ಉಜಿರೆ : ಮಾತೃಶ್ರೀ ಡಾ ಹೇಮಾವತಿ ವಿ.ಹೆಗ್ಗಡೆಯವರಿಗೆ ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ

Upayuktha
0

ಉಜಿರೆ/ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ನೀಡುವ ಪ್ರತಿಷ್ಠಿತ ಸಾಧನಾ ರಾಜ್ಯ ಪ್ರಶಸ್ತಿಯನ್ನು ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಗಾಗಿ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರಿಗೆ ಸೋಮವಾರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಛೇರಿಯ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.ಹಿರಿಯ ಸಾಹಿತಿಗಳು ಇರಾ ನೇಮು ಪೂಜಾರಿವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘಟಕ, ಉದ್ಯಮಿ ಗುರುಪ್ರಸಾದ್ ಕಡಂಬಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು,ತುಲು ಲಿಪಿ ಶಿಕ್ಷಕಿ, ಕವಯತ್ರಿ ಶ್ರೀಮತಿ ಗೀತಾ ಲಕ್ಷ್ಮೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿದರು.


'ಕ್ಷೇತ್ರದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭವಾದಾಗಿನಿಂದ ರಾಜ್ಯವ್ಯಾಪಿಯಾಗಿ ಮಹಿಳೆಯರ ಜೀವನ ಗುಣಮಟ್ಟ ಅಭಿವೃದ್ಧಿಗಾಗಿ  ಸಮಗ್ರವಾಗಿ ಕೆಲಸ ಮಾಡಿದ್ದೇವೆ. ಈ ಸಾಧನೆಯ ಹಿಂದೆ ಯೋಜನೆಯ ಕಾರ್ಯಕರ್ತರ ಶ್ರಮವೂ ದೊಡ್ಡ ಪಾಲು. ಸೇವಾ ಮನೋಭಾವವೇ ಸಾಧನೆಯ ಸಾರ್ಥಕತೆ. ಸಾಧನಾ ರಾಜ್ಯ ಪ್ರಶಸ್ತಿಯನ್ನು ಅತ್ಯಂತ ಆನಂದದಿಂದ  ಸ್ವೀಕರಿಸಿದ್ದೇನೆ' ಎಂದು ಡಾ ಹೇಮಾವತಿ ಹೆಗ್ಗಡೆಯವರು ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತ ಪಡಿಸಿದರು.


ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ  ಹಾಗೂ ಸಾಧನಾ ರಾಜ್ಯ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಸಂಚಾಲಕಿ ಶ್ರೀಮತಿ ಲತಾ ಕೃಷ್ಣದಾಸ್, ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಮಂಜುನಾಥ್, ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶಕುಂತಲಾ ಬೆಳ್ಮಣ್, ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹೇಮಾವತಿ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್, ಅಳಿಯ ಎ.ಎಸ್ ಅಮಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.ರೆಡ್ ಎಫೆಮ್ ಆರ್ಜೆ ಪ್ರಸನ್ನ ಪ್ರಸನ್ನ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top