ಧರ್ಮವೇ ಮೈವೆತ್ತು ನಿಂತರೆ ಅದು ಶ್ರೀರಾಮನಂತೆ ಕಾಣಿಸುತ್ತದೆ: ತೇಜಶಂಕರ ಸೋಮಯಾಜಿ

Upayuktha
0

 ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ರಾಮನವಮಿ ಆಚರಣೆ


ಪುತ್ತೂರು : ಭಾರತದ ಸಂಸ್ಕೃತಿಯಲ್ಲಿ ನಮ್ಮದೇ ಆದ ವೇಳಾಪಟ್ಟಿ ಇದೆ, ಅದುವೇ ಪಂಚಾಂಗ. ಒಂದು ವರ್ಷವನ್ನು ಸಂವತ್ಸರ ಎಂದು ಕರೆಯುತ್ತಾರೆ. ಚೈತ್ರ ಮಾಸದ ನವಮಿಯಂದು ರಾಮ ಹುಟ್ಟಿದ್ದರಿಂದ ಆ ದಿನ ರಾಮನವಮಿಯನ್ನು ಆಚರಣೆ ಮಾಡುತ್ತೇವೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜ ಶಂಕರ ಸೋಮಯಾಜಿ ಹೇಳಿದರು.

   

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಲಾದ ರಾಮನವಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. Upayuktha News


ನಾವು ಯೋಚಿಸುವಾಗ  ಕೆಟ್ಟದರಲ್ಲೂ  ಏನು ಒಳ್ಳೆಯದಿದೆ ಎಂಬುವುದನ್ನು ಯೋಚಿಸಬೇಕು. ಅಂತೆಯೇ ಜೀವನದಲ್ಲಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪರೀಕ್ಷೆ ಎಂಬುದು ಮುಖ್ಯ. ಅಂತಹ ಪರೀಕ್ಷೆಗಳನ್ನು ಎದುರಿಸಿದ ದಿವ್ಯ ಪುರುಷ ಶ್ರೀರಾಮ.  ಧರ್ಮವೇ  ಮನುಷ್ಯ ರೂಪದಲ್ಲಿ ಇದ್ದರೆ ಅದು ರಾಮನಾಗಿ ಕಾಣಿಸುತ್ತದೆ. ನಾವು ಕಷ್ಟಕಾಲದಲ್ಲಿಯೂ ಕೂಡ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ರಾಮನ ಆದರ್ಶದ ಕುರಿತು ತಿಳಿಸಿದರು.

    

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಾತಿನಲ್ಲಿ ಹೇಳುವುದು ಸುಲಭ. ಆದರೆ ಅದನ್ನು ಆಚರಣೆಗೆ ತರುವುದು ಕಷ್ಟ. ತಂದೆಯ ವಾಕ್ಯವನ್ನು ಪರಿಪಾಲನೆ ಮಾಡಿದವನು ಶ್ರೀರಾಮ. ಹಾಗಾಗಿ ಆತ ಮರ್ಯಾದ ಪುರುಷೋತ್ತಮ ಎಂದು ತಿಳಿಸಿದರು.

       

ವಿದ್ಯಾರ್ಥಿಗಳಿಂದ ರಾಮ ಸಂಕೀರ್ತನೆ ನೆರವೇರಿತು. ಶಿಕ್ಷಕಿ ಶ್ರುತಿ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top