ಅಡ್ಯಾರ್ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಪೂರ್ಣ: ಶಾಸಕ ಡಾ. ಭರತ್ ಶೆಟ್ಟಿ

Upayuktha
0

ಮಂಗಳೂರು: 20 ಕೋಟಿ ಆನುದಾನದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವಾಂಗೀಣ ಮೂಲಸೌಕರ್ಯ ಅಭಿವೃದ್ಧಿಯನ್ನು ಮೊದಲ ಹಂತದಲ್ಲಿ ಮಾಡಲಾಗಿದೆ. ಮುಂದಿನ ಬಾರಿ ನಿಮ್ಮ ಆಶೀರ್ವಾದಿಂದ ಶಾಸಕನಾಗಿ ಬಂದು ಆರೋಗ್ಯ, ಶಿಕ್ಷಣ ಹಾಗೂ ಮತ್ತಿತರ ಎರಡನೇ ಹಂತದ ಅಭಿವೃದ್ಧಿ ಮಾಡುವ ಯೋಜನೆಯಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು.

ಅವರು ಅಡ್ಯಾರ್ ಕಟ್ಟೆಯಲ್ಲಿ  ಬಿಜೆಪಿ ಆಯೋಜಿಸಿದ್ದ ಸಭೆ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಅಭಿವೃದ್ಧಿಯನ್ನು ಯಾವುದೇ ಜಾತಿ ನೋಡಿ ಮಾಡಿಲ್ಲ. ಎಲ್ಲಾ ವಾರ್ಡ್, ಪಂಚಾಯತ್ ವಾರ್ಡ್‍ಗಳಲ್ಲಿ ರಸ್ತೆಯಾಗಿದೆ. ಓಣಿ ಕೇರಿಗಳು ವಿಸ್ತರಣೆಯಾಗಿದೆ. ಗದ್ದೆಯಲ್ಲಿ ಓಡಾಡುತ್ತಿದ್ದ  ದಿನಗಳು ದೂರವಾಗಿದೆ ಎಂದರು.

ಪ್ರಧಾನಿ ಮೋದಿ ಅವರ ಆದರ್ಶವನ್ನು ಪಾಲಿಸಿಕೊಂಡು ಬಂದು ನೆರೆ,ಕೊರೊನಾ ಸಹಿತ ಪ್ರಾಕೃತಿಕ ವಿಕೋಪದ 3 ವರ್ಷ ಹೊರತು ಪಡಿಸಿ ಕೇವಲ 2 ವರ್ಷದಲ್ಲಿ 2 ಸಾವಿರ ಕೋ.ಅನುದಾನ ತಂದು ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ. ಭ್ರಷ್ಟಾಚಾರದ ಆರೋಪವನ್ನು ಕಾಂಗ್ರೆಸ್  ಮಾಡಿದೆ. ಆದರೆ ಅಭಿವೃದ್ಧಿಯ ಮೂಲಕ ಉತ್ತರಿಸಿದ್ದೇನೆ ಎಂದರಲ್ಲದೆ ರಾಷ್ಟ್ರೀಯತೆ ಹಾಗೂ ಹಿಂದುತ್ವ ನನ್ನ ಉಸಿರು. ನನ್ನ ಸನಾತನ ಧರ್ಮವನ್ನು ಪಾಲಿಸಿಕೊಂಡು ಎಲ್ಲೆಡೆ ಅಭಿವೃದ್ಧಿಯನ್ನು  ಮಾಡಿದ್ದೇನೆ. ಹಾಗೆಂದು ನಾನು ಅನ್ಯಮತೀಯ ದ್ವೇಷಿಯಲ್ಲ. ರಾಜಕೀಯ ಉದ್ದೇಶಕ್ಕಾಗಿ ನನ್ನನ್ನು ಬೇರೆ ಮತಗಳಿಂದ ದೂರವಿಡುವ ಸಂಚು ನಡೆದಿದೆ ಎಂದರು.

ಪ್ರಮುಖರಾದ ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು, ಮಹಾಬಲ ಅಡ್ಯಾರ್, ಪ್ರಸಾದ್ ಸಾಮಾನಿ, ಸುಜಿತ್ ಅಡ್ಯಾರ್,ಪ್ರಸನ್ನ, ಗಣೇಶ್ ರೈ, ನಳಿನಿ, ವಿಶ್ವನಾಥ್ ಶೆಟ್ಟಿ, ಕೃಷ್ಣ, ಶ್ರವಣ್, ರವಿರಾಜ್ ಚೌಟ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top