ಮುಳಿಯಾರು: ಯಕ್ಷಗಾನ ಭಾಗವತಿಕೆಯ ಹಿರಿಯ ಭೀಷ್ಮ ಬಲಿಪ ನಾರಾಯಣ ಭಾಗವತರಿಗೆ ನುಡಿನಮನ ಕಾರ್ಯಕ್ರಮವು ಯಕ್ಷತೂಣೀರ ಸಂಪ್ರತಿಷ್ಥಾನ (ರಿ), ಕೋಟೂರು ಇದರ ವತಿಯಿಂದ ಶ್ರೀಸ್ಕಂದ ನಿವಾಸದಲ್ಲಿ ಜರಗಿತು.
ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿ ನುಡಿನಮನ ಮಾತುಗಳನ್ನಾಡಿದರು. ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಪ್ರಬಂಧಕ ಶ್ರೀ ಸೀತಾರಾಮ ಬಳ್ಳುಳ್ಳಾಯ ಇವರು ಮಹಾಭಾಗವತರ ಕುರಿತು ಸಂಸ್ಮರಣಾ ಮಾತುಗಳನ್ನಾಡಿದರು.
ಗೋವಿಂದ ಬಳ್ಳಮೂಲೆ, ಕೃಷ್ಣ ಭಟ್ ಅಡ್ಕ, ಡಾ.ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ಇವರು ಯಕ್ಷಗಾನ ಕ್ಷೇತ್ರದ ಮಹಾಪ್ರಸ್ಥಾನವಾಗಿ ಬೆಳೆದು ನಿಂತ ಬಲಿಪ ನಾರಾಯಣ ಭಾಗವತರಿಗೆ ತಮ್ಮ ನುಡಿಗಳ ಮೂಲಕ ನಮನಗಳನ್ನು ಅರ್ಪಿಸಿದರು.
ವೃದ್ಧಾಪ್ಯದಿಂದ ಬರಲಾಗದಿದ್ದರೂ ಅಡ್ಕ ಗೋಪಾಲಕೃಷ್ಣ ಭಟ್ಟರು ದೂರವಾಣಿಯ ಮೂಲಕ ತಮ್ಮ ಸಂತಾಪವನ್ನು ಸೂಚಿಸಿದರು.
ಮೈರಾಜೆ ಮಹಾಲಿಂಗ ಭಟ್, ಶಿವಪ್ರಸಾದ್ ಮಾಫಲಮಜಲು, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ವಿಜಯಲಕ್ಷ್ಮಿ ಮುರಳಿ ಸ್ಕಂದ, ಸರಸ್ವತಿ ಗೋವಿಂದ ಬಳ್ಳಮೂಲೆ, ಪಲ್ಲವಿ ಹರಿಕೃಷ್ಣ ಪೆರಡಂಜಿ ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು
ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಹರಿಕೃಷ್ಣ ಪೆರಡಂಜಿ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


