ಸುರತ್ಕಲ್: ಶಾಸ್ತ್ರೀಯ ಸಂಗೀತದ ಆಸ್ವಾದನೆ ಮಾನಸಿಕ ನೆಮ್ಮದಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಸುರತ್ಕಲ್ ರೋಟರಿ ಕ್ಲಬ್‍ನ ಪಿ.ಶ್ರೀನಿವಾಸ ರಾವ್ ನುಡಿದರು.
ಅವರು ಮಣಿಕೃಷ್ಣ ಸ್ವಾಮಿ ಅಕಾಡಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಆಯೋಜಿಸುತ್ತಿರುವ ಉದಯರಾಗ ಸರಣಿ ಕಾರ್ಯಕ್ರಮದ ಉದಯರಾಗ – 41 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಡುಪಿಯ ಪ್ರಣವ್ ಅಡಿಗರಿಂದ ಹಾಡುಗಾರಿಕೆ ನಡೆಯಿತು. ಧನ್ಯಶ್ರೀ ಶಬರಾಯ ವಯಲಿನ್‍ನಲ್ಲಿ ಹಾಗೂ ಅಚಿಂತ್ಯ ಕೃಷ್ಣ ಪುತ್ತೂರು ಮೃದಂಗದಲ್ಲಿ ಸಹಕರಿಸಿದರು.
ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತಿನಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದ ಗೋವಿಂದ ದಾಸ ಕಾಲೇಜಿನ ಪರವಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ.ಪಿ ಯವರನ್ನು ಅಭಿನಂದಿಸಲಾಯಿತು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ. ರಾಜಮೋಹನ ರಾವ್, ಸಂಯೋಜಕ ಸತೀಶ್ ಸದಾನಂದ, ಸಚ್ಚಿದಾನಂದ ಹೊಸಬೆಟ್ಟು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ