ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಯುಗದ ಆರಂಭ. ಪ್ರಕೃತಿಯಲ್ಲಾಗುವ ವಿಭಿನ್ನ ಬದಲಾವಣೆಗಳೊಂದಿಗೆ ಈ ಯುಗಾದಿ ಎಂಬ ಹೊಸ ವರ್ಷ ಆರಂಭವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ-ದುಃಖ ಎಂಬುದು ಬೇವು-ಬೆಲ್ಲ ಇದ್ದಂತೆ. ಇವೆರಡನ್ನು ಸೇರಿಸಿ ಸೇವಿಸುವ ಹಾಗೆ ಜೀವನದಲ್ಲಿ ಸುಖ-ದುಃಖಗಳನ್ನು ಒಂದೇ ಎಂದು ಸಮನಾಗಿ ಅನುಭವಿಸಬೇಕು. ಬೇವು ಬೆಲ್ಲ ಯುಗಾದಿ ಹಬ್ಬದ ಸಂಕೇತ. ಬೇವು ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯವಾಗಿದ್ದು, ಅನೇಕ ರೋಗ ನಿವಾರಣಾ ಸಾಮರ್ಥ್ಯವನ್ನು ಹೊಂದಿದೆ. ಮನುಷ್ಯನ ಜೀವನ ಸಂಪೂರ್ಣವಾಗಿ ಸುಖದಿಂದ ಕೂಡಿರುವುದಿಲ್ಲ, ಹೇಗೆ ಬೆಳಕು ಇದ್ದಾಗ ನೆರಳು ಇರುತ್ತದೆಯೋ ಹಾಗೆಯೇ ಸುಖವೆಂಬ ಬೆಳಕಿನ ಜೊತೆ ದುಃಖವೆಂಬ ನೆರಳು ಹಿಂಬಾಲಿಸುತ್ತಿರುತ್ತದೆ. ಬೆಲ್ಲ ಸಂತೋಷದ ಸಂಕೇತ. ಕಿರಿಯರಿಂದ ಹಿರಿಯರವರೆಗೂ ಬೆಲ್ಲವೆಂಬ ಖುಷಿಯನ್ನು ಅನುಭವಿಸಲು ಪ್ರಯತ್ನಿಸುತ್ತಿರುತ್ತಾರೆ. ಈ ಬೆಲ್ಲವೆಂಬ ಸಂತೋಷವನ್ನು ಅನುಭವಿಸಲು ದುಃಖವೆಂಬ ಬೇವನ್ನು ಸ್ವೀಕರಿಸಲೇಬೇಕು. ಸುಖ-ದುಃಖ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಜೀವನದಲ್ಲಿ ಬರುವ ಎಲ್ಲಾ ಕಷ್ಟ ಸುಖಗಳನ್ನ ಸಮನಾಗಿ ಸ್ವೀಕರಿಸಬೇಕು ಎನ್ನುವುದು ಈ ಯುಗಾದಿ ಹಬ್ಬದ ಒಳಾರ್ಥವಾಗಿದೆ.
-ಪ್ರಿಯದರ್ಶಿ ನಿ.ಆರ್.ಮುಜಗೊಂಡ
ಆಳ್ವಾಸ್ ಕಾಲೇಜು, ಮೂಡುಬಿದರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ