀಡುತೇವೆ, ಇಡೀ ಜಗತ್ತೇ ಇವಳ ಸಾಧನೆಯನ್ನು ಗುರುತಿಸುವಂತಾಗಲಿ.
ಆಧ್ಯಾಳ ಅಚ್ಚುಕಟ್ಟಾದ ಗಾಯನದಹಿಂದೆ ಸಂಗೀತ ತರಬೇತಿ ಗುರುಗಳಾದ ಯಶು ಸ್ನೇಹಗಿರಿ, ಹಾಗೂ ಹೆಸರಾಂತ ಸಂಗೀತ ಕಲಾವಿದರು ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ವಿದ್ಯಾಶ್ರೀ ಆಚಾರ್ಯ ಕಲ್ಲಡ್ಕ ಚೈತ್ರಾ ಕಲ್ಲಡ್ಕ, ಶಾಲಾ ಸಂಚಾಲಕರಾದ ಪ್ರಕಾಶ್ ಅಂಚನ್ ಹಾಗೂ ಶಾಲಾ ಶಿಕ್ಷಕವೃಂದದವರು ಹಾಗೂ ಕುಟುಂಬದವರ ಪ್ರಯತ್ನವು ಬಹಳಷ್ಟಿದೆ.
{"ತಾವು ಸಾಧಿಸಲಾಗದನ್ನು ತಮ್ಮ ಮಗಳು ತನ್ನ ಕಿರಿಯ ವಯಸ್ಸಿನಲ್ಲಿ ಮಾಡುತ್ತಿದ್ದಾಳೆ,ಆಕೆ ಹೆಸರಾಂತ ಗಾಯಕಿಯಾಗಬೇಕೆಂಬುವುದು ಆಕೆಯ ಹೆತ್ತವರ ಕನಸು ಇವರ ಆಸೆ, ಆಕಾಂಶೆಗಳೆಲ್ಲವು ಆದಷ್ಟು ಬೇಗ ನನಸಾಗಲಿ "}
ದೀಕ್ಷಿತ ಗಿರೀಶ್
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ
(ಪುತ್ತೂರು )
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ