ಗೋವಿಂದದಾಸ ಕಾಲೇಜು: ನ್ಯಾಕ್ ನಿಂದ ಎ ಗ್ರೇಡ್ ಮಾನ್ಯತೆ

Upayuktha
0

ಸುರತ್ಕಲ್: ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಸಮಗ್ರ ಅಭಿವೃದ್ಧಿಯನ್ನು ಪರಿವೀಕ್ಷಿಸಿ 3.14 ಸಿಜಿಪಿಎ ಅಂಕಗಳೊಂದಿಗೆ ಎ ಗ್ರೇಡ್ ನೀಡಿದೆ.


ತಮಿಳುನಾಡು ಶಿಕ್ಷಕ ಶಿಕ್ಷಣ ವಿಶ್ವವಿದ್ಯಾಲಯದ ಪೂರ್ವ ಕುಲಪತಿ ಪ್ರೊ.ಪಂಚನಾಥಮ್ ನಟರಾಜನ್ ರು ಅಧ್ಯಕ್ಷರಾಗಿ, ಮೇಘಾಲಯದ ನಾರ್ತ್ ಈಸ್ಟರ್ನ್ ಹಿಲ್ ವಿ.ವಿ.ಯ ನಿವೃತ್ತ ಭೌತಶಾಸ್ತ್ರಪ್ರಾಧ್ಯಾಪಕಿ ಪ್ರೊ.ಪ್ರಮೀಳ ಕೊಪರ್‍ಕರ್ ಸದಸ್ಯ ಸಂಯೋಜಕರಾಗಿ, ಪಶ್ಚಿಮ ಬಂಗಾಳದ ಮುರ್ಶಾಬಾದ್‍ನ ಬ್ರೆಹಂಪೊರ್‍ನ ಯೂನಿಯನ್ ಕ್ರಿಶ್ಚಿಯನ್ ತರಬೇತಿ ಕಾಲೇಜಿನ ಪ್ರಾಂಶುಪಾಲ ಡಾ. ಸಸಿಮ್ ಕಬಿರಾಜ್ ಠಾಕೂರ್ ಸದಸ್ಯರಾಗಿದ್ದ ಪರಿವೀಕ್ಷಣಾ ತಂಡವು ಕಾಲೇಜಿಗೆ ಮಾರ್ಚ್ 7 ಮತ್ತು 8 ರಂದು ಭೇಟಿ ನೀಡಿ ಶೈಕ್ಷಣಿಕ ಅಭಿವೃದ್ಧಿಯ ಸಮಸ್ತ ಪರಿಶೀಲನೆ ನಡೆಸಿತ್ತು.


ಉನ್ನತ ಶಿಕ್ಷಣ ಸಂಸ್ಥೆಯ ಗುಣಾತ್ಮಕ ಪ್ರಕ್ರಿಯೆ ನಿರಂತರವಾಗಿದ್ದು ಕಾಲೇಜಿನ ಶಿಕ್ಷಕ –ವಿದ್ಯಾರ್ಥಿ ಚಟುವಟಿಕೆ ಸಂಶೋಧನಾ ಕ್ಷೇತ್ರಗಳ ಕಾರ್ಯ, ಮೂಲಭೂತ ಸೌಲಭ್ಯಗಳ ಒದಗಿಸುವಿಕೆ, ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯ, ಆಡಳಿತ ಮಂಡಳಿಯ ಕಾರ್ಯ ಕ್ಷಮತೆ, ಸಾಮಾಜಿಕ ಸೇವಾ ವಿಸ್ತರಣ ಕಾರ್ಯಗಳು, ವಿಶೇಷ ಯೋಜನೆಗಳನ್ನು ಕುರಿತು ತಂಡದ ಅಧ್ಯಕ್ಷ ಪಂಚನಾಥಮ್ ನಟರಾಜನ್ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರೊ.ಪ್ರಮೀಳ ಕೊಪ್ಪರ್‍ಕರ್, ಡಾ.ಸಸಿಮ್ ಕಬಿರಾಜ್ ಠಾಕೂರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ್‍ ಆಚಾರ್ಯ ಪರಿವೀಕ್ಷಣಾ ವರದಿಯನ್ನು ಸ್ವೀಕರಿಸಿದರು. ಹಿಂದು ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು, ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ, ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹ ಸಂಯೋಜಕ ಪ್ರೊ.ನೀಲಪ್ಪ ವಿ, ಉಪಪ್ರಾಂಶುಪಾಲರಾದ ಪ್ರೊ.ರಮೇಶ್.ಭಟ್.ಎಸ್.ಜಿ., ವಿವಿಧ ವಿಭಾಗಗಳ ಸಂಯೋಜಕರಾದ ಪೊ.ಮಾರ್ಸೆಲ್ ಲೂಯಿಸ್ ಮಸ್ಕರೇನಸ್, ಪ್ರೊ.ವಾಗೀಶ ಶಾಸ್ತ್ರಿ, ಪ್ರೊ.ವಾಮನ್ ಕಾಮತ್, ಗೀತಾ, ಶೈಲಜಾ, ಡಾ.ಗಣೇಶ್ ಆಚಾರ್ಯ, ವಿದ್ಯಾ ಪಾಟೀಲ್, ಬಬಿತಾ, ಸಜನ್ ಎಂ, ಡಾ.ಕಾರ್ತಿಕ್,  ಎನ್.ಸಿ.ಸಿ ಅಧಿಕಾರಿ ಸುಧಾ ಯು ಮತ್ತಿತರರು ಉಪಸ್ಥಿತರಿದ್ದರು.


ಕಾಲೇಜಿನ ವಿಶಿಷ್ಟ ಸಾಧನೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter




Post a Comment

0 Comments
Post a Comment (0)
To Top