ಶ್ರೀನಿವಾಸ್ ವಿವಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

Upayuktha
0

ಮಂಗಳೂರು : ಶ್ರೀನಿವಾಸ್ ಯೂನಿವರ್ಸಿಟಿ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ಸಂಸ್ಥೆಯ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಬುಧವಾರ ಆಚರಿಸಲಾಯಿತು.


ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕಿ ಡಾ.ಮಂಜುಳಾ ಕೆ.ಟಿ ಮಾತನಾಡಿ, ಪುರುಷರ ಬೆಂಬಲವಿಲ್ಲದೆ ಮಹಿಳಾ ಸ್ವಾತಂತ್ರ್ಯ ಹೊಂದಲು ಸಾಧ್ಯವಿಲ್ಲ, ಸಮಾಜದಲ್ಲಿ ಲಿಂಗ ಸಮಾನತೆ ಮತ್ತು ಹಕ್ಕುಗಳನ್ನು ನಾವು ಮತ್ತು ಇತರರು ನೆನಪಿಸಿಕೊಳ್ಳುವಂತೆ ಮಾಡಲು ಮಹಿಳಾ ದಿನಾಚರಣೆ ಮುಖ್ಯವಾಗಿದೆ. ಇತರ ದೇಶಗಳಿಗಿಂತ ಮೊದಲು ಭಾರತವೇ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿದೆ. ಇಂದು ಎಲ್ಲಾ ಭಾರತೀಯರಿಗೆ ಸಂತಸದ ಕ್ಷಣವಾಗಿದೆ. ನಮಗೆ ಇಂದು ಲಿಂಗ ಸಮಾನತೆ ಇದೆಯೇ? ಇಲ್ಲ, ಹಾಗಿದ್ದಲ್ಲಿ, ನಾವು ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವುದಿಲ್ಲ, ನಮ್ಮ ಸಮಾಜದಲ್ಲಿ ಲಿಂಗ ವ್ಯತ್ಯಾಸಗಳು ಮತ್ತು ಜಾತಿ ವ್ಯತ್ಯಾಸಗಳನ್ನು ನಾವು ತಪ್ಪಿಸಬೇಕು ಎಂದು ಅವರು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್‌ನ ಡೀನ್ ಡಾ. ಲವೀನಾ ಡಿಮೆಲ್ಲೊ ಅವರು, "ಇದು ನಮ್ಮನ್ನು ಪುನಶ್ಚೇತನ  ಮಾಡಿಕೊಳ್ಳಲು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ದಿನವಾಗಿದೆ ಎಂದರು.


ಡಾ.ವಿದ್ಯಾ ಎನ್, ಡಾ.ಪ್ರದೀಪ್ ಎಂ.ಡಿ.,. ಪ್ರೊ.ಸುಶ್ಮಿತಾ, ಪ್ರೊ. ಜಾಯ್ಸನ್ ಪ್ರೆಂಕಿ  ಕಾರ್ಡೋಜಾ, ಪ್ರೊ.ಶ್ರೀರಾಜ್ ಆಚಾರ್ಯ, ಸಂಶೋಧನಾ ವಿದ್ವಾಂಸರಾದ ಎಂ.ಅಶ್ವನಿ, ಎಂ. ಇಂದು ನಾಯರ್, ಕು.ದೃಶ್ಯ, ಶಿವರಾಜ್ ಹಾಗೂ ಸಮಾಜ ವಿಜ್ಞಾನ ಮತ್ತು ಮಾನವಿಕ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿ ಅಜಿಲ್ ಜೋಶೆಪ್ ಸ್ವಾಗತಿಸಿ, ಸ್ವಾತಿ ವಂದಿಸಿದರು. ಅನಾಮಿಕಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top