ಮಾ.7: ಶ್ರೀನಿವಾಸ್‌ ವಿವಿಯಲ್ಲಿ ಹೋಳಿ ಸಂಭ್ರಮ- ರಂಗ್‌ 2K23

Upayuktha
0

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಮಂಗಳವಾರ ಹೋಳಿ ಹಬ್ಬದ ಸಂಭ್ರಮ 'ರಂಗ್‌-2K23' ಅನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಪ್ರವಾಸೋದ್ಯಮ ಸಂಸ್ಥೆ, ಏವಿಯೇಶನ್ ಸ್ಟಡೀಸ್‌ ಸಂಸ್ಥೆ ಮತ್ತು ಇಂಟೀರಿಯರ್ ಡಿಸೈನ್‌ ವಿಭಾಗಗಳು ಒಟ್ಟಾಗಿ ಇದನ್ನು ಆಯೋಜಿಸಿವೆ.


ಶ್ರೀನಿವಾಸ್ ವಿವಿಯ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್‌ ಅವರು ಅಧ್ಯಕ್ಷತೆ ವಹಿಸಲಿದ್ದು, ಕುಲಪತಿ ಡಾ. ಎ. ಶ್ರೀನಿವಾಸ ರಾವ್‌, ಟ್ರಸ್ಟೀ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್‍‌ ರಾವ್‌, ಪ್ರೊ. ಇಆರ್ ಶ್ರೀಮತಿ ಎ. ಮಿತ್ರಾ ಎಸ್ ರಾವ್‌, ಉಪ ಕುಲಪತಿ ಡಾ. ಪಿ.ಎಸ್ ಐತಾಳ್‌ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ರಿಜಿಸ್ಟ್ರಾರ್‍‌ ಡಾ. ಅನಿಲ್ ಕುಮಾರ್‍‌, ರಿಜಿಸ್ಟ್ರಾರ್‍‌ (ಮೌಲ್ಯಮಾಪನ) ಡಾ. ಶ್ರೀನಿವಾಸ ಮಯ್ಯ, ರಿಜಿಸ್ಟ್ರಾರ್‍‌ (ಅಭಿವೃದ್ಧಿ) ಡಾ. ಅಜಯ್ ಕುಮಾರ್‍‌, ರಿಜಿಸ್ಟ್ರಾರ್ (ಅಕಾಡೆಮಿಕ್ ಅಂಡ್ ಡೆವಲಪ್‌ಮೆಂಟ್‌) ಆದಿತ್ಯ ಕುಮಾರ್ ಮಯ್ಯ, ಹೋಟೆಲ್ ಮ್ಯಾನೇಜ್ಮೆಂಟ್‌ ಮತ್ತು ಪ್ರವಾಸೋದ್ಯಮ ಸಂಸ್ಥೆಯ ಡೀನ್ ಪ್ರೊ. ಸ್ವಾಮಿನಾಥನ್‌ ಎಸ್‌ ಹಾಗೂ ಇನ್‌ಸ್ಟಿಟ್ಯೂಟ್ ಆಫ್‌ ಏವಿಯೇಶನ್ ಸ್ಟಡೀಸ್‌ನ ಡೀನ್ ಡಾ. ಪವಿತ್ರಾ ಕುಮಾರಿ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ವಿವಿಧ ಹೊಣೆಗಳನ್ನು ಹೊತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top