ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 2 ಭಾನುವಾರ ನಡೆಯುವ 80ನೆಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 04 ಗಂಟೆಗೆ ನಡೆಯುವ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಹವ್ಯಕ ವಿಶೇಷ ಪ್ರಶಸ್ತಿ 2022-23: ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ ಎಂದು ಮಹಾಸಭೆ ಪ್ರಕಟಣೆ ತಿಳಿಸಿದೆ.
ಹವ್ಯಕ ವಿಭೂಷಣ
1. ಪೆರುವೋಡಿ ನಾರಾಯಣ ಭಟ್, ತೆಂಕುತಿಟ್ಟು ಯಕ್ಷಗಾನ
ಹವ್ಯಕ ಭೂಷಣ-
1. ಡಾ| ಲಕ್ಷ್ಮೀಶ್ ಸೋಂದಾ, ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರು
2. ಶ್ರೀ ಜಿ. ಎಸ್. ಹೆಗಡೆ ಸಪ್ತಕ - ಸಂಗೀತ ಕ್ಷೇತ್ರ
ಹವ್ಯಕ ಶ್ರೀ
1. ಡಾ. ಕಿಶನ್ ಭಾಗವತ್ - ವೈದ್ಯಕೀಯ & ಸಾಮಾಜಿಕ ಸೇವೆ
2. ಲೆ|ಕ| ವಿವೇಕ್ ಸಾಯ, ಭಾರತೀಯ ಭೂ ಸೇನಾ
3. ಕು. ಅರ್ಪಿತಾ. ವಿ. ಎಂ, ಕ್ರೀಡೆ
ಹವ್ಯಕ ಸೇವಾಶ್ರೀ
1.ಶ್ರೀ ನಾರಾಯಣ ಶಾನುಭೋಗ್
ವಿಶ್ರಾಂತ ನಿರ್ದೇಶಕರು ಹವ್ಯಕ ಅಧ್ಯಯನ ಕೇಂದ್ರ
ಪ್ರಶಸ್ತಿ ಆಯ್ಕೆ ಹೇಗೆ?
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ವಿರುವುದಿಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ