ಗಡಿನಾಡ ಕನ್ನಡತಿ ನೇತೃತ್ವದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ
ಕಾಸರಗೋಡು: ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶನಿವಾರ (ಮಾ.4) ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಗಣಪತಿ ಹವನ, ನವಕ, ತ್ರಿಕಾಲ ಪೂಜೆ, ದೀಪ ಪ್ರತಿಷ್ಠೆ, ಭಜನೆ ಮುಂತಾದ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ಬಹಳ ಭಕ್ತಿಪೂರ್ವಕವಾಗಿ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಎರಡೂ ಹೊತ್ತು ದೇವರ ಪ್ರಸಾದವಾಗಿ ಅನ್ನ ಸಂತರ್ಪಣೆ ನಡೆಯಿತು.
ಈ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8.00 ರಿಂದ ರಾತ್ರಿ 12.00 ರ ತನಕ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವವು ಸಂಸ್ಥೆಯ ಅಪ್ರತಿಮ ಕಲಾವಿದರ ಭಾಗವಹಿಸುವಿಕೆಯಿಂದ ವೈವಿಧ್ಯಪೂರ್ಣವಾಗಿ ಜರುಗಿತು. ಈ ಸುಂದರ ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ನೆರವೇರಿಸಿದರು.
ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಜ್ಞಾನ ರೈ, ಶ್ವೇತಾ ಕೆ, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್ ಗಟ್ಟಿ, ಧನ್ವಿ ಬಿ ಕೆ ಬಾಡೂರ್, ಅಹನಾ ಎಸ್ ರಾವ್, ಶ್ರದ್ಧಾ ಎ ಎಸ್, ಮೇಧಾ ಎ ಎಸ್, ಭಾನ್ವಿ ಕುಲಾಲ್ ಕಾವ್ಯ ಎನ್ ಅಡಿಗ, ವರ್ಷಾ ಶೆಟ್ಟಿ ಬಂಬ್ರಾಣ, ಸನುಷಾ ಸುಧಾಕರನ್, ಆರಾಧ್ಯ, ಅಂಕಿತ, ಶ್ರೀಮಯಿ, ತನ್ವಿ ಶೆಟ್ಟಿ, ಅಕ್ಷರ ಎಂ ಬಲ್ಲಾಳ್, ತೇಜಸ್ ಹೊಳ್ಳ ಕೆ, ಮೃದುಲ, ಶಿವಾನಿ, ರೀತಿಕ, ಅಶ್ವಿತ, ಅನ್ವಿತ, ಉಷಾ ಸುಧಾಕರನ್, ವರ್ಷಾ ಬಿ, ಹಾರ್ದಿಕ್, ಗಗನ್, ಮಾನ್ವಿ, ಚುಕ್ಕಿ ವಿಟ್ಲ, ಧನ್ವಿತ್ ಕೃಷ್ಣ, ಲಾವಣ್ಯ, ಕೃತ್ತಿಕಾ, ಚಹನಾ, ವಿಷ್ಣು ಸುಧಾಕರನ್, ಹರೀಶ್ ಪಂಜಿಕಲ್ಲು, ಕನಿಹ, ಪ್ರೇರಣ, ನಿರೀಕ್ಷಾ ಸಿ ಎಚ್, ಲಿಖಿತಾ, ಗನ್ಯ ಸಿ ನಿರೀಕ್ಷಾ ಎಂ, ವಿಷ್ಣು ಸುಧಾಕರನ್, ಪ್ರತೀಕ್ಷಾ ರೈ, ಭಾಗ್ಯಲಕ್ಷ್ಮಿ, ಅರ್ಚನಾ, ಲಾವಣ್ಯ, ವಂಶಿ ರೈ, ಪ್ರತೀಕ್ಷಾ, ವೈಷ್ಣವಿ ಎ, ದೀಕ್ಷಿತಾ, ಭೂಮಿಕಾ, ಶ್ರೀದೇವಿ, ಲಿಶಿತ, ಗನ್ಯ ಶ್ರೀ, ದೀಪಕ್, ಕುಶನ್ ಕುಮಾರ್, ತೇಜಸ್, ರಾಹುಲ್ ಹೀಗೆ ಸುಮಾರು 60 ಕ್ಕೂ ಅಧಿಕ ಅಪ್ರತಿಮ ಕಲಾವಿದರು ತಮ್ಮ ತಮ್ಮ ಪ್ರತಿಭಾ ಕೌಶಲ್ಯವನ್ನು ಉಣಬಡಿಸಿ ನೆರೆದಿರುವ ಸಹಸ್ರಾರು ಕಲಾಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಿದರು.
ಭಾಗವಹಿಸಿದ ಎಲ್ಲಾ ಕಲಾವಿದರಿಗೆ ದೇವಸ್ಥಾನದ ವತಿಯಿಂದ ದೇವಳದ ಆಡಳಿತ ಮೊಕ್ತೇಸರರಾದ ಕೆ.ಕೆ ಶೆಟ್ಟಿ ದಂಪತಿಗಳು ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಿದರು. ದೇವಳದ ಅಧ್ಯಕ್ಷ ಮಂಜುನಾಥ ಆಳ್ವ ಹಾಗೂ ಗೋಪಾಲಕೃಷ್ಣ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


