ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾನಿಟರಿ ಮ್ಯೂಸಿಯಂ- ಇದು ವಸ್ತುವಿನಿಮಯ ದಿಂದ ಎಲೆಕ್ಟ್ರಾನಿಕ್ ವಹಿವಾಟುಗಳವರೆಗೆ - ಹಣವು ವಿಕಾಸಗೊಂಡ ಬಗೆಯನ್ನು ಪ್ರದರ್ಶಿಸುತ್ತದೆ. ಈ ಮ್ಯೂಸಿಯಂನ ಹೊರಗೆ ಬಚ್ಚೆ ಲಾಲ್ ಸಹಾನಿ ಅವರು ದೇಶದ ಹೊಸ ಕರೆನ್ಸಿ ಇ-ರೂಪಾಯಿಯನ್ನು ಪರೀಕ್ಷಿಸುತ್ತಿದ್ದಾರೆ.
45 ವರ್ಷ ವಯಸ್ಸಿನ ಹಣ್ಣು ಮಾರಾಟಗಾರ ಬಚ್ಚೇಲಾಲ್, ಭಾರತದಲ್ಲಿ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ನು ಬಳಸಿದ ಮೊದಲ ಚಿಲ್ಲರೆ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದಾರೆ, ಇದು ಸಗಟು ಅಥವಾ ಅಂತರಬ್ಯಾಂಕ್ ವಹಿವಾಟುಗಳ ಪ್ರಯೋಗದ ನಂತರ ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಈ ಸೌಲಭ್ಯವನ್ನು ಪ್ರಾರಂಭಿಸಲಾಯಿತು.
ಅಂದಿನಿಂದ ಇಲ್ಲಿಯ ವರೆಗೆ, ಸಹಾನಿ ಇ-ರೂಪಾಯಿ ಮೂಲಕ ಕೇವಲ 30 ಖರೀದಿಗಳನ್ನು ಮಾತ್ರ ದಾಖಲಿಸಿದ್ದಾರೆ. Google Pay ಮತ್ತು PayTM ಜೊತೆಗೆ ನೀಡುವ ಹಲವಾರು ಡಿಜಿಟಲ್ ಪಾವತಿ ಆಯ್ಕೆಗಳಲ್ಲಿ ಇದೂ ಒಂದಾಗಿದೆ. ಆದರೆ ಇದು ಗ್ರಾಹಕರನ್ನು ಸೆಳೆಯುತ್ತದೆ ಎಂದು ಅವರು ಭರವಸೆ ಹೊಂದಿದ್ದಾರೆ. ಅವರಲ್ಲಿಗೆ ಬರುವ ಹೆಚ್ಚಿನ ಗ್ರಾಹಕರು ಇನ್ನೂ ನಗದು ವ್ಯವಹಾರವನ್ನೇ ಮಾಡುತ್ತಿದ್ದಾರೆ.
"ಎಷ್ಟೋ ಸಲ ಗೂಗಲ್ ಪೇ ಮತ್ತು ಪೇಟಿಎಂ ಬಳಸುವಾಗ ನಾವು ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತೇವೆ. ಆದರೆ ಇ-ರುಪೀ ಇಂಟರ್ನೆಟ್ ಇಲ್ಲದಿದ್ದರೂ ಸಹ ಕಾರ್ಯನಿರ್ವಹಿಸುತ್ತದೆ" ಎಂದು ಸಹಾನಿ ಹೇಳುತ್ತಾರೆ.
"ಜನರಿಗೆ ಇ-ರೂಪಾಯಿ ಬಗ್ಗೆ ಇನ್ನೂ ತಿಳಿದಿಲ್ಲ ಏಕೆಂದರೆ ಅದು ಇನ್ನೂ ಅದರ ಪ್ರಾಯೋಗಿಕ ಹಂತದಲ್ಲಿದೆ. ಇದು ಜನಪ್ರಿಯವಾಗುತ್ತದೆ, ಆದರೆ ಅದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ," ಎಂದು ತಮ್ಮನ್ನು ಮಾತನಾಡಿಸಿದ ಸುದ್ದಿಗಾರರ ಜತೆ ಸಹಾನಿ ಹೇಳಿದರು.
CBDC ಎನ್ನುವುದು ದೇಶದ ಫಿಯೆಟ್ ಅಥವಾ ಅಧಿಕೃತ ಕರೆನ್ಸಿಯ ಡಿಜಿಟಲ್ ರೂಪವಾಗಿದ್ದು, ಇದನ್ನು ಅಂತರಬ್ಯಾಂಕ್ ಮತ್ತು ಚಿಲ್ಲರೆ ವಹಿವಾಟುಗಳಿಗೆ ಬಳಸಬಹುದು.
ಅಟ್ಲಾಂಟಿಕ್ ಕೌನ್ಸಿಲ್ ಥಿಂಕ್-ಟ್ಯಾಂಕ್ ಪ್ರಕಾರ, 100 ಕ್ಕೂ ಹೆಚ್ಚು ದೇಶಗಳು CBDC ಯನ್ನು ಸಂಶೋಧಿಸುತ್ತಿವೆ, ಅಭಿವೃದ್ಧಿಪಡಿಸುತ್ತಿವೆ ಅಥವಾ ಪ್ರಾಯೋಗಿಕ ಚಲಾವಣೆ ಮಾಡುತ್ತಿವೆ. ಬಹಾಮಾಸ್, ಜಮೈಕಾ ಮತ್ತು ನೈಜೀರಿಯಾ ಸೇರಿದಂತೆ ಹಲವು ದೇಶಗಳು CBDC ಅನ್ನು ಪ್ರಾರಂಭಿಸಿವೆ.
CBDCಯು ಪ್ರಸ್ತುತ ಹಣದ ರೂಪಗಳನ್ನು ಬದಲಿಸುವ ಬದಲು ಪೂರಕವಾಗಿಸುವ ಗುರಿಯನ್ನು ಹೊಂದಿದೆ ಮತ್ತು "ಪಾರದರ್ಶಕತೆ ಮತ್ತು ಕಡಿಮೆ ವೆಚ್ಚದ ಕಾರ್ಯಾಚರಣೆಯ ಮೂಲಕ ಬಹಳಷ್ಟು ಹೊಸ ಭರವಸೆಗಳನ್ನು ಮೂಡಿಸಿದೆ'' ಎಂದು RBI ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ಸಿಬಿಡಿಸಿ ಪರಿಕಲ್ಪನೆಯಲ್ಲಿ ತಿಳಿಸಿದೆ.
"ಇ-ರೂಪಾಯಿ ವ್ಯವಸ್ಥೆಯು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುತ್ತದೆ, ಹಣಕಾಸಿನ ಸೇರ್ಪಡೆಯನ್ನು ಹೆಚ್ಚಿಸುತ್ತದೆ ಮತ್ತು ವಿತ್ತೀಯ ಮತ್ತು ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ" ಎಂದು ಅದು ಹೇಳಿದೆ.
ಕ್ರಿಪ್ಟೋಕರೆನ್ಸಿಯ ಜನಪ್ರಿಯತೆ ಮತ್ತು ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಆರ್ಥಿಕ ನಿರ್ಬಂಧಗಳು CBDC ಗಳನ್ನು ಪರೀಕ್ಷಿಸಲು ರಾಷ್ಟ್ರಗಳನ್ನು ಪ್ರೇರೇಪಿಸಿದೆ ಎಂದು ಅಟ್ಲಾಂಟಿಕ್ ಕೌನ್ಸಿಲ್‌ನ ಜಿಯೋ ಎಕನಾಮಿಕ್ಸ್ ಸೆಂಟರ್‌ನ ಹಿರಿಯ ನಿರ್ದೇಶಕ ಜೋಶ್ ಲಿಪ್ಸ್ಕಿ ಹೇಳಿದರು.
"ಕ್ರಿಪ್ಟೋಕರೆನ್ಸಿಯ ಏರಿಕೆ ಭಾರತದಂತಹ ದೇಶಗಳು ವಿತ್ತೀಯ ಸಾರ್ವಭೌಮತ್ವದ ಬಗ್ಗೆ ಚಿಂತೆ ಮೂಡಿಸಿದೆ. ವಿಶೇಷವಾಗಿ ಡಾಲರ್-ಬೆಂಬಲಿತ ಸ್ಟೇಬಲ್ ಕಾಯಿನ್‌ಗಳಿಗೆ ಪರ್ಯಾಯವನ್ನು ನೀಡಲು ಸಿಬಿಡಿಸಿ ನೋಡುತ್ತಿದೆ" ಎಂದು ಲಿಪ್ಸ್ಕಿ ಹೇಳಿದರು.
"ಭಾರತದ ಪೈಲಟ್ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಇದು ಈ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳಲು ಇತರ ದೇಶಗಳನ್ನು ಉತ್ತೇಜಿಸಿದೆ" ಎಂದು ಅವರು ಹೇಳಿದರು.
ಹಣಕಾಸಿನ ಸೇರ್ಪಡೆ
ಜಾಗತಿಕವಾಗಿ, ನಗದು ಹಣದ ಬಳಕೆ ಕುಸಿಯುತ್ತಿದೆ. ಇದು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಗದು ವಹಿವಾಟಿನ ಕುಸಿತ ಮತ್ತು ಡಿಜಿಟಲ್ ವಹಿವಾಟಿನ ಏರಿಕೆ ಅತ್ಯಂತ ವೇಗವಾಗಿ ಬೆಳೆಯಿತು. ವಿಶ್ವ ಬ್ಯಾಂಕ್ ಪ್ರಕಾರ, ಸುಮಾರು 1.7 ಶತಕೋಟಿ ವಯಸ್ಕರು ಇನ್ನೂ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.
ಮೊಬೈಲ್ ಫೋನ್‌ಗಳಲ್ಲಿ ಇ-ವ್ಯಾಲೆಟ್‌ಗಳ ಮೂಲಕ ಪ್ರವೇಶಿಸಿದ CBDC ಗಳು ಹಣಕಾಸಿನ ಒಳಗೊಳ್ಳುವಿಕೆಯನ್ನು ಸುಧಾರಿಸಬಹುದು. ಏಕೆಂದರೆ ಅವುಗಳು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬಹುದು "ವಿಶೇಷವಾಗಿ ಮಾರುಕಟ್ಟೆಯ ಗಾತ್ರ ಮತ್ತು ಲಾಭದ ಸಾಮರ್ಥ್ಯವು ಖಾಸಗಿ ವಲಯವನ್ನು ಪ್ರೇರೇಪಿಸಲು ಸಾಕಷ್ಟಿಲ್ಲದಿದ್ದಾಗ" ಎಂದು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ ವರದಿ ಹೇಳಿದೆ.
ಕೇಂದ್ರೀಯ ಬ್ಯಾಂಕ್‌ಗಳಿಗೆ ಇರುವ ದೊಡ್ಡ ಸವಾಲೆಂದರೆ ಅಕ್ರಮ ಹಣ ವರ್ಗಾವಣೆ ಮತ್ತು ಇತರ ಹಣಕಾಸಿನ ಅಪರಾಧಗಳನ್ನು ತಡೆಯುವುದಾಗಿದೆ. ಏಕೆಂದರೆ ನಗದು ಹಣದ ಚಲಾವಣೆಯನ್ನು ಹೆಚ್ಚಾಗಿ ಪತ್ತೆಮಾಡಲಾಗದು. ಆದರೆ CBDC ಗಳಿಗೆ ಪ್ರತಿ ವಹಿವಾಟಿಗೂ ನಿರ್ದಿಷ್ಟ ID ಅಗತ್ಯವಿರುತ್ತದೆ. ಹೀಗಾಗಿ ಪತ್ತೆ ಹಚ್ಚುವುದು ಸುಲಭ.
ಯಾವುದೇ ಡಿಜಿಟಲ್ ಕರೆನ್ಸಿಯು ಅನಾಮಧೇಯವಾಗಿ ಇರುವುದಿಲ್ಲ. ಆಪಲ್ ಪೇ ಅಥವಾ ಡೆಬಿಟ್ ಕಾರ್ಡ್- ಯಾವುದನ್ನು ಬಳಸಿದರೂ ಬಳಕೆದಾರನನ್ನು ಟ್ರ್ಯಾಕ್ ಮಾಡಬಹುದು. ಅದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಹಣವನ್ನು ಮಾತ್ರ ಬಳಸುವುದು, ಆಗ ಪತ್ತೆ ಮಾಡುವುದು ಬಹಳ ಕಷ್ಟ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ